ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ಶೀಘ್ರ ವಿಲೀನ ವರದಿ

Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎಸ್‌ಬಿಐ ಜತೆ ಸಹವರ್ತಿ ಬ್ಯಾಂಕ್‌ಗಳ ವಿಲೀನಕ್ಕೆ  ಒಂಬತ್ತು ತಿಂಗಳು ಬಾಕಿ ಇರುವಂತೆಯೇ ವಿಲೀನ ಕುರಿತ ವಿಸ್ತೃತ ಯೋಜನಾ ವರದಿ  ಸಿದ್ಧಪಡಿಸುತ್ತಿದ್ದು ಶೀಘ್ರವೇ ಸರ್ಕಾರದ ಒಪ್ಪಿಗೆಗೆ ಕಳುಹಿಸಿಕೊಡಲಿದೆ.

ಸಚಿವ ಸಂಪುಟದಿಂದ ತಾತ್ವಿಕ ಒಪ್ಪಿಗೆ ಪಡೆದ ಬಳಿಕ ಎಸ್‌ಬಿಐ, ಆರು ವಿವಿಧ ಬ್ಯಾಂಕ್‌ಗಳ ಜತೆ ಸಂಧಾನ ಪ್ರಕ್ರಿಯೆ ಆರಂಭಿಸಿದೆ. ಒಮ್ಮೆ ವಿಲೀನ ಪ್ರಕ್ರಿಯೆಯ ಯೋಜನೆ ಸಿದ್ಧವಾದರೆ, 1955ರ  ಎಸ್‌ಬಿಐನ  ಕಾಯ್ದೆಯ ಸೆಕ್ಷನ್‌ 35ರಂತೆ ಅದನ್ನು ಸರ್ಕಾರದ ಅಂತಿಮ ಒಪ್ಪಿಗೆಗೆ ಕಳುಹಿಸಲಾಗುವುದು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೆಕ್ಷನ್‌ 35ರಲ್ಲಿ ಇರುವ ನಿಯಮದಂತೆ, ಸ್ಟೇಟ್‌ ಬ್ಯಾಂಕ್‌ನ ಕೇಂದ್ರ ಮಂಡಳಿ ಮತ್ತು ನಿರ್ದೇಶಕರು ಅಥವಾ ಆಡಳಿತ ಮಂಡಳಿಯ ಒಪ್ಪಿಗೆ ಅಗತ್ಯವಿದೆ. ಇದರ ಜತೆಗೆ ಆರ್‌ಬಿಐ ಸಮ್ಮತಿಯನ್ನೂ ಪಡೆದು ಅಂತಿಮ ವರದಿಯನ್ನು ಸರ್ಕಾರದ ಒಪ್ಪಿಗೆಗೆ ಕಳುಹಿಸಿಕೊಡಬೇಕು.
ಸಹವರ್ತಿ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯು ಈ ಹಣಕಾಸು ವರ್ಷದಲ್ಲಿಯೇ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT