ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತ ಕಡ್ಡಾಯಕ್ಕೆ ಒತ್ತಡ ಹೇರಿಲ್ಲ: ಸಂಸ್ಕೃತ ಭಾರತಿ

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ತೃತೀಯ ಭಾಷೆಯಾಗಿ ಸಂಸ್ಕೃತ ಬದಲಿಗೆ ಜರ್ಮನ್‌ ಕಲಿಸು­ವುದಕ್ಕೆ ವಿರೋಧ ವ್ಯಕ್ತಪಡಿ­ಸುತ್ತಿರುವ ಸಂಸ್ಕೃತ ಭಾರತಿ ಸಂಘಟನೆ, ಈ ಬಗ್ಗೆ ಉಂಟಾಗಿರುವ ಗೊಂದಲ ಪರಿಹರಿ­ಸುವ ಪ್ರಯತ್ನ ಮಾಡಿದೆ. ವಿಷಯಕ್ಕೆ ಸಂಬಂಧಿಸಿ ಉದ್ದೇಶ­ಪೂರ್ವ­ಕವಾಗಿ ಗೊಂದಲ ಮೂಡಿ­ಸುವ ಪ್ರಯತ್ನ ನಡೆದಿದೆ ಎಂದು ಸಂಸ್ಥೆ ಹೇಳಿದೆ.

‘ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡ­ಳಿಯ ವ್ಯಾಪ್ತಿಯ ಶಾಲೆಗ­ಳಲ್ಲಿ ಕಡ್ಡಾ­ಯ­ವಾಗಿ ಸಂಸ್ಕೃತ ಕಲಿಸ­ಬೇಕು ಎಂದು ಒತ್ತಾಯ ಮಾಡು­ತ್ತಿಲ್ಲ. ತ್ರಿಭಾಷಾ ಕಲಿಕೆ ಪದ್ಧತಿ­ಯನ್ನು ಅನುಸ­ರಿ­ಸಬೇಕು, ಸಂವಿ­ಧಾನದ 8ನೇ ಪರಿಚ್ಛೇದದ 22 ಭಾಷೆಗಳಲ್ಲಿ ಯಾವು­ದಾದರೊಂದನ್ನು ಕಲಿಸಬೇಕು ಎಂಬು­ದಷ್ಟೇ ನಮ್ಮ ಒತ್ತಾಯ’ ಎಂದು ‘ಸಂಸ್ಕೃತ ಭಾರತಿ’ಯ ಸಂಘಟನಾ ಕಾರ್ಯದರ್ಶಿ ದಿನೇಶ್‌ ಕಾಮತ್‌ ಹೇಳಿದ್ದಾರೆ.

ಹಾಗಿದ್ದರೂ, ಒಂದರಿಂದ ಹತ್ತನೇ ತರಗತಿವರೆಗೆ  ತೃತೀಯ ಭಾಷೆಯಾಗಿ ಸಂಸ್ಕೃತ ಕಲಿಸಲು ಶಾಲೆಗಳು ಆದ್ಯತೆ ನೀಡಬೇಕು. ಈ ಭಾಷೆಯು ಭಾರತದ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಮೌಲ್ಯಗಳನ್ನು ಕಲಿತುಕೊಂಡು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಮಕ್ಕಳಿಗೆ ಇದು ನೆರವಾಗುತ್ತದೆ ಎಂದು ಕಾಮತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT