ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ನಿ: ಹಾಲಿನ ಸ್ನಾನ!

Last Updated 3 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನೀಲಿ ಚಿತ್ರತಾರೆ ಹಾಗೂ ಬಾಲಿವುಡ್‌ನ ಹಾಟ್‌ ನಟಿ ಸನ್ನಿ ಲಿಯಾನ್‌ ತಮ್ಮ ಮುಂಬರುವ ‘ಏಕ್ ಪಹೇಲಿ ಲೀಲಾ’ ಚಿತ್ರದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘.. ಲೀಲಾ’ ಚಿತ್ರದಲ್ಲಿನ ಒಂದು ಸನ್ನಿವೇಶಕ್ಕಾಗಿ ನಟಿ ನೂರು ಲೀಟರ್‌ ಹಾಲಿನಲ್ಲಿ ಸ್ನಾನ ಮಾಡಿದ್ದಾರೆ. ಆಕರ್ಷಕ ಮೈಕಟ್ಟಿನ ಸನ್ನಿ ಈ ದೃಶ್ಯದಲ್ಲಿ ಮತ್ತಷ್ಟು ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ ಎಂಬುದು ಚಿತ್ರತಂಡದ ಹೇಳಿಕೆ. 

‘ಏಕ್‌ ಪಹೇಲಿ ಲೀಲಾ’ ಸಿನಿಮಾ ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಹೊಂದಿದೆ. ಸನ್ನಿ ಲಿಯಾನ್‌ ಹಾಲಿನ ಸ್ನಾನ ಮಾಡುವ ದೃಶ್ಯ ಪ್ರಸ್ತುತ ಕಾಲಘಟ್ಟದ ಕತೆಯಲ್ಲಿ ಬರುವ ಸನ್ನಿವೇಶವಂತೆ.

ಸನ್ನಿ ಲಿಯಾನ್‌ ಹಾಲಿನಲ್ಲಿ ಸ್ನಾನ ಮಾಡುವ ಸನ್ನಿವೇಶವನ್ನು ರಾಜಸ್ತಾನದಲ್ಲಿ ಚಿತ್ರೀಕರಿಸಲಾಗಿದೆ. ಮೈಮೇಲೆ ಒಂದು ಬಿಳಿ ಬಟ್ಟೆ ಮಾತ್ರ ಹೊದ್ದುಕೊಂಡು ಈ ಸನ್ನಿವೇಶದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಸನ್ನಿಗೆ ಕೆಲವೊಂದು ವಿಶಿಷ್ಟ ಅನುಭವಗಳಾದವಂತೆ.

ಸನ್ನಿ ಸ್ನಾನಕ್ಕಾಗಿ ನೂರು ಲೀಟರ್‌ ಹಾಲು ಸಿದ್ಧವಿತ್ತು. ಆದರೆ, ಹೊರಗೆ ಮೈ ಕೊರೆಯುವ ಚಳಿ. ಚಳಿಯಿಂದ ಸನ್ನಿಯನ್ನು ರಕ್ಷಿಸಲು ಚಿತ್ರತಂಡ ಹಾಲಿಗೆ ಬಿಸಿನೀರು ಬೆರೆಸಿದರಂತೆ. ಆಮೇಲೆ   ಚಿತ್ರೀಕರಣದಲ್ಲಿ ಪಾಲ್ಗೊಂಡ ಸನ್ನಿ ತನ್ಮಯರಾಗಿ ಈ ಸನ್ನಿವೇಶವನ್ನು ಪೂರ್ಣಗೊಳಿಸಿದ್ದಾರೆ. ಆದರೆ, ಚಿತ್ರೀಕರಣ ಮುಗಿದ ನಂತರ ಆಕೆಯ ಮೈ ಮೇಲೆ ಚಳಿಗುಳ್ಳೆಗಳು ಕಾಣಿಸಿಕೊಂಡಿದ್ದವಂತೆ.

ಅಂದಹಾಗೆ, ‘ಈ ಚಿತ್ರದ ಟ್ರೈಲರ್‌ ಮಾತ್ರ ಹಾಟ್‌ ಆಗಿಲ್ಲ, ಇಡೀ ಸಿನಿಮಾ ಹಾಟ್‌ ಆಗಿದೆ’ ಎಂಬುದು ಚಿತ್ರ ತಂಡದ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT