ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಸಂಪುಟಗಳು ಎಲ್ಲಿ?

Last Updated 17 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ 1996ರಲ್ಲಿ ಜೆ.ಎಚ್‌. ಪಟೇಲ್ ಅವರು ಮುಖ್ಯಮಂತ್ರಿಗಳಾಗಿ, ಸಿದ್ದರಾಮಯ್ಯ­ನವರು ಉಪ ಮುಖ್ಯಮಂತ್ರಿಗಳಾಗಿದ್ದಾಗ (ಇಬ್ಬರೂ  ಲೋಹಿಯಾವಾದಿಗಳು)  ರಾಮ ಮನೋಹರ ಲೋಹಿಯಾ ಅವರ ಸಮಗ್ರ ಬರಹಗಳನ್ನು ಕನ್ನಡಕ್ಕೆ ತರುವ ಮಹತ್ವದ ಯೋಜನೆಯೊಂದಕ್ಕೆ ಚಾಲನೆ ನೀಡಿ ಈ ಕಾರ್ಯಕ್ಕಾಗಿ ಪ್ರಕಟಣಾ ಸಮಿತಿಯೊಂದನ್ನು ರಚಿಸಲಾಗಿತ್ತು.

ಈ ವಿದ್ವಾಂಸರ ಸಮಿತಿ ಅಸ್ತಿತ್ವಕ್ಕೆ ಬಂದು 18 ವರ್ಷಗಳೇ ಆಗಿ ಹೋಗಿವೆ! ಈ ಅವಧಿಯಲ್ಲಿ ಸಮಿತಿಯು  ಲೋಹಿಯಾ ಅವರ  ಏಳೆಂಟು ಸಂಪು­ಟಗಳನ್ನು ಮಾತ್ರ ಅನುವಾದಿಸಿ, ಅದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದೆ. ಈ ನಡುವೆ ಸರ್ಕಾರ ಬದಲಾಯಿತು. ಸಮಿತಿಯಲ್ಲಿರುವ ಅಧ್ಯಕ್ಷರು ಮತ್ತು ಸದಸ್ಯರ ಆಮೆಗತಿ ವೇಗವೂ ಈ ನಿಧಾ­ನಕ್ಕೆ ಕಾರಣ­ವಾಗಿ­ರಬಹುದು! ಅಥವಾ ಸದಸ್ಯರ ನಡುವೆ ಹೊಂದಾ­ಣಿಕೆ, ಮುಖ್ಯವಾಗಿ ಬದ್ಧತೆಯ ಕೊರತೆ ಇರಬಹುದು! ಈ ಸಮಿತಿಯಲ್ಲಿರುವ ವಿದ್ವಾಂಸ­ರಿಗೇ ಈ ಯೋಜನೆ ಮರೆತು ಹೋಗಿರ­ಬಹುದು! ಏನೇ ಇರಲಿ, ಈಗ ಇದೆ ಎಂದು ಭಾವಿ­ಸಿ­ರುವ ಪ್ರಕಟಣಾ ಸಮಿತಿಯು ಲೋಹಿಯಾ ಅವರ ಸಮಗ್ರ ಕೃತಿಗಳನ್ನು ಕನ್ನಡಕ್ಕೆ ತರಲು ಅಸಮರ್ಥವಾಗಿದೆ.

ಹಾಗೆಯೇ  ಎನ್‌. ಧರ್ಮ­ಸಿಂಗ್‌ ಅವರು ಮುಖ್ಯಮಂತ್ರಿಗಳಾಗಿದ್ದಾಗ ಬಾಬು ಜಗಜೀವನ­ರಾಮ್‌ ಅವರ ಸಮಗ್ರ ಬರಹ ಮತ್ತು ಭಾಷಣ­ಗಳನ್ನು ಕನ್ನಡಕ್ಕೆ ತರಲು ಪ್ರಕಟಣಾ ಸಮಿತಿ ರಚನೆ ಮಾಡಿದ್ದರು. ಈ ಸಮಿತಿಯು ‘ವಿಮೋ­ಚನೆಯ ಹರಿಕಾರ’ ಎನ್ನುವ ಬಾಬು ಜಗಜೀವನ­ರಾಮ್‌ ಅವರ ಜೀವನ ಮತ್ತು ಸಾಧನೆ ಕುರಿತ ಪ್ರಾತಿನಿಧಿಕ ಬರಹಗಳ ಪ್ರಾಯೋಗಿಕ ಸಂಪುಟ ಮಾತ್ರ ಪ್ರಕಟಿಸಿ ಕೈತೊಳೆದುಕೊಂಡಿದೆ. ಈ ಪ್ರಕಟಣಾ ಸಮಿತಿ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ! ಅಥವಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಆಸಕ್ತಿ ಇದೆಯೋ ಇಲ್ಲವೋ! ಕನ್ನಡದ ಪ್ರಖ್ಯಾತ ವಿದ್ವಾಂಸರೇ ಇದ್ದ ಈ ಎರಡು ಪ್ರಕಟಣಾ ಸಮಿತಿಗಳು ನಿಷ್ಕ್ರಿಯವಾಗಿವೆ.

ಆದ್ದರಿಂದ ಮರೆತು ಹೋಗಿರುವ ಈ ಎರಡು ಯೋಜನೆಗಳನ್ನು ‘ಕುವೆಂಪು ಭಾಷಾ ಭಾರತಿ ಪ್ರಾಧಿ­ಕಾರಕ್ಕೆ’ ವಹಿಸಿಕೊಟ್ಟು ಆದಷ್ಟು ಬೇಗ ಲೋಹಿಯಾ ಮತ್ತು ಜಗಜೀವನ­ರಾಮ್‌ ಅವರ ಸಮಗ್ರ ಬರಹ ಮತ್ತು ಭಾಷಣಗಳ ಸಂಪುಟ­ಗಳು ಹೊರ ಬರುವಂತೆ ಕ್ರಮ ಕೈಗೊಳ್ಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT