ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದಲ್ಲಿ ಹೈದರಾಬಾದ್‌ ವಿಮಾನ ನಿಲ್ದಾಣದ ಸದ್ದು!

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹೈದರಾಬಾದ್‌ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ದೇಶೀಯ ಟರ್ಮಿನಲ್‌ಗೆ ತೆಲುಗು­ದೇಶಂ ಸಂಸ್ಥಾಪಕ ಹಾಗೂ ತೆಲುಗು ಚಿತ್ರರಂಗದ ಮೇರುನಟ ದಿವಂಗತ ಎನ್‌.ಟಿ. ರಾಮರಾವ್‌ ಹೆಸರಿಡಲು ಹೊರ­ಟಿರುವ ಕೇಂದ್ರದ ನಿರ್ಧಾರ ಮಂಗಳವಾರ ಸಂಸತ್ತಿನ ಉಭಯ ಸದನಗಳಲ್ಲಿ ಭಾರಿ ಸದ್ದು ಮಾಡಿತು.

ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರು ಭಾರಿ ಪ್ರತಿಭಟನೆ ನಡೆಸಿದರು. ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್‌ ಉಪ ನಾಯಕ ಆನಂದ ಶರ್ಮಾ, ಮರು ನಾಮಕರಣ ಮಾಡುವ ಕುರಿತು ಸರ್ಕಾರ ಏಕ­ಪಕ್ಷೀ­ಯ­­ವಾಗಿ ತೀರ್ಮಾನ ಕೈಗೊಂಡಿದೆ ಎಂದು ತರಾಟೆಗೆ ತೆಗೆದು­ಕೊಂಡರು.

ನಂತರ ಕಾಂಗ್ರೆಸ್‌ ಸಂಸದರು ಸರ್ಕಾ­ರದ ವಿರುದ್ಧ ಘೋಷಣೆ ಕೂಗುತ್ತ ಸಭಾ­ಧ್ಯಕ್ಷರ ಪೀಠ ಎದುರು ಪ್ರತಿಭಟನೆಗೆ ಇಳಿದರು. ಉಪಸಭಾ­ಧ್ಯಕ್ಷ ಪಿ.ಜೆ. ಕುರಿ­ಯನ್‌ ಅವರ ಮನವಿಗೂ ಸದ­ಸ್ಯರು ಕಿವಿಗೊ­ಡದ ಕಾರಣ ಕಲಾಪ­ವನ್ನು ಹಲವು ಬಾರಿ ಮುಂದೂಡಲಾಯಿತು.

ಮಧ್ಯಾಹ್ನ ಕಲಾಪ ಆರಂಭವಾದಾಗ ಹಣಕಾಸು ಸಚಿವ ಅರುಣ್‌ ಜೇಟ್ಲಿ ಸಂಪುಟದ ಹೊಸ ಸದಸ್ಯರನ್ನು ಸದನಕ್ಕೆ ಪರಿಚಯಿಸಲು ಮುಂದಾದರು. ಆದರೆ, ಕಾಂಗ್ರೆಸ್‌ ಸದಸ್ಯರು ಇದಕ್ಕೆ ಅವಕಾಶ ನೀಡದ ಕಾರಣ ಕಲಾಪವನ್ನು ಮತ್ತೆ ಮುಂದೂಡಲಾಯಿತು.
ಲೋಕ­ಸಭೆ­ಯಲ್ಲೂ ವಿಮಾನ ನಿಲ್ದಾಣ ಮರು ನಾಮಕರಣ ವಿವಾದ ಪ್ರತಿಧ್ವನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT