ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತೀಶ್ ಜಾರಕಿಹೊಳಿಗೆ ಸಣ್ಣ ಕೈಗಾರಿಕೆ ಖಾತೆ?

Last Updated 30 ಜನವರಿ 2015, 20:30 IST
ಅಕ್ಷರ ಗಾತ್ರ

ಬೆಂಗಳೂರು: ತಮಗೆ ನೀಡಿರುವ ಅಬಕಾರಿ ಖಾತೆಯನ್ನು ಬದಲಾವಣೆ ಮಾಡಲೇ­ಬೇ­ಕೆಂಬ ಸಚಿವ ಸತೀಶ್ ಜಾರಕಿಹೊಳಿ ಅವರ ಪಟ್ಟಿಗೆ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಮಣಿದಿದ್ದಾರೆ. ವಿಧಾನ­ಮಂಡಲ ಅಧಿವೇ­ಶನದ ಬಳಿಕ ಸತೀಶ್ ಅವ­ರಿಗೆ ಸಣ್ಣ ಕೈಗಾರಿಕೆ ಖಾತೆ ನೀಡುವ ಸಾಧ್ಯತೆ ಇದೆ.

ಶುಕ್ರವಾರ ರಾತ್ರಿ ನಡೆದ ಮಾತುಕತೆ ವೇಳೆ ಸತೀಶ್ ಖಾತೆ ಬದಲಾವಣೆಗೆ ಪಟ್ಟು ಹಿಡಿದರು. ತಕ್ಷಣವೇ ಖಾತೆ ಬದ­ಲಾವಣೆ ಅಸಾಧ್ಯ ಎಂದು ಅವರಿಗೆ ಮನ­ವರಿಕೆ ಮಾಡಿದ ಮುಖ್ಯಮಂತ್ರಿ, ಅಧಿವೇ­ಶನ ಮುಗಿದ ಬಳಿಕ ಖಾತೆ ಬದಲಿಸುವ ಭರವಸೆ ನೀಡಿದರು. ತಮ್ಮ ಬಳಿ ಇರುವ ಖಾತೆಗಳಲ್ಲಿ ಒಂದನ್ನು ನೀಡು­ವುದಾಗಿ ಅಬಕಾರಿ ಸಚಿವರಿಗೆ ವಾಗ್ದಾನ ನೀಡಿದರು ಎಂದು ಮೂಲಗಳು ತಿಳಿಸಿವೆ.

ಮೊದಲಿನಂತಿಲ್ಲ ಎಂಬ ಕೊರಗು: ಸಿದ್ದರಾಮಯ್ಯ ಅವರು ಮೊದಲಿನಂತೆ ತಮ್ಮ ಜೊತೆ ನಡೆದುಕೊಳ್ಳುತ್ತಿಲ್ಲ ಎಂಬ ಬೇಸರವನ್ನು ಸತೀಶ್ ಜಾರಕಿಹೊಳಿ ಅವರು ಮಾತುಕತೆ ವೇಳೆ ಹೊರ­ಹಾಕಿ­ದ್ದಾರೆ. ತಾವು ಭೇಟಿಗಾಗಿ ಬಂದರೂ ಸಾಧ್ಯ ಆಗುತ್ತಿಲ್ಲ. ತಮ್ಮನ್ನು ಕಡೆಗಣಿಸ­ಲಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆ ಎಂದು ನೇರವಾಗಿ ಹೇಳಿದ್ದಾರೆ ಎಂದು ಗೊತ್ತಾಗಿದೆ.

‘ಮೊದಲು ನೀವು ಹೀಗೆ ಇರಲಿಲ್ಲ. ಮುಖ್ಯಮಂತ್ರಿಯಾಗುವ ಮೊದಲು ನಮ್ಮೊಂದಿಗೆ ನಡೆದುಕೊಳ್ಳುತ್ತಿದ್ದುದಕ್ಕೂ ಈಗ ಇರುವುದಕ್ಕೂ ಬಹಳ ವ್ಯತ್ಯಾಸ ಕಾಣು­ತ್ತಿದೆ. ಇದರಿಂದಾಗಿ ನನಗೆ ನೋವಾ­ಗಿದೆ’ ಎಂದು ಸತೀಶ್ ಹೇಳಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ‘ನಾನು ಈಗ ಮುಖ್ಯಮಂತ್ರಿ. ಮೊದಲಿನಂತೆ ಇರುವು­ದಕ್ಕೆ ಸಾಧ್ಯ ಆಗುವುದಿಲ್ಲ. ಯಾವುದೇ ಸಮಯದಲ್ಲಿ ನನ್ನೊಂದಿಗೆ ಮಾತ­ನಾಡು­ವುದಕ್ಕೆ ನಿಮಗೆ ಮುಕ್ತ ಅವಕಾಶ ಇದೆ. ನೀವಾಗಿಯೇ ಬಂದು ಮಾತ­ನಾಡಿ. ಯಾವತ್ತಿಗೂ ನಿಮ್ಮನ್ನು ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ’ ಎಂದು ಭರವಸೆ ನೀಡಿದ್ದಾರೆ ಎಂದು ಮೂಲ­ಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT