ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ವಿ.ಕೆ. ಸಿಂಗ್‌ ವಜಾಕ್ಕೆ ಒತ್ತಾಯ

ಮುಂದಿನ ಸೇನಾ ಮುಖ್ಯಸ್ಥರ ವಿರುದ್ಧ ಟೀಕೆ
Last Updated 11 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂದಿನ ಸೇನಾ ಮುಖ್ಯಸ್ಥರಾಗಲಿರುವ ದಲ್ಬೀರ್‌ ಸಿಂಗ್‌ ಸುಹಾಗ್‌ ಅವರ ವಿರುದ್ಧ ತೀಕ್ಷ್ಣ ಟೀಕೆ­ಗಳನ್ನು ಮಾಡಿರುವ ವಿದೇಶಾಂಗ ರಾಜ್ಯ ಸಚಿವರಾಗಿರುವ ಜನರಲ್‌ (ನಿವೃತ್ತ) ವಿ.ಕೆ.ಸಿಂಗ್‌ ಅವರನ್ನು ತಕ್ಷ­ಣವೇ ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ಒಂದೆಡೆ ಸರ್ಕಾರವು ಸುಹಾಗ್‌ ಅವರನ್ನು ಸಮ­ರ್ಥಿ­­ಸಿಕೊಂಡು ಸುಪ್ರೀಂ­ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದರೆ, ಮತ್ತೊಂ­ದೆಡೆ ಸಂಪುಟದ ಭಾಗವಾ­ಗಿ­ರುವ ಸಿಂಗ್‌ ಅವರು ಸುಹಾಗ್‌ ಅವರನ್ನು ಯದ್ವಾತದ್ವಾ ಟೀಕಿಸಿದ್ದಾರೆ ಎಂದು ಕಾಂಗ್ರೆಸ್‌ ಧ್ವನಿ ಎತ್ತಿದೆ.

‘ತಮ್ಮದೇ ಸರ್ಕಾರವು ತಮ್ಮ ವಿರುದ್ಧ ದೋಷಾರೋಪ ಹೊರಿಸಿದ ನಂತರವೂ ಸಿಂಗ್‌ ಅವರು ಬುಧವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್‌­ನಲ್ಲಿ ತೀರಾ ಅನುಚಿತ ಭಾಷೆ ಬಳಸಿ ಸುಹಾಗ್‌ ಅವರನ್ನು ಟೀಕಿಸಿ­ದ್ದಾರೆ. ಮುಂದಿನ ಸೇನಾ ಮುಖ್ಯಸ್ಥ­ರಾಗುವವರನ್ನು ಕ್ರಿಮಿನಲ್‌ ಅಪರಾಧಿ ಎಂದೂ, ಅವರ ಅಧೀನದಲ್ಲಿ ಕೆಲಸ ಮಾಡುವವರನ್ನು ಡಕಾಯಿತರೆಂದೂ ಕರೆದಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್‌ ಹೇಳಿದೆ.

ನೇಮಕ ಅಂತಿಮ: ಮುಂದಿನ ಸೇನಾ ಮುಖ್ಯಸ್ಥರಾಗಿ ಲೆ.ಜ.ದಲ್ಬೀರ್‌ ಸಿಂಗ್‌ ಸುಹಾಗ್‌ ಅವರ ನೇಮಕಾತಿ ನಿರ್ಧಾರ­ದಲ್ಲಿ ಯಾವ ಬದಲಾವಣೆಯೂ ಇಲ್ಲ ಎಂದು ರಕ್ಷಣಾ ಸಚಿವ ಅರುಣ್‌ ಜೇಟ್ಲಿ ರಾಜ್ಯಸಭೆಯಲ್ಲಿ ಸಮರ್ಥಿಸಿಕೊಂಡರು.

ಸಿಂಗ್‌ ಟ್ವೀಟ್‌ನಲ್ಲಿ ಏನಿದೆ?
‘ಸೇನಾ ತುಕಡಿಯ ಯೋಧರು ಅಮಾಯಕರನ್ನು ಕೊಂದು, ಡಕಾ­ಯಿತಿ­ಯಲ್ಲಿ ಮುಳುಗಿ­ದ್ದಾಗಲೂ ಅದರ ಮುಖ್ಯಸ್ಥರಾದವರು ತಪ್ಪಿತ­ಸ್ಥ­ರನ್ನೇ ರಕ್ಷಿಸಲು ಯತ್ನಿ­ಸುತ್ತಿದ್ದಾಗ ಅಂಥವರನ್ನು ದೂಷಿ­ಸಬಾರದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT