ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನಾಧ್ಯಕ್ಷ; ದೇವನೂರಗೆ ಮನವಿ

Last Updated 28 ನವೆಂಬರ್ 2014, 19:39 IST
ಅಕ್ಷರ ಗಾತ್ರ

ಮೈಸೂರು: ಶ್ರವಣಬೆಳಗೊಳದಲ್ಲಿ ನಡೆ ಯುವ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಬೇಕೆಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರನ್ನು ಶುಕ್ರವಾರ ಕೋರಲಾಯಿತು.

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿ­ಷತ್ತಿನ ಅಧ್ಯಕ್ಷ ಎಚ್‌.ಎಲ್‌. ಜನಾ­ರ್ದನ್ ಅವರು ದೇವನೂರ ಮಹಾ­ದೇವ ಅವರ ಮನೆಗೆ ಭೇಟಿ ನೀಡಿ ಮನವಿ ಮಾಡಿ­ಕೊಂಡರು. ಆದರೆ, ತಾತ್ವಿಕ ಭಿನ್ನಾಭಿ­ಪ್ರಾಯಗಳಿವೆ ಎಂದು ದೇವನೂರರು ಒಪ್ಪಿಕೊಳ್ಳಲಿಲ್ಲ. ‘10ನೇ ತರಗತಿಯ­ವರೆಗೆ ಕನ್ನಡ ಭಾಷೆಯಲ್ಲಿಯೇ ಬೋಧಿಸಬೇಕು. ಇದಕ್ಕಾಗಿ ನಿರಂ­ತರವಾಗಿ ಸರ್ಕಾರವನ್ನು ಸಾಹಿತ್ಯ ಪರಿಷತ್‌ ಒತ್ತಾಯಿಸಬೇಕು.

ಆದರೆ, ಸರ್ಕಾ­ರಕ್ಕೆ ಇಚ್ಛಾಶಕ್ತಿಯ ಕೊರತೆಯಿದೆ. ಸರ್ಕಾರದ ಅನುದಾನ ಪಡೆದು ಸಮ್ಮೇ­ಳನ ಮಾಡುವುದರಿಂದ ಒತ್ತಾಯಿಸಲು ಕಷ್ಟವಾಗುತ್ತದೆ. ಸರ್ಕಾರದ ಅನುದಾನ ಬಿಟ್ಟು ಪರ್ಯಾಯ ಸಮ್ಮೇಳನ ಮಾಡೋಣ’ ಎಂದು ದೇವನೂರ ಹೇಳಿದರು. ಹಾಸನ ಜಿಲ್ಲಾ ಸಾಹಿತ್ಯ ಪರಿಷತ್ತಿನ ತ್ರೈಮಾಸಿಕ ‘ಹೊಯ್ಸಳ ಸಿರಿ’ ಪತ್ರಿಕೆ ಸಂಪಾದಕ ಅರಕಲಗೂಡು ಜಯ­ಕುಮಾರ್,  ಡಾ.ವಿಜಯೇಂದ್ರ ಹಾಗೂ ಡಾ.ತಿಮ್ಮಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT