ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಪಕ್ಷಗಳಿಗೆ ಬಿಜೆಪಿ–ಸೇನಾ ಗಾಳ

Last Updated 26 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಐಎಎನ್‌ಎಸ್‌): ಬಿಜೆಪಿ–ಸೇನಾ ಮೈತ್ರಿ ಮುರಿದು ಬಿದ್ದ ಬಳಿಕ ಮಹಾರಾಷ್ಟ್ರದಲ್ಲಿ ಸಣ್ಣ ಪಕ್ಷಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದುಬಿಟ್ಟಿದೆ.
ರಾಮದಾಸ್‌ ಅಠಾವಳೆ ಅವರ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿಐ) ಚುನಾವಣೆಯಲ್ಲಿ ಕನಿಷ್ಠ ಏಳು ಸ್ಥಾನಗಳಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸೇನಾ ಹಾಗೂ ಬಿಜೆಪಿಯನ್ನು ಗುರು­ವಾರ-ದವರೆಗೂ ಬೇಡಿಕೊಂಡಿತ್ತು. ಯಾವಾಗ ಮೈತ್ರಿ ಮುರಿದು ಬಿತ್ತೋ ಆವಾಗಿನಿಂದ  ಬಿಜೆಪಿ ಹಾಗೂ ಸೇನಾ ಆರ್‌ಪಿಐಗೆ ಗಾಳ ಹಾಕಲು ಶುರುಮಾಡಿವೆ.

‘ಸೇನಾ ಅಧಿಕಾರಕ್ಕೆ ಬಂದಲ್ಲಿ ನನಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡು­ವುದಾಗಿ ಉದ್ಧವ್‌ ಠಾಕ್ರೆ ಹೇಳಿದ್ದಾರೆ. ಇನ್ನು ಬಿಜೆಪಿಯವರು ಕೇಂದ್ರ ಸಂಪುಟ ದರ್ಜೆ ಸಚಿವ ಸ್ಥಾನ ಅಥವಾ  ರಾಜ್ಯಪಾಲರ ಹುದ್ದೆ ನೀಡು­ವುದಾಗಿ ಹೇಳುತ್ತಿದ್ದಾರೆ.

ಚುನಾ­ವಣೆ­ಯಲ್ಲಿ ೨೫–೩೦ ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡ­ಬೇಕೆಂದು ನಾವು ಒತ್ತಾಯ ಮಾಡು­ತ್ತಿದ್ದೇವೆ. ಶೀಘ್ರವೇ ಈ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳಲಾ­ಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT