ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್‌ನಲ್ಲಿ ಭಾರಿ ಕೋಲಾಹಲ, ಸರ್ಕಾರ ನಿರಾಕರಣೆ

ಕ್ರಿಸ್‌ಮಸ್‌ ರಜೆ ರದ್ದತಿಯ ಸಿಬಿಎಸ್‌ಸಿ ಸುತ್ತೋಲೆ ವಿವಾದ
Last Updated 15 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ಪ್ರಯುಕ್ತ ಕ್ರಿಸ್‌ಮಸ್‌ ಹಬ್ಬದಂದು (ಡಿ.25ರಂದು) ‘ಉತ್ತಮ ಆಡ­ಳಿತ ದಿನ’ ಆಚರಿಸಲು ನವೋ­ದಯ ವಿದ್ಯಾ­ಲಯ ಸಮಿತಿ ಹೊರ­ಡಿಸಿರುವ ಸುತ್ತೋಲೆ ಸೋಮ­ವಾರ ಸಂಸತ್‌ನಲ್ಲಿ ಭಾರಿ ಕೋಲಾ­ಹಲಕ್ಕೆ ಎಡೆಮಾಡಿತು.

ಕೇಂದ್ರ ಮಾನವ ಸಂಪ­ನ್ಮೂಲಗಳ ಅಭಿ­­ವೃದ್ಧಿ ಸಚಿವಾ­ಲಯ ವಿವಾದದ ಕೇಂದ್ರ­­­ಬಿಂದು­ವಾಗಿ ಟೀಕೆಗೆ ಗುರಿ­ಯಾಯಿತು. ಸಂಸತ್‌ನ ಎರಡೂ ಸಭೆ­ಗಳ ಒಳಗೆ ಮತ್ತು ಹೊರಗೆ ವಿಷಯ ಪ್ರಸ್ತಾಪವಾಗಿ ಸರ್ಕಾರ­ವನ್ನು ಇಕ್ಕಟ್ಟಿಗೆ ಸಿಲುಕಿಸಿ, ತಕ್ಷಣ ಸ್ಪಷ್ಟೀಕರಣ ನೀಡು­ವಂತೆ ಮಾಡಿತು. 

ನವೋದಯ ಸಮಿತಿ ಸೂಚನೆ

ಸೂಕ್ತ ಸಿಬಿಎಸ್‌ಸಿ ಸುತ್ತೋಲೆ ಬರುವ ತನಕ ಕ್ರಿಸ್‌ಮಸ್‌ ದಿನದ ‘ಉತ್ತಮ ಆಡಳಿತ ದಿನಾ­ಚರಣೆ­’ಯನ್ನು ತಡೆಹಿಡಿಯುವಂತೆ ತನ್ನ ಎಲ್ಲ ಪ್ರಾದೇಶಿಕ ಅಧಿಕಾರಿಗಳಿಗೆ ನವೋದಯ ವಿದ್ಯಾಲಯ ಸಮಿತಿ ಸೋಮವಾರ ರಾತ್ರಿ ಸೂಚಿಸಿದೆ.  ಈ ಸಂಬಂಧ ಸಿಬಿಎಸ್‌ಸಿ ಇನ್ನಷ್ಟೇ ತನ್ನ ಸುತ್ತೋಲೆ ಕಳುಹಿಸಬೇಕಿದ್ದು, ಆವರೆಗೆ ಯಾವುದೇ ಪ್ರಕ್ರಿಯೆ ನಡೆಸದಂತೆ ಎಲ್ಲ ಪ್ರದೇಶ­ಗಳ ಜಿಲ್ಲಾಧಿಕಾರಿಗಳಿಗೆ ಸಮಿ­ತಿ ಆಯುಕ್ತ ಜಿ.ಎಸ್‌. ಬೊತ್ಯಾಲ್‌ ತಿಳಿಸಿದ್ದಾರೆ.

ನವೋದಯ ವಿದ್ಯಾಲಯ ಸೇರಿದಂತೆ ದೇಶದ ಎಲ್ಲ ಶಾಲೆಗಳಿಗೂ ಡಿಸೆಂಬರ್‌ 25ರಂದು ಸಾರ್ವ­ತ್ರಿಕ ರಜೆ ಇರುವುದ­ರಿಂದ ಮುಚ್ಚಿರುತ್ತವೆ ಎಂದು ಸರ್ಕಾರ ಸ್ಪಷ್ಟಪಡಿ­ಸಿ­ತು. ಆದಿನ ಕ್ರಿಸ್‌­ಮಸ್‌ ರಜೆ ಇದ್ದರೂ, ಉತ್ತಮ ಆಡಳಿತ ದಿನ ಆಚ­ರಣೆಗೆ ಶಾಲೆಗಳು ತೆರೆದಿರು­ತ್ತವೆ ಎಂಬ ಮಾಧ್ಯಮ ವರದಿ­ಗಳನ್ನು ತಳ್ಳಿಹಾಕಿತು.

ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ­ಸಭೆ ಮತ್ತು ಲೋಕ­ಸಭೆಯಲ್ಲಿ ಭಾರಿ ಗದ್ದಲ ಉಂಟಾ­ಯಿತು. ಇದ­ರಿಂದ ರಾಜ್ಯ­­ಸಭೆ­ಯನ್ನು ಮೂರು ಬಾರಿ ಮುಂದೂ­ಡ­ಬೇಕಾ­ಯಿತು. ಲೋಕಸಭೆ­ಯಲ್ಲಿ ಸಚಿವ ವೆಂಕಯ್ಯ ನಾಯ್ಡು ಉತ್ತರಿಸಿ, ಕ್ರಿಸ್‌­ಮಸ್‌ ದಿನ ಶಾಲೆ­ಗಳು ತೆರೆದಿ­ರ­ಬೇಕೆಂದು ಸಿಬಿ­ಎಸ್‌ಸಿ ಸುತ್ತೋಲೆ ಕಳು­ಹಿಸಿಲ್ಲ ಎಂದರು.

ನವೋ­ದಯ ಶಾಲೆಗಳಿಗೆ ಈಗಾಗಲೇ ಕ್ರಿಸ್‌­ಮಸ್‌ ರಜೆ ನೀಡಲಾಗಿದೆ.  ವಸತಿ ಶಾಲೆ­ಗಳು ತೆರೆದಿರಲಿದ್ದು ಅಲ್ಲಿನ ಮಕ್ಕಳು ಡಿ.25ರಂದು ನಡೆಯುವ ಆನ್‌ಲೈನ್‌ ಪ್ರಬಂಧ ಸ್ಪರ್ಧೆ­ಯಲ್ಲಿ ಮುಕ್ತವಾಗಿ ಭಾಗ­ವಹಿಸ­ಬಹುದು. ಇದು ಐಚ್ಛಿಕ­ವಾಗಿದ್ದು ಅವರ ಇಚ್ಛೆಗೆ ವಿರುದ್ಧವಾಗಿ ಯಾವುದೇ ಒತ್ತಡ ಹೇರುವ ಪ್ರಶ್ನೆಯೇ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT