ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ನಿ ಲಿಯೋನ್‌ ಜಾಹೀರಾತು ನಿಷೇಧಿಸಲು ಸಿಪಿಐ ಆಗ್ರಹ

Last Updated 8 ಮಾರ್ಚ್ 2017, 10:32 IST
ಅಕ್ಷರ ಗಾತ್ರ

ಲಖನೌ/ನವದೆಹಲಿ: ಮಾದಕ ನಟಿ ಸನ್ನಿ ಲಿಯೋನ್‌ ನಟಿಸಿರುವ ಕಾಂಡೋಮ್ ಜಾಹೀರಾತು ಅಸಹ್ಯಕರ ಮತ್ತು ಅಶ್ಲೀಲವಾಗಿದ್ದು, ಅತ್ಯಾಚಾರ ಘಟನೆಗಳ ಹೆಚ್ಚಳಕ್ಕೆ ಪ್ರೇರಣೆ ನೀಡುವ ಸಾಧ್ಯತೆ ಇರುವುದರಿಂದ ಅದನ್ನು ನಿಷೇಧಿಸುವಂತೆ ಸಿಪಿಐ ಮುಖಂಡ ಅತುಲ್‌ ಅಂಜನ್‌ ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶದ ಘಾಜಿಪುರದಲ್ಲಿ ಗುರುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನೀವು ಟಿ.ವಿ. ಹಾಕಿದಾಗಲೆಲ್ಲಾ ನೀಲಿ ಚಿತ್ರಗಳಲ್ಲಿ ನಟಿಸಿದ ಮತ್ತು ಈಗ ಬಾಲಿವುಡ್‌ ಚಿತ್ರಗಳಲ್ಲಿ ನಾಯಕಿಯಾಗಿರುವ ಸನ್ನಿ ಲಿಯೋನ್‌ ಎಂಬ ಹೆಸರಿನ ಮಹಿಳೆಯನ್ನು ನೋಡುತ್ತೀರಿ. ಆಕೆ ಎರಡು ನಿಮಿಷಕ್ಕಿಂತ ಹೆಚ್ಚು ಕಾಲ ನೋಡಲು ಅಸಾಧ್ಯವಾದ ವಯಸ್ಕರ ಚಿತ್ರಗಳಲ್ಲಿ ನಟಿಸಿದ್ದಾಳೆ. ಈಗ ಆಕೆಯ ಜಾಹೀರಾತುಗಳು ಟಿ.ವಿಯಲ್ಲಿ ಕಾಣಿಸುತ್ತಿವೆ’ ಎಂದು ಹೇಳಿದರು.

‘ವಯಸ್ಕರ ಚಿತ್ರಗಳಿಂದ ಹೆಸರು ಮಾಡಿರುವ ಸನ್ನಿ ಲಿಯೋನ್‌ ಕಾಣಿಸಿಕೊಂಡಿರುವ ಕಾಂಡೋಮ್‌ ಜಾಹೀರಾತು ಮತ್ತು ಅದರಲ್ಲಿನ ಆಕೆಯ  ಸಂಭಾಷಣೆಗಳು ಕೆಟ್ಟ ಸನ್ನಿವೇಶಗಳಿಗೆ ಕಾರಣವಾಗುತ್ತವೆ. ಅಂತಹ ವ್ಯಕ್ತಿಗಳ ಜಾಹೀರಾತುಗಳನ್ನು ಸಾರ್ವಜನಿಕ ಮತ್ತು ಖಾಸಗಿ ವಾಹಿನಿಗಳಿಂದ ನಿಷೇಧಿಸಬೇಕು. ಇವು ಅತ್ಯಾಚಾರಗಳಿಗೆ ಕುಮ್ಮಕ್ಕು ನೀಡುತ್ತವೆ’ ಎಂದು ಬಳಿಕ ಅವರು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT