ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಸಿಹಿಯಲ್ಲ ಆರೋಗ್ಯಕ್ಕೆ

Last Updated 9 ಫೆಬ್ರುವರಿ 2016, 19:38 IST
ಅಕ್ಷರ ಗಾತ್ರ

ವಿಶ್ವ ಆರೋಗ್ಯ ಸಂಸ್ಥೆಯು ನಾವು ಸೇವಿಸುತ್ತಿರುವ ಆಹಾರದಲ್ಲಿ ಸಕ್ಕರೆ ಅಂಶವನ್ನು ಕಡಿತಗೊಳಿಸಲು ಶಿಫಾರಸು ಮಾಡಿದೆ. ನಮಗೆ ಅರಿವಿಲ್ಲದಂತೆಯೇ ಸಕ್ಕರೆ ಅಂಶವನ್ನು ಮಿತಿಯ ಗೆರೆ ಮೀರಿ ಸೇವಿಸುತ್ತಿದ್ದೇವೆ. ಬೆಳಗಿನ ಫ್ಲೇಕ್ಸ್‌ನಿಂದ ಸಂಜೆ ತಿನ್ನುವ ಕುರುಕಲುವರೆಗೂ ಅಥವಾ ಕುರಕಲಿನೊಂದಿಗೆ ನಂಜಿಕೊಳ್ಳುವ ಸಾಸ್‌, ಕೆಚಪ್‌ವರೆಗೂ ಸಕ್ಕರೆ ತನ್ನ ಸವಿಯನ್ನು ಪಸರಿಸಿದೆ. ನಮ್ಮ ಶಕ್ತಿಯ ಶೇ 11ರಷ್ಟನ್ನು ಸಕ್ಕರೆ ಮೂಲಕ ಪಡೆದಯುವುದನ್ನು ಕಡಿಮೆಗೊಳಿಸಬೇಕು. ಆಗ ಆರೋಗ್ಯಕರ ಸಮತೋಲಿತ ಆಹಾರ ನಿಮ್ಮದಾಗುತ್ತದೆ ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸು ಆಗಿದೆ.

ಸಂಸ್ಕರಿತ ಆಹಾರವನ್ನು ನೀವು ಸೇವಿಸುತ್ತಿದ್ದಲ್ಲಿ ಅಪಾಯಕಾರಿ ಮಟ್ಟದಷ್ಟು ಸಕ್ಕರೆಯನ್ನು ದೇಹಕ್ಕೆ ರವಾನಿಸುತ್ತಿರುವಿರಿ ಎಂದೇ ಅರ್ಥ. ಒಂದುವೇಳೆ ಒಂದು ಟೀಸ್ಪೂನ್‌ ಸಕ್ಕರೆ ಸೇವಿಸಿದರೆ ಅದು ನಾಲ್ಕು ಗ್ರಾಮ್‌ ಮಾತ್ರ ಆಗಿರುತ್ತದೆ. ಸಕ್ಕರೆಯುಕ್ತ ಚಹಾ ಅಥವಾ ಕಾಫಿ ಬದಲಿಗೆ ತಂಪುಪಾನೀಯವನ್ನು ಸೇವಿಸಿದರೆ ಹತ್ತು ಪಟ್ಟು ಸಕ್ಕರೆ ಹೊಟ್ಟೆ ಸೇರುತ್ತದೆ. ಒಂದು ಚಮದಲ್ಲಿ 4 ಗ್ರಾಂ ಸಕ್ಕರೆಯ ಅಂದಾಜಿರುತ್ತದೆ.  ಒಂದು ಕ್ಯಾನ್‌ನಲ್ಲಿ 40 ಗ್ರಾಂ ಸಕ್ಕರೆ ಬಳಸಲಾಗಿರುತ್ತದೆ. ಒಟ್ಟಿಗೆ 10 ಚಮಚ ಸಕ್ಕರೆ ಸೇವಿಸಿದಂತೆ, ಈ ಲೆಕ್ಕಾಚಾರ ನಿಮಗೆ ಗೊತ್ತಿದೆಯೇ?

ನಮ್ಮ ದಿನದ ಒಟ್ಟು ಆಹಾರ ಸೇವನೆಯನ್ನು ಗಮನದಲ್ಲಿಟ್ಟುಕೊಂಡರೆ 25 ಗ್ರಾಂನಷ್ಟು ಸಕ್ಕರೆ ಸೇವಿಸುವುದು ಒಪ್ಪಿತವಾಗಿದೆ. ಈಗಿರುವ ಆಹಾರ ಸೇವನೆಯನ್ನು ಪರಿಗಣಿಸಿದರೆ ನಾವು ಒಟ್ಟಾರೆ ಸೇವಿಸುವ ಎನರ್ಜಿ ಯುನಿಟ್‌ಗಳಲ್ಲಿ ಶೇ 10ರಷ್ಟು ಕಡಿಮೆ ಮಾಡಿಕೊಳ್ಳಬೇಕು. ಸಕ್ಕರೆ ರಹಿತವಾದ ಆಹಾರದ ಮೂಲಕ ಶಕ್ತಿ ಯೂನಿಟ್‌ಗಳನ್ನು ಗಳಿಸಬಹುದಾಗಿದೆ.

ಹೆಚ್ಚಾಗಿ ಸಕ್ಕರೆ ಪ್ರಮಾಣದ ದೇಹವನ್ನು ಸೇರುವುದು ಸಂಸ್ಕರಿತ ಆಹಾರದ ಮೂಲಕ. ಯಾವ ಪೇಯ ಅಥವಾ ಸಿದ್ಧ ಆಹಾರಗಳಲ್ಲಿ ‘ಓಸ್‌’ಗಳಿಂದ ಕೊನೆಗೊಳ್ಳುವ ಅಂಶವಿದ್ದರೆ ಎಚ್ಚರವಹಿಸುವುದು ಅತ್ಯಾವಶ್ಯ. ಗ್ಲುಕೋಸ್‌, ಸುಕ್ರೋಸ್‌, ಫ್ರುಕ್ಟೋಸ್‌, ಲ್ಯಾಕ್ಟೋಸ್‌ ಮತ್ತು ಮಾಲ್ಟೋಸ್‌ನಿಂದ ಕೊನೆಗಳ್ಳುವ ಅಂಶಗಳಿದ್ದರೆ ಅವುಗಳನ್ನು ಎಚ್ಚರದಿಂದ ಬಳಸಿರಿ. ಇವೆಲ್ಲವೂ ಜೇನು, ಭೂತಾಳೆ, ಮೊಲಾಸಿಸ್ ಮತ್ತು ಜೋಳ, ಅಕ್ಕಿಯ ಸಿರಪ್ ಇತ್ಯಾದಿ ವಿವಿಧ ರೂಪಗಳಲ್ಲಿರುವ ಸಕ್ಕರೆಯಾಗಿವೆ.

ಬಹುತೇಕ ಜನರು ಸಕ್ಕರೆ ರಹಿತ ಆಹಾರ ಸೇವಿಸುವುದು ಸಮತೋಲಿತ ಆಹಾರವೆಂದು ಪರಿಗಣಿಸುತ್ತಾರೆ. ಹೀಗೆ ವಿವಿಧ ರೂಪಗಳಲ್ಲಿ ಸಕ್ಕರೆಯನ್ನು ಸೇವಿಸುವವರು ಇತರರಿಗಿಂತ ಹೆಚ್ಚು ಬೊಜ್ಜನ್ನು ಹೊಂದಿರುತ್ತಾರೆ. ಸ್ಥೂಲಕಾಯದವರಾಗಿರುತ್ತಾರೆ. ಸ್ಥೂಲಕಾಯದೊಂದಿಗೆ ರಕ್ತದ ಏರೊತ್ತಡ, ನಿದ್ರಾಹೀನತೆ, ದಂತಕ್ಷಯ, ಮಧುಮೇಹ ಮುಂತಾದ ರೋಗಗಳಿಗೆ ಆಹ್ವಾನ ನೀಡುತ್ತಾರೆ. ಮಕ್ಕಳಲ್ಲಿಯೂ ಹೆಚ್ಚಿನ ಸಕ್ಕರೆಅಂಶವನ್ನು ಸೇವಿಸುವುದರಿಂದ ಅವರ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

ಇವೆಲ್ಲವೂ ಮುಂದೆ ಹೃದ್ರೋಗಕ್ಕೆ ಕಾರಣವಾಗುತ್ತದೆ. ಈಗಿರುವ ಲೆಕ್ಕದಲ್ಲಿಯೇ ಸಕ್ಕರೆಯನ್ನು ಸೇವಿಸುತ್ತಿದ್ದಲ್ಲಿ ಮಧ್ಯ ವಯಸ್ಸು ದಾಟುವುದರಲ್ಲಿಯೇ ಮೂಳೆ ಸವೆತಕ್ಕೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಹೊಟ್ಟೆಯ ಸುತ್ತಲಿನ ಕೊಬ್ಬು ಹೆಚ್ಚುತ್ತದೆ. ಹೊಟ್ಟೆಯ ಸುತ್ತಳಂತೆ ಹೆಚ್ಚಿದಂತೆ ಪಾದಗಳಲ್ಲಿ ನೋವು ಕಂಡು ಬರುತ್ತದೆ.

ದೈನಂದಿನ ಸಕ್ಕರೆಯ ಸೇವನೆ ಕಡಿಮೆಗೊಳಿಸುವುದು ಸುಲಭವಾಗಿದೆ. ಸಿಟ್ರಸ್‌ ಹಣ್ಣುಗಳನ್ನು ಸೇವಿಸುವುದು, ಕಾಫಿಯಲ್ಲಿ ದಾಲ್ಚಿನ್ನಿ ಬೆರೆಸುವುದು, ಸಪ್ಪೆ ಹಾಲು ಕುಡಿಯಲಾಗದಿದ್ದಲ್ಲಿ ಅದಕ್ಕೂ ಚಕ್ಕೆಯನ್ನು ಬೆರೆಸುವುದರಿಂದ ಸಿಹಿಯ ಸ್ವಾದ ಬರುತ್ತದೆ. ಜೊತೆಗೆ ಬೊಜ್ಜನ್ನೂ ಕರಗಿಸುತ್ತದೆ. ಸಕ್ಕರೆ ಸೇವನೆ ಕಡಿಮೆ ಮಾಡಿ, ಸಕ್ಕರೆ ಅಂಶಗಳ ಸೇವನೆ ಕಡಿಮೆ ಮಾಡಿ. ಹೀಗೆ ಮಾಡಲು ಬ್ರೆಡ್‌ ಬದಲು ಗೋಧಿ ಬ್ರೆಡ್‌ ಬಳಸಿ. ಕೆಂಪಕ್ಕಿ ಅನ್ನ, ನವಣೆಕ್ಕಿ ಅನ್ನವನ್ನು ಬಳಸಿ. ಓಟ್ಸ್‌ ಸೇವಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT