ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಹಿತೆ ಉಲ್ಲಂಘನೆ: 1559 ಪ್ರಕರಣ

Last Updated 15 ಏಪ್ರಿಲ್ 2014, 20:33 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯ 1559 ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯದ ಮುಖ್ಯ ಚುನಾವಣಾಧಿ­ಕಾರಿ ಅನಿಲ್‌ಕುಮಾರ್‌ ಝಾ ಪತ್ರಿಕಾಗೋಷ್ಠಿ­ಯಲ್ಲಿ ತಿಳಿಸಿದರು.

ಮತದಾನದ ದಿನವಾದ ಏ.17­ರಂದು ಸರ್ಕಾರಿ ರಜೆ ಘೋಷಿಸ­ಲಾಗಿದೆ. ಎಲ್ಲ ಬಗೆಯ ಖಾಸಗಿ ಸಂಸ್ಥೆಗಳು ಸಿಬ್ಬಂದಿಗೆ ವೇತನಸಹಿತ ರಜೆ ನೀಡುವ ಮೂಲಕ ಮತ ಚಲಾಯಿಸಲು ಅವಕಾಶ ಮಾಡಿಕೊ­ಡಬೇಕು ಎಂದು ಸೂಚಿಸಿರುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಹಿರಂಗ ಪ್ರಚಾರ ಅಂತ್ಯವಾ­ಗಿರು­ವುದರಿಂದ ಕಣದಲ್ಲಿರುವ ಅಭ್ಯರ್ಥಿ­ಗಳು, ರಾಜಕೀಯ ಪಕ್ಷಗಳ ಮುಖಂ-­ಡರು ಪತ್ರಿಕಾಗೋಷ್ಠಿ ನಡೆಸಿ ಮತ ನೀಡು­ವಂತೆ ಮನವಿ ಮಾಡಲು ಅವ­ಕಾಶ ಇಲ್ಲ. ಎಲೆಕ್ಟ್ರಾನಿಕ್‌ ಮಾಧ್ಯಮ­ಗಳಲ್ಲಿ ಚರ್ಚೆಗಳಿಗೂ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬುಧವಾರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ಅವಕಾಶ ಇದೆ. ಆದರೆ, ಸಾರ್ವಜನಿಕರಿಗೆ ತೊಂದರೆ ಆಗದಂತೆ 3–4 ಜನರು ಮಾತ್ರ ಪ್ರಚಾರದಲ್ಲಿ ಭಾಗವಹಿಸಬೇಕು ಎಂದರು.

ಎಲ್ಲಿ ಎಷ್ಟು ವಶ?
ಎಚ್‌.ಡಿ.ಕೋಟೆ ₨ 8.55 ಲಕ್ಷ
ಲಿಂಗಸಗೂರು ₨ 27 ಲಕ್ಷ
ಬೀದರ್ ₨ 4.23 ಲಕ್ಷ
ಬಳ್ಳಾರಿ ₨ 4 ಲಕ್ಷ
ಧಾರವಾಡ ₨ 1.29 ಲಕ್ಷ
ಇದುವರೆಗೆ ಒಟ್ಟು ₨ 21.95 ಕೋಟಿ ವಶ
*₨ 2.82 ಕೋಟಿ ಮೌಲ್ಯದ 44,924 ಲೀಟರ್‌ ಮದ್ಯವಶ
*₨ 2.80 ಕೋಟಿ ಮೌಲ್ಯದ ಸೀರೆ, ವಾಚ್‌, ಕುಕ್ಕರ್‌ ಇತ್ಯಾದಿ ಸಾಮಗ್ರಿಗಳ ವಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT