ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ನಡುವೆ ಯಶಸ್ಸು ಕಂಡ ಸಾಧಕರು!

ಶಿಕ್ಷಣ ಮುಂದುವರಿಸಲು ವಿದ್ಯಾರ್ಥಿಗಳು ಸಹಾಯಕ್ಕೆ ಮೊರೆ: ಗ್ರಾಮೀಣ ಮಕ್ಕಳ ಸಾಧನೆಗೆ ಪ್ರಶಂಸೆ
Last Updated 24 ಮೇ 2016, 6:03 IST
ಅಕ್ಷರ ಗಾತ್ರ

ಶಿರಹಟ್ಟಿ: ಬಡತನಕ್ಕೂ ಸಾಧನೆಗೆ ಸಂಬಂಧವಿಲ್ಲ. ಪ್ರತಿಭೆ ಇದ್ದಲ್ಲಿ ಯಶಸ್ಸಿನ ಶಿಖರ ಏರಲು ಖಂಡಿತ ಸಾಧ್ಯ ಎಂಬ ಧ್ಯೇಯೋಕ್ತಿಯನ್ನು ನಿರೂಪಿಸಿದ ಇಬ್ಬರು ವಿದ್ಯಾರ್ಥಿನಿಯರು ಮ್ಯಾಟ್ರಿಕ್‌ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ತಗೆದು ಕೊಳ್ಳುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ತಾಲ್ಲೂಕಿನ ಕಡಕೋಳ ಗ್ರಾಮದ ವಿ.ಸಿ. ಅಂಗಡಿ ಸರ್ಕಾರಿ ಪ್ರೌಢಶಾಲೆಯ ಜ್ಯೋತಿ ಮಂಜುನಾಥ ಕನ್ನೂರು ಶೇ 96.48 ಹಾಗೂ ಸೊರಟೂರಿನ ಅನ್ನದಾ ನೇಶ್ವರ ಸರ್ಕಾರಿ  ಪ್ರೌಢಶಾಲೆಯ ಪೂರ್ಣಿಮಾ ಕನ್ನೂರ 91.00 ಅಂಕಗಳನ್ನು ಪಡೆದಿದ್ದಾರೆ. ಕನ್ನಡ 125, ಹಿಂದಿ 96, ಸಮಾಜ 99, ಗಣಿತ 97, ವಿಜ್ಞಾನ 96, ಆಂಗ್ಲಭಾಷೆ 90 ಒಟ್ಟು 625ಕ್ಕೆ 603 ಅಂಕಗಳನ್ನು ಗಳಿಸಿ ತಾಲ್ಲೂಕಿಗೆ ದ್ವೀತಿಯ ಸ್ಥಾನ ಪಡೆದಿದ್ದಾಳೆ.

ತಂದೆ ಕೂಲಿ ಜೊತೆಗೆ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತಿದ್ದರೆ ತಾಯಿ ಮನೆಯಲ್ಲಿ ಬಟ್ಟೆ ಹೊಲಿದು ಉಪ ಜೀವನ ನಡೆಸುತ್ತಿದ್ದಾರೆ. ಗ್ರಾಮ ಪಂಚಾಯ್ತಿ ವಿತರಣೆ ಮಾಡಿರುವ ಆಶ್ರಯ ನಿವೇಶನದ ಪುಟ್ಟ ಮನೆಯಲ್ಲಿ ವಾಸಿಸುವ ಮಂಜುನಾಥ ಕನ್ನೂರ ಅವರ ಮೂವರು ಮಕ್ಕಳಲ್ಲಿ ಜ್ಯೋತಿ ಮೊದಲಿಗಳು.

ಬಾಲ್ಯದಿಂದಲೇ ಚೂಟಿತನದ ಜ್ಯೋತಿ ಶಾಲಾ ಕಾಲೇಜುಗಳಲ್ಲಿ ನಡೆ ಯುವ ಚರ್ಚಾ ಸ್ಪರ್ಧೆ, ಪ್ರಬಂಧ, ಆಶು ಭಾಷಣ ಸೇರಿದಂತೆ ಎಲ್ಲ ಸ್ಪರ್ಧೆಗಳ ಲ್ಲಿಯೂ ಭಾಗವಹಿಸಿ ಪ್ರಶಸ್ತಿ ಬಾಚಿ ಕೊಂಡಿದ್ದಾಳೆ. ನಿತ್ಯ ಆರು ಗಂಟೆಗಳ ಕಾಲ ಅಭ್ಯಾಸದ ಜತೆಗೆ ಸಮಯ ಸಿಕ್ಕರೆ ಕೃಷಿ ಕೆಲಸಕ್ಕೆ ಸೈ. ಶಾಲೆಯಲ್ಲಿ ಶಿಕ್ಷಕರು ಹೇಳುವ ಪಾಠ ಮಾತ್ರ ಇಷ್ಟು ಅಂಕ ಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿದ್ದು, ಶಿಕ್ಷಕರ ಹಾಗೂ ಗ್ರಾಮಸ್ಥರ ಸಹಕಾರ ದಿಂದ ಇದು ಸಾಧ್ಯವಾಯಿತು ಎಂದು ಹೆಮ್ಮೆ ವ್ಯಕ್ತಪಡಿಸುತ್ತಾಳೆ.

ಶಾಲೆಯ ಮುಖ್ಯ ಶಿಕ್ಷಕ ವಿ.ಆರ್‌. ಅರ್ಕಸಾಲಿ, ಎಲ್‌.ಎನ್‌. ದೊಡ್ಡಮನಿ, ಜ್ಯೋತಿ ಪಾಟೀಲ, ಎಸ್‌.ಎಫ್‌. ಹಿರೇಮಠ, ಡಿ.ಎಂ ಹೆಸರಡ್ಡಿ ಸೇರಿದಂತೆ ಹಲವಾರು ಶಿಕ್ಷಕರ ಸಹಾಯ ನನಗೆ ಅನುಕೂಲವಾಯಿತು ಎಂದು ತಿಳಿಸುವ ಜ್ಯೋತಿ ಕನ್ನೂರ ವಿಜ್ಞಾನ ವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾಳೆ. 

ಬಡತನದ ಇನ್ನೊಂದು ಪ್ರತಿಭೆ ಸೊರಟೂರಿನ ಅನ್ನದಾನೇಶ್ವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪೂರ್ಣಿಮಾ ಶೇಖಪ್ಪ ಕನ್ನೂರ ಶೇ 91. 63 ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ. ಇವಳಿಗೆ ಸ್ವಂತ ಮನೆ ಸಹ ಇಲ್ಲ. ಜಮೀನು ಇದ್ದರೂ ಇಲ್ಲದಂತಹ ಬಂಜರು ಭೂಮಿ. ಅತ್ಯಂತ ಕಡುಬಡತ ನದಲ್ಲಿಯೇ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿ. ಮನೆಯಲ್ಲಿ ತಾಯಿಯ ಕೂಲಿಕೆಲಸವೇ ಜೀವನಕ್ಕೆ ಆಧಾರ.

ಕನ್ನಡ 121, ಗಣಿತ 96, ಸಮಾಜ 97, ಆಂಗ್ಲಭಾಷೆ 81, ವಿಜ್ಞಾನ 78, ಹಿಂದಿ 98 ಒಟ್ಟು571 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ಶಾಲೆಯ ಮುಖ್ಯ ಶಿಕ್ಷಕಿ ಎಸ್‌.ಎಂ. ಮನ್ನಾಪುರ, ಎಸ್‌ಡಿಎಂಸಿ ಅಧ್ಯಕ್ಷ ಶಿರಾಜ ಯಳವತ್ತಿ, ಕೆ.ಎ ಬಳಿಗಾರ ಹಾಗೂ ಶಿಕ್ಷಕರ ವರ್ಗ ಸಾಕಷ್ಟು ಪ್ರೋತ್ಸಾಹ ನೀಡಿದ್ದು, ಇದೆಕ್ಕೆಲ್ಲಾ ಅವರೇ ಕಾರಣ ಎಂದು ಹೇಳುವದನ್ನು ಪೂರ್ಣಿಮಾ ಮರೆಯಲಿಲ್ಲ. 

ಬಡತನದಲ್ಲಿ ಬೆಂದರೂ ಓದಿ ಸಾಧಿಸಬೇಕೆಂಬ ಉತ್ಕಟ ಬಯಕೆ ಹೊಂದಿರುವ ವಿಧ್ಯಾರ್ಥಿಗಳ ಆರ್ಥಿಕ ನೆರವಿನ ಅವಶ್ಯಕವಿದ್ದು, ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ಜ್ಯೋತಿ ಮಂಜಪ್ಪ ಕನ್ನೂರ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಕೌಂಟ್‌ ಸಂಖ್ಯೆ 7353026001 ಐಎಫ್‌ಸಿ ಕೋಡ. 0003103. ಪೂರ್ಣಿಮಾ ಶೇಖಪ್ಪ ಕನ್ನೂರ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಅಕೌಂಟ್‌ ಸಂಖ್ಯೆ 89036427576 ಐಎಫ್‌ಸಿಐ ಕೋಡ. ಕೆವಿಜಿ 0006009.

** *** **
ಶಿಕ್ಷಣದಲ್ಲಿ ಆಸಕ್ತಿಹೊಂದಿದ ಇಂತಹ ಬಡಮಕ್ಕಳಿಗೆ ಸರ್ಕಾರ ಹಾಗೂ ಸಂಘ–ಸಂಸ್ಥೆಗಳ ನೆರವಿನ ಹಸ್ತಬೇಕಾಗಿದೆ.
-ಎಸ್‌.ಎಂ.ಮನ್ನಾಪುರ,
ಮುಖ್ಯಶಿಕ್ಷಕಿ, ಸೊರಟೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT