ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಕಾರ್ಖಾನೆ ವಶಕ್ಕೆ: ಸಚಿವ ಎಚ್ಚರಿಕೆ

ಕಬ್ಬು ನುರಿಸಲು ಅಂತಿಮ ಗಡುವು
Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಸಕ್ಕರೆ ಕಾರ್ಖಾನೆಗಳು ತಕ್ಷಣ ಕಬ್ಬು ನುರಿಸುವುದನ್ನು ಆರಂಭಿಸ­-ದಿದ್ದರೆ, ಸರ್ಕಾರವೇ ಕಾರ್ಖಾನೆಗಳನ್ನು ವಶಕ್ಕೆ ಪಡೆದು, ಕಬ್ಬು ನುರಿಸಲು ವ್ಯವಸ್ಥೆ ಮಾಡಲಿದೆ’ ಎಂದು ಸಕ್ಕರೆ ಸಚಿವ ಎಚ್‌.ಎಸ್‌. ಮಹಾದೇವ ಪ್ರಸಾದ್‌ ಎಚ್ಚರಿಕೆ ನೀಡಿದರು.

ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಆಗ್ರಹಿಸಿ ಕಬ್ಬು ಬೆಳೆಗಾರರು ಸೋಮ­ವಾರ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಗೋವಿಂದ ಕಾರಜೋಳ ಹಾಗೂ ರೈತ ಮುಖಂಡ­ರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು, ಈ ಎಚ್ಚರಿಕೆ ನೀಡಿದರು.

‘ರಾಜ್ಯದ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜತೆ ಇದೇ 25 ರಂದು ಬೆಳಿಗ್ಗೆ 10ಕ್ಕೆ ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು, ಕಾರ್ಖಾನೆಗಳನ್ನು ತಕ್ಷಣ ಪುನರಾರಂಭಿಸುವಂತೆ ಸಭೆ­ಯಲ್ಲಿ ಸೂಚಿಸಲಾಗುವುದು. ಒಂದು ವೇಳೆ ಕಬ್ಬು ನುರಿಸಲು ಒಪ್ಪದಿದ್ದರೆ, ತಕ್ಷಣ ಕಾರ್ಖಾನೆಗಳನ್ನು ಸರ್ಕಾರ ವಶಕ್ಕೆ ಪಡೆದು, ಆಡಳಿತಾಧಿಕಾರಿ­ಗ­ಳನ್ನು ನೇಮಕ ಮಾಡುವ ಮೂಲಕ ಕಬ್ಬು ನುರಿಸುವುದನ್ನು ಪ್ರಾರಂಭಿಸಲಿದೆ’ ಎಂದು ಸಚಿವರು ಭರವಸೆ ನೀಡಿದರು.

ವಶಕ್ಕೆ ಸಿದ್ಧತೆ
ರೈತರ ಮನವಿ ಸ್ವೀಕರಿಸಿದ ಜಿಲ್ಲಾಧಿ­ಕಾರಿ ಪಿ.ಎ. ಮೇಘಣ್ಣವರ, ‘ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಸಚಿ­ವರು ಪ್ರಯತ್ನಿಸುತ್ತಿದ್ದು, ಒಪ್ಪದಿ­ದ್ದಲ್ಲಿ ಅಂತಹ ಕಾರ್ಖಾನೆಗಳನ್ನು ವಶಪಡಿಸಿ­ಕೊಳ್ಳಲು ಸಿದ್ಧತೆ ನಡೆದಿದೆ’ ಎಂದರು.
ಸಚಿವರು ಮತ್ತು ಜಿಲ್ಲಾಧಿಕಾರಿ ನೀಡಿದ ಭರವಸೆಯಿಂದ ಸಂತುಷ್ಟರಾದ ಸಾವಿರಾರು ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆಯನ್ನು ಕೈಬಿಟ್ಟರು.

ತಿದ್ದುಪಡಿಗೆ ಆಗ್ರಹ
ರೈತರ ಒಪ್ಪಿಗೆ ಇಲ್ಲದೇ ರಾಜ್ಯ ಸರ್ಕಾರ ಎಸ್‌ಎಪಿ ಕಾಯ್ದೆಗೆ ತಿದ್ದು­ಪಡಿ ಮಾಡುವ ಮೂಲಕ ಎಕ್ಸ್‌­ಗೇಟ್‌ ಪದ್ಧತಿ  ಸೇರ್ಪಡೆ ಮಾಡಿರು­ವುದನ್ನು ಗೋವಿಂದ ಕಾರ­ಜೋಳ ಖಂಡಿಸಿದರು.
ತಕ್ಷಣ ಕಾಯ್ದೆಗೆ ಮರು ತಿದ್ದುಪಡಿ ಮಾಡಿ, ಎಕ್ಸ್‌ಗೇಟ್‌ ಬದಲು ಎಕ್ಸ್‌­ಫೀಲ್ಡ್‌ ಪದ್ಧತಿ ಅಳವಡಿಸಬೇಕು. ಇಲ್ಲ­ವಾದರೆ ಬೆಳಗಾವಿಯಲ್ಲಿ ಅಧಿ­ವೇಶನ ನಡೆಸಲು ಬಿಜೆಪಿ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ರಾಷ್ಟ್ರೀಕರಣಕ್ಕೆ ಒತ್ತಾಯ
ಸರ್ಕಾರ ಮತ್ತು ಕೋರ್ಟ್‌ ಆದೇಶ ಉಲ್ಲಂಘಿಸುತ್ತಿರುವ ಹಾಗೂ ಪ್ರತಿ ವರ್ಷ ರೈತರಿಗೆ ತೊಂದರೆ ನೀಡುತ್ತಿರುವ ಸಕ್ಕರೆ ಕಾರ್ಖಾನೆ­ಗಳನ್ನು ರಾಷ್ಟ್ರೀಕರಣ­ಗೊಳಿ­ಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರ­ಬೂರು ಶಾಂತಕುಮಾರ್ ಆಗ್ರಹಿ­ಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT