ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನ: ಜನರ ಭಾವನೆಗೆ ಸ್ಪಂದಿಸಿ

ಅಕ್ಷರ ಗಾತ್ರ

81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ಕುರಿತಂತೆ ಉಲ್ಬಣಗೊಂಡಿರುವ ಅಂತಃಕಲಹ ದುರದೃಷ್ಟಕರ. ಎರಡು ಬಣಗಳ ಕಿತ್ತಾಟದಿಂದ ಹಾವೇರಿ ಜಿಲ್ಲಾ ಸಾಹಿ­ತ್ಯಾ­ಸಕ್ತರು  ತಮ್ಮ ಜಿಲ್ಲೆಯಲ್ಲಿ ಸಮ್ಮೇಳನ ನೋಡುವ ಸಂತೋಷದಿಂದ ವಂಚಿತರಾಗುವುದು ಸರಿಯಲ್ಲ. ದಶಕ ಗಳ ಬೇಡಿಕೆಯ ಫಲವಾಗಿ ಬಂದ ಸಮ್ಮೇಳನದ ಭಾಗ್ಯ ಜಿಲ್ಲೆಯಿಂದಲೇ ಸ್ಥಳಾಂತ­ರ­ಗೊಳ್ಳ­ಬಹುದೆಂಬ ಆತಂಕ ಎದುರಾಗಿರುವುದು ದೌರ್ಭಾಗ್ಯವೇ ಸರಿ.

ಇದೇ 26ರಂದು ಜಿಲ್ಲೆಯ ಮೋಟೆಬೆನ್ನೂರಿನಲ್ಲಿ ನಡೆಯಲಿರುವ ಪರಿಷತ್ತಿನ 12 ಸದಸ್ಯರ ಉಪ ಸಮಿತಿಯ ಸಭೆ ಅಖಂಡ ಜಿಲ್ಲೆಯ ಜನರ ಭಾವನೆಗಳಿಗೆ ಸ್ಪಂದಿಸಿ, ಜಿಲ್ಲೆ­ಯೊಳಗೆ ಯಾವ ಪ್ರದೇಶದಲ್ಲಾದರೂ ಸಮ್ಮೇಳನ ನಡೆಸುವ ನಿರ್ಣಯ ಕೈಗೊಳ್ಳಲಿ. ಕನಕ­ದಾಸರ ನಾಡು ಮತ್ತು ಸರ್ವಜ್ಞನ ವಚನ ಭೂಮಿ ಹಾವೇರಿ ಜಿಲ್ಲೆಯ ಯಾವುದೇ ಪ್ರದೇಶ­ದಲ್ಲಾದರೂ ಸಮ್ಮೇಳನ ನಡೆಯಲಿ. ಅದು ಬಿಟ್ಟು ಜಿಲ್ಲೆಯಿಂದಲೇ ಸ್ಥಳಾಂತರಗೊಂಡರೆ ಅದಕ್ಕೆ ಎರಡೂ ಬಣಗಳು ಹೊಣೆ ಹೊರ­ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT