ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್ಸಿಡಿ ಎಲ್‌ಪಿಜಿ: ₨ 3 ಹೆಚ್ಚಳ

Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಬ್ಸಿಡಿ ಅಡುಗೆ ಅನಿಲ (ಎಲ್‌ಪಿಜಿ) ದರ ಪ್ರತಿ ಸಿಲಿಂಡರ್‌ಗೆ ಮೂರು ರೂಪಾಯಿ ಏರಿಕೆಯಾಗಿದೆ.
ಅನಿಲ ವಿತರಕರಿಗೆ ನೀಡಲಾಗುವ ಕಮಿಷನನ್ನು ಸರ್ಕಾರ ಹೆಚ್ಚಿಸಿರುವ ಫಲವಾಗಿ ದರ ಹೆಚ್ಚಳಗೊಂಡಿದೆ. ದರ ಏರಿಕೆ ಅ. 23ರಿಂದಲೇ ಪೂರ್ವಾನ್ವ­ಯವಾಗುವಂತೆ ಜಾರಿಗೆ ಬಂದಿದೆ.

ಸಬ್ಸಿಡಿ ದರದಲ್ಲಿ ವರ್ಷಕ್ಕೆ 12 ಸಿಲಿಂಡರ್‌ ಮಾತ್ರ ದೊರೆ­ಯು­ತ್ತದೆ. ಕಮಿಷನ್‌ ಏರಿಕೆಯಿಂದಾಗಿ ಅದರ ನಂತರ ಗ್ರಾಹಕರು ಖರೀದಿಸುವ  14.2 ಕಿಲೋ ಸಿಲಿಂಡರ್‌ ಬೆಲೆ  ₨ 880 ರಿಂದ ₨883.50ಕ್ಕೆ ಏರಿದೆ. 

ಕಳೆದ ಡಿಸೆಂಬರ್‌ನಲ್ಲಿ ವಿತರಕರ ಕಮಿಷನ್‌ ಪ್ರತಿ ಸಿಲಿಂಡರ್‌ಗೆ ₨ 3.46 ಏರಿಕೆ ಮಾಡಲಾಗಿತ್ತು. ಕಮಿಷನ್‌ ಏರಿಕೆಯಿಂದಾಗಿ ದೇಶದಾದ್ಯಂತ ಇರುವ 13,896 ಸಿಲಿಂಡರ್‌ ವಿತರಕರಿಗೆ ಪ್ರಯೋಜನ­ವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT