ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಜತೆ ಮೋದಿ ಇಂದು ಸಭೆ

Last Updated 1 ಜೂನ್ 2014, 20:35 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್‌):  ನೂರು ದಿನಗಳ ಕಾರ್ಯ­ಸೂಚಿಯ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡುವ ಸಲುವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಸಹೋ­ದ್ಯೋಗಿ­ಗ­ಳೊಂದಿಗೆ ಸೋಮವಾರ ಸಭೆ ನಡೆಸಲಿದ್ದಾರೆ.

‘ನೂರು ದಿನಗಳಿಗೆ ಹತ್ತು ಅಂಶದ ಕಾರ್ಯಸೂಚಿ’ಯನ್ನು ಯಶಸ್ವಿಯಾಗಿ ಸಾಧಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು ಈ ಸಭೆ ಕರೆದಿದ್ದಾರೆ.

ಯಾವ ವಿಷಯಗಳಿಗೆ ಆದ್ಯತೆ ನೀಡ­ಬೇಕು ಎನ್ನುವು­ದನ್ನು ಅವರು ಸಭೆ­ಯಲ್ಲಿ ಪ್ರಸ್ತಾಪಿ­ಸುವ ನಿರೀಕ್ಷೆ ಇದೆ. ಅಲ್ಲದೇ ಸಚಿವ ಸಹೋ­ದ್ಯೋಗಿ­ಗಳಿಂದ ಸಲಹೆ ಪಡೆಯುವ ಸಾಧ್ಯತೆ ಕೂಡ ಇದೆ.

ಈ ಸಭೆಯಲ್ಲಿ ಚರ್ಚೆಯಾಗುವ ವಿಷಯ­ಗಳು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಮುಂದಿನವಾರ ಜಂಟಿ ಸದನವನ್ನು ಉದ್ದೇಶಿಸಿ ಮಾಡುವ ಭಾಷಣದಲ್ಲಿ ಪ್ರಸ್ತಾಪವಾಗಲಿವೆ.

ಕಾರ್ಯಕರ್ತರಿಗೆ ಮೋದಿ ಕೃತಜ್ಞತೆ: ಮೋದಿ ಅವರು ಪ್ರಧಾನಿ­ಯಾದ ಬಳಿಕ ಇದೇ ಮೊದಲ ಬಾರಿ ಪಕ್ಷದ ಕಾರ್ಯ­ಕರ್ತರನ್ನು  ಭೇಟಿ­ಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಭಾನುವಾರ ಪಕ್ಷದ ಪ್ರಧಾನ ಕಚೇರಿ­ಯಲ್ಲಿ ಸೇರಿದ್ದ 300ಕ್ಕೂ ಹೆಚ್ಚು ಕಾರ್ಯ­ಕರ್ತರನ್ನು ಉದ್ದೇಶಿಸಿ ಮಾತ­ನಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT