ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದ್ರಪಾಲಾದವರ ಮೃತದೇಹ ಪತ್ತೆ

Last Updated 28 ಅಕ್ಟೋಬರ್ 2014, 6:03 IST
ಅಕ್ಷರ ಗಾತ್ರ

ಶಿರ್ವ:- ಕಾಪು ಕಡಲತೀರದಿಂದ ಸಮುದ್ರ ಪಾಲಾಗಿದ್ದ ಕಾರ್ಕಳ ಮೂಲದ ಒಂದೇ ಕುಟುಂಬಕ್ಕೆ ಸೇರಿದ ಸುನೀಲ್(೩೨) ಮತ್ತು ಹರ್ಷ(೧೪) ಎಂಬವರ ಮೃತದೇಹ ಸೋಮವಾರ ಮಧ್ಯಾಹ್ನದ ವೇಳೆಗೆ ಮಲ್ಪೆ ಸಮೀಪದ ಸೈಂಟ್ ಮೆರೀಸ್ ಹಾಗೂ ಪಡುಕೆರೆ ವಲಯದಲ್ಲಿ ಪತ್ತೆಯಾಗಿದೆ.

ಉಡುಪಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಕರವಾಳಿ ಪೊಲೀಸರ ಕಾರ್ಯಾಚರಣೆ ಮೂಲಕ ಮೃತ ದೇಹಗಳ ಪತ್ತೆ ಹಚ್ಚಲಾಗಿದೆ. ಮೃತ ದೇಹಗಳನ್ನು ಮಲ್ಪೆ ತೀರಕ್ಕೆ ತಂದು ಅಜ್ಜರಕಾಡು ಆಸ್ಪತ್ರೆಯಲ್ಲಿ ಮರ ಣೋತ್ತರ ಪರೀಕ್ಷೆ ನಡೆಸಿ ಮನೆಯವರಿಗೆ ಹಸ್ತಾಂತರಿಸಲಾಗಿದೆ.

ಶನಿವಾರ ಸಂಜೆ ಕಾಪುವಿನ ಕಡಲ ತೀರದಲ್ಲಿ ಈಜಾಡುತ್ತಿದ್ದ ವೇಳೆ ಒಂದೇ ಕುಟುಂಬದ ಐವರು ಸಮುದ್ರ ನೀರಿನ ಸೆಳೆತಕ್ಕೆ ಸಿಲುಕಿದ್ದರು. ಈ ಪೈಕಿ ಇಬ್ಬರನ್ನು ತಕ್ಷಣ ರಕ್ಷಿಸಲಾಗಿತ್ತಾದರೂ, ಸುನೀಲ್ ಮತ್ತು ಹರ್ಷ ಸಮುದ್ರ ಪಾಲಾಗಿದ್ದರು. ಅವಘಡ ನಡೆದ ಒಂದೂವರೆ ಗಂಟೆಯ ಬಳಿಕ ಜಗದೀಶ್ ರಾವ್ (೩೬) ಅವರ ಮೃತದೇಹ ಕಾಪು ದೀಪಸ್ತಂಭದ ಉತ್ತರ ದಿಕ್ಕಿನಲ್ಲಿ ದೊರಕಿತ್ತು.

ತೆಪ್ಪಗಿದ್ದ ಜಿಲ್ಲಾಡಳಿತ: ದುರಂತ ನಡೆದ ತಕ್ಷಣಕ್ಕೆ ದಿಗ್ಭ್ರಮೆಗೊಂಡಿದ್ದ ಕುಟುಂಬ ರಾತ್ರಿ ಪೂರ್ತಿ ಸಮುದ್ರ ಪಾಲಾಗಿದ್ದ ದೇಹಗಳ ಸುಳಿವಿಗಾಗಿ ಕಾದುಕುಳಿತಿತ್ತು. ಆದರೆ ಇತ್ತ ಉಡುಪಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಡೆದ ದುರಂತವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಯಾವುದೇ ಸುಳಿವು ದೊರಕದಿದ್ದ ಮತ್ತಿಬ್ಬರ ದೇಹದ ಹುಡು ಕಾಟದ ಬಗ್ಗೆ ಕಾರ್ಯಾಚರಣೆ ನಡೆ ಸಲೂ ಯಾವುದೇ ಆಸಕ್ತಿ ತೋರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಮಧ್ಯೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ಮುತುವರ್ಜಿ ವಹಿಸಿ ಸಂತ್ರಸ್ತ ಕುಟುಂಬದಕ್ಕೆ ಸಾಂತ್ವನ ಹೇಳಿ, ಉಡುಪಿ ಜಿಲ್ಲಾಡಳಿತದ ಬೇಜವಾ ಬ್ದಾರಿತನಕ್ಕೆ ಛೀಮಾರಿ ಹಾಕಿದ್ದರು.

ಮೃತದೇಹ ಪತ್ತೆಗೆ ದೌಡಾಯಿಸಿದ ಅಧಿಕಾರಿಗಳು: ಶನಿವಾರ ಸಂಜೆಯೇ ದುರಂತ ನಡೆದಿತ್ತಾದರೂ ಸೋಮವಾರ ಮುಂಜಾವಿನವರೆಗೂ ಸಮುದ್ರ ಪಾಲಾ ಗಿದ್ದ ದೇಹಗಳ ಬಗ್ಗೆ ಯಾವುದೇ ಸುಳಿವು ದೊರಕಲಿಲ್ಲ. ಆದರೆ ಪ್ರಕರಣದ ಅರಿವಿ ದ್ದರೂ ತಡವಾಗಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಸಿಬ್ಬಂದಿ ಕರೆದುಕೊಂಡು, ಅಧಿಕಾರಿ ವರ್ಗದವರ ಜತೆ ಸೋಮವಾರ ಬೆಳ್ಳಂಬೆಳಗ್ಗೆ ಕಾಪು ಕಡಲತೀರದಲ್ಲಿ ಮೊಕ್ಕಾಂ ಹೂಡಿತು.

ಮೃತದೇಹಗಳ ಪತ್ತೆ ಕಾರ್ಯಾ ಚರಣೆಯಲ್ಲಿ ಜಿಲ್ಲಾ ಪೊಲೀಸ್ ಅಧಿಕ್ಷಕ ರಾಜೇಂದ್ರ ಪ್ರಸಾದ್, ಕಾರ್ಕಳ ಎಎಸ್‌ಪಿ ಅಣ್ಣಾಮಲೈ, ಸಿಎಸ್‌ಪಿಯ ಎಸ್‌ಪಿ ಮಂಜುನಾಥ್ ಶೆಟ್ಟಿ ಅವರೊಂದಿಗೆ ಮೂರು ಪೊಲೀಸ್ ಠಾಣೆಗಳ ಎಸ್ಐ, ಎಎಸ್‌ಐ, ಸೇರಿ ಸುಮಾರು ೨೫ ಜನ ಪೊಲೀಸ್ ಸಿಬ್ಬಂದಿ ಕಾಪು ಬೀಚ್‌ನಲ್ಲಿ ಮೊಕ್ಕಾಂ ಹೂಡಿಸಲಾಗಿತ್ತು.

ಇಷ್ಟು ದೊಡ್ಡ ದಂಡಿನ ಜತೆ ಕರಾವಳಿ ಪೊಲೀಸ್ ಪಡೆಯ ಸಿಬ್ಬಂದಿಗಳೂ ಸಹ ಕಾರ ನೀಡಿದ್ದು, ಪೊಲೀಸ್ ಪಡೆಯ ಎರಡು ಬೋಟ್ ಮತ್ತು ಒಂದು ಹೂವರ್ ಕ್ರಾಫ್ಟ್ ಕಾರ್ಯಾ ಚರಣೆಯಲ್ಲಿ ಬಳಸಲಾಗಿತ್ತು.

ಸೋಮವಾರ ಬೆಳಿಗ್ಗೆ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ನಿರತರಾಗಿದ್ದ ಮೀನುಗಾರರು ನೀಡಿದ ಮಾಹಿತಿ ಅನ್ವಯ ಮೃತದೇಹದ ವಲಯ ಲೆಕ್ಕ ಹಾಕಿದ ಕಾರ್ಯಾಚರಣಾ ಸಿಬ್ಬಂದಿ ಅಲ್ಲಿಗೆ ತೆರಳುವಷ್ಟರಲ್ಲಿ ನೀರಿನ ರಭಸಕ್ಕೆ ದೇಹ ಮತ್ತೊಮ್ಮೆ ನಾಪತ್ತೆಯಾಗಿ ಕಾರ್ಯಾಚರಣೆ ತಡೆ ಉಂಟಾಯಿತು. ಬಳಿಕ ಸುಮಾರು ೧೧.೩೦ ರ ವೇಳೆಗೆ ಮೃತದೇಹಗಳನ್ನು ಪಡುಕೆರೆ ಪ್ರದೇಶ ದಲ್ಲಿ ಪತ್ತೆಮಾಡಿ ಆಸ್ಪತ್ರೆಗೆ ವರ್ಗಾಯಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT