ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ ಅಧಿವೇಶನ ಸುಗಮ ಕಲಾಪಕ್ಕೆ ಯತ್ನ: ನಖ್ವಿ

Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಸೋಮವಾರ­ದಿಂದ ಆರಂಭವಾಗಲಿರುವ ಸಂಸ ತ್ತಿನ ಚಳಿಗಾಲ ಅಧಿವೇಶನ ಸುಗಮ­ವಾಗಿ ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್‌ ನಖ್ವಿ ಹೇಳಿದ್ದಾರೆ.

ವಿರೋಧಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಲಾಪ ಸಕಾರಾತ್ಮಕ ಮತ್ತು ಅಡೆತಡೆಯಿಲ್ಲದೆ ನಡೆಯು­ವಂತೆ ನೋಡಿಕೊಳ್ಳಲಾಗುವುದು ಎಂದು  ಶನಿವಾರ ನಡೆದ ಕಾರ್ಯ­ಕ್ರಮ­­ವೊಂದ ರಲ್ಲಿ ಸುದ್ದಿಗಾರರಿಗೆ ಹೇಳಿದರು.

ಭಾನುವಾರ ಸರ್ವಪಕ್ಷಗಳ ಸಭೆ ಕರೆಯಲಾಗಿದ್ದು ಅಧಿವೇಶನದಲ್ಲಿ ಸುಗಮ ಕಲಾಪ ನಡೆಯುವಂತೆ ಸಹಕರಿಸುವಂತೆ ಮನವಿ ಮಾಡಲಾ­ಗು­ವುದು ಎಂದೂ ನಖ್ವಿ ತಿಳಿಸಿದರು.

ಟಿಎಂಸಿ ಗೈರು: ಸಂಸತ್ತಿನ ಚಳಿಗಾಲದ ಅಧಿವೇಶನ ಯಾವುದೇ ಅಡೆತಡೆ­ಯಿ­ಲ್ಲದೆ   ನಡೆಸಲು ಸಹಕಾರ ನೀಡು­ವಂತೆ ವಿನಂತಿಸಲು ಸಂಸದೀಯ ವ್ಯವ­ಹಾರ ಸಚಿವ ರಾಜೀವ್‌ ಪ್ರತಾಪ್‌ ರೂಡಿ ಅವರು ಭಾನುವಾರ ಕರೆದಿ­ರುವ ಸರ್ವ ಪಕ್ಷಗಳ ಸಭೆಗೆ ತೃಣ­ಮೂಲ ಕಾಂಗ್ರೆಸ್‌ ಹಾಜರಾಗದಿ­ರಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT