ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಕಾರ್ಖಾನೆಗಳಿಗೆ ರಿಯಾಯಿತಿ

Last Updated 26 ನವೆಂಬರ್ 2014, 20:23 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ವರ್ಷ ಕಬ್ಬು ಪೂರೈಸಿದ ರೈತರ ಬಾಕಿ ಹಣ ಪಾವತಿ­ಸುವುದಕ್ಕಾಗಿ ಸಕ್ಕರೆ ಕಾರ್ಖಾನೆಗಳಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಅನೇಕ ರಿಯಾಯಿತಿಗಳನ್ನು ಘೋಷಿಸಿದೆ. ಇದರಿಂದ ಖಜಾನೆಗೆ ₨ 300 ಕೋಟಿಗೂ ಹೆಚ್ಚು ಆದಾಯ ಖೋತಾ ಆಗುವ ಸಾಧ್ಯತೆ ಇದೆ. 

ಕಳೆದ ಸಾಲಿನಲ್ಲಿ ಪ್ರತಿ ಟನ್‌ ಕಬ್ಬಿಗೆ ₨ 2,500 ನಿಗದಿಪಡಿಸಲಾಗಿತ್ತು. ಆದರೆ ಈ ಮೊತ್ತವನ್ನು ಕಾರ್ಖಾನೆ­ಗಳು ಇನ್ನೂ ಪೂರ್ಣವಾಗಿ

ಕಂತಿನಲ್ಲಿ ಬಾಕಿ ಪಾವತಿ
ಹೋದ ವರ್ಷ ಪೂರೈಸಿದ ಪ್ರತಿ ಟನ್‌ ಕಬ್ಬಿಗೆ  ಕೇಂದ್ರ ಸರ್ಕಾರ ನಿಗದಿಪಡಿಸಿರುವಂತೆ ₨ 2,100 ರ ದರದಲ್ಲಿ ಈ ತಿಂಗಳ 30 ರೊಳಗೆ ಕಡ್ಡಾಯವಾಗಿ ಹಣ ಪಾವತಿ ಮಾಡಬೇಕು. ಇದೇ 30 ರಿಂದಲೇ ಕಾರ್ಖಾನೆಗಳು ಕಬ್ಬು ಅರೆಯುವ ಕೆಲಸ ಆರಂಭಿಸಬೇಕು.  ಒಂದು ತಿಂಗಳ ನಂತರ ₨ 200 ನೀಡಬೇಕು. ಅಲ್ಲಿಗೆ ಟನ್‌ ಕಬ್ಬಿಗೆ ₨ 2,300 ಪಾವತಿಸಿದಂತಾಗುತ್ತದೆ. ಉಳಿದ ₨ 200 ಪಾವತಿಗೆ ಎರಡು ವರ್ಷ ಸಮಯ ನೀಡಲಾಗುತ್ತದೆ. ಅಲ್ಲದೆ ಮಾರಾಟ ಮತ್ತು ರಸ್ತೆ ತೆರಿಗೆ ವಸೂಲಿಯಿಂದ ಮೂರು ವರ್ಷ ವಿನಾಯಿತಿ ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.ರೈತರಿಗೆ ಪಾವ­ತಿಸಿಲ್ಲ. ಈ ವಿಷಯದಲ್ಲಿ ರಿಯಾ­ಯಿತಿ ನೀಡಬೇಕೆಂದು ಪಟ್ಟು ಹಿಡಿದು ಈ ಸಲ ಕಬ್ಬು ಅರೆಯುವ ಕೆಲಸ ಇನ್ನೂ ಆರಂಭಿಸಿಲ್ಲ. ಆದ್ದರಿಂದ ಸಚಿವ ಎಚ್‌.ಎಸ್‌.­ಮಹದೇವ ಪ್ರಸಾದ್‌ ಅವರು ಕಾರ್ಖಾನೆ ಮಾಲೀಕರ ಜತೆ ಮಾತುಕತೆ ನಡೆಸಿ, ಬುಧವಾರ ರಿಯಾಯಿತಿಗಳನ್ನು ಘೋಷಿಸಿದರು.

‘ತೆರಿಗೆ ವಿನಾಯಿತಿಯಿಂದ ಕಾರ್ಖಾನೆ­­­ಗಳಿಗೆ ಟನ್‌ ಕಬ್ಬಿಗೆ ಸರಾಸರಿ ₨ 78 ಲಾಭ ಆಗಲಿದೆ.  ಈ ಪ್ರಕಾರ ಲೆಕ್ಕ ಹಾಕಿದರೂ ಸುಮಾರು ₨ 300 ಕೋಟಿ ಸರ್ಕಾರಕ್ಕೆ ಖೋತಾ ಆಗ­ಲಿದೆ. ಈ ಹಿಂದೆ ಕೂಡ ಇದೇ ರೀತಿಯ ವಿನಾಯಿತಿ ನೀಡಲಾಗಿತ್ತು’ ಎಂದರು.
‘ಒಂದು ವೇಳೆ ಕಾರ್ಖಾನೆಗಳು ಈ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸದಿದ್ದರೆ ಅಂತಹ ಕಾರ್ಖಾನೆಗಳನ್ನು ಸರ್ಕಾರವೇ ತನ್ನ ವಶಕ್ಕೆ ತೆಗೆದು­ಕೊಂಡು, ಕಬ್ಬು ಅರೆಯುವ ಕೆಲಸ ಆರಂಭಿಸಲಿವೆ’ ಎಂದು ವಿವರಿಸಿದರು.

ಕಾರ್ಖಾನೆಗಳಿಂದ ರೈತರಿಗೆ ₨ 1,725 ಕೋಟಿ ಬರಬೇಕಿದೆ. ಇಷ್ಟು ಹಣ ನೀಡಲು ತಮ್ಮಿಂದ ಸಾಧ್ಯ ಇಲ್ಲ ಎಂದು ಕಾರ್ಖಾನೆ ಮಾಲೀಕರು ತಿಳಿಸಿದ್ದ ಕಾರಣ, ಪರ್ಯಾಯ ಸೂತ್ರ ಕಂಡುಹಿಡಿಯಲಾಗಿದೆ. ಇದನ್ನೂ ಒಪ್ಪದಿದ್ದರೆ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳುವುದು ಖಚಿತ ಎಂದರು.

ಮಂಡ್ಯದ ಮೈಷುಗರ್‌ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗಿದೆ. ಸದ್ಯ­ದಲ್ಲೇ 30 ಮೆಗಾ­ವಾಟ್‌ ವಿದ್ಯುತ್‌ ಉತ್ಪಾದನೆ ಕೂಡ ಆರಂಭವಾಗಲಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಟನ್‌ ಕಬ್ಬಿಗೆ ₨ 2,200
ಕಬ್ಬಿಗೆ ಬೆಲೆ ನಿಗದಿಪಡಿಸುವ ಹೊಸ ಕಾನೂನು ರಾಜ್ಯದಲ್ಲಿ ಜಾರಿಗೆ ಬಂದಿದ್ದು ಶೇ 9.5ರಷ್ಟು ಇಳುವರಿಯ ಟನ್‌ ಕಬ್ಬಿಗೆ ಈ ವರ್ಷ ₨ 2,200 ದರ ನಿಗದಿ ಮಾಡಲಾಗಿದೆ ಎಂದು ಅವರು ಹೇಳಿದರು.

ಹೆಚ್ಚು ಇಳುವರಿ ಬರುವ ಕಬ್ಬಿಗೆ ಹೆಚ್ಚಿನ ಬೆಲೆ ಸಿಗಲಿದೆ. ಸರ್ಕಾರ ನಿಗದಿ­ಪಡಿಸಿರುವ ದರವನ್ನು ಎರಡು ಕಂತು­ಗಳಲ್ಲಿ ಪಾವತಿ ಮಾಡಲು ಅವಕಾಶ ನೀಡಲಾಗಿದೆ ಎಂದರು.

‘ವಿದ್ಯುತ್‌ ಮಾರಾಟ, ಕಾಕಂಬಿ ಮತ್ತು ಇತರ ಉಪ ಉತ್ಪನ್ನಗಳಿಂದ ಬರುವ ಆದಾಯವನ್ನು ರೈತರಿಗೂ ಹಂಚಿಕೆ ಮಾಡಲಾಗುವುದು. ಈ ಮೂಲ­ಗಳಿಂದ ಎಷ್ಟು ಆದಾಯ ಬಂದಿದೆ ಎಂಬುದು ಕಾರ್ಖಾನೆ ನಿಂತ ನಂತರ ಗೊತ್ತಾಗಲಿದೆ. ಅಂದರೆ, ಮಾರ್ಚ್‌ ವೇಳೆಗೆ ಟನ್‌ ಕಬ್ಬಿಗೆ ನಿಗ­ದಿ­ಪಡಿಸಿರುವ ₨ 2,200 ಜತೆಗೆ ಹೆಚ್ಚುವ­ರಿಯಾಗಿ ಎಷ್ಟು ಸಿಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT