ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ಸರ್ ಎಂ.ವಿ ದಿನ

Last Updated 5 ಮೇ 2015, 20:02 IST
ಅಕ್ಷರ ಗಾತ್ರ

ಬೆಂಗಳೂರು:  ಸರ್‌ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆಯನ್ನು (ಸೆ.15) ಇನ್ನು ಮುಂದೆ ಸರ್ಕಾರದ ವತಿಯಿಂದ ಆಚರಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಜಲಸಂಪನ್ಮೂಲ ಇಲಾಖೆಯು ವಿಧಾನಸೌಧದಲ್ಲಿ ಮಂಗಳವಾರ ಆಯೋ ಜಿಸಿದ್ದ  ಎಸ್‌.ಜಿ. ಬಾಳೇಕುಂದ್ರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತ ನಾಡಿದ ಅವರು, ‘ಜಗತ್ತಿನ ಶ್ರೇಷ್ಠ ಎಂಜಿನಿಯರ್‌ ಆಗಿದ್ದ ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನೂ ಸ್ಥಾಪಿಸ ಲಾಗುವುದು.  ಪ್ರತಿ ವರ್ಷ ಅತ್ಯುತ್ತಮ ಸೇವೆ ಸಲ್ಲಿಸಿದ ಎಂಜಿನಿಯರ್‌ ಒಬ್ಬರಿಗೆ ಆ ಪ್ರಶಸ್ತಿಯನ್ನು ನೀಡ ಲಾಗುವುದು’ ಎಂದು ಹೇಳಿದರು.

‘ವಿಶ್ವೇಶ್ವರಯ್ಯ ನಂತರ ರಾಜ್ಯ ಕಂಡಂತಹ ಶ್ರೇಷ್ಠ ಎಂಜಿನಿಯರ್‌ ಎಂದರೆ, ಜಿ.ಎಸ್‌. ಬಾಳೇಕುಂದ್ರಿ ಅವರು. ಈಗಿನ  ಎಂಜಿನಿಯರ್‌ಗಳು ಈ ಇಬ್ಬರು ಮೇಧಾವಿಗಳು ಹಾಕಿಕೊಟ್ಟ ದಾರಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಾಕು. ಇದೇ ಎಂಜಿನಿಯರ್‌ಗಳು ರಾಜ್ಯಕ್ಕೆ ಕೊಡುವ ದೊಡ್ಡ ಕೊಡುಗೆ’ ಎಂದು ಅಭಿಪ್ರಾಯಪಟ್ಟರು.

‘ಆದರೆ, ಬಾಳೇಕುಂದ್ರಿ ಅವರ ನಂತರ  ಅವರಂತಹ ಶ್ರೇಷ್ಠ ಎಂಜಿನಿ ಯರ್‌ಗಳನ್ನು ನಮಗೆ ಕಾಣಲು ಸಾಧ್ಯ ವಾಗಿಲ್ಲ. ನಮ್ಮಲ್ಲಿ ಸಮರ್ಥ ಎಂಜಿ ನಿಯರ್‌ಗಳಿದ್ದರೂ  ಪ್ರಯತ್ನದ ಕೊರತೆ ಕಾಣುತ್ತಿದೆ’ ಎಂದರು.

ಈಗಿನ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಅಗತ್ಯ ಸೌಕರ್ಯಗಳಿಲ್ಲದಿದ್ದರೂ ವಿಶ್ವೇಶ್ವರಯ್ಯನವರ ಕಾಲದಲ್ಲಿ ನಿರ್ಮಾಣ ವಾಗಿದ್ದ ಕಟ್ಟಡಗಳು, ಅಣೆ ಕಟ್ಟುಗಳ ಗುಣಮಟ್ಟ ಅತ್ಯುತ್ತಮ ವಾಗಿದ್ದವು. ಈಗಲೂ ಕೂಡ ಅವು ದೃಢವಾಗಿವೆ. ಆದರೆ, ಆಧುನಿಕ ಸೌಲಭ್ಯ ಗಳನ್ನು ಬಳಸಿ ಈಗ ನಿರ್ಮಿಸ ಲಾಗುತ್ತಿರುವ ಕಟ್ಟಡ, ಅಣೆಕಟ್ಟುಗಳ ಗುಣಮಟ್ಟ ಕ್ಷೀಣಿಸುತ್ತಿವೆ’ ಎಂದರು. ಬಿಬಿಎಂಪಿಯಲ್ಲಿ ನಡೆದಿರುವ ಕಳಪೆ ಕಾಮಗಾರಿಗಳ ಬಗ್ಗೆ ರಾಜೇಂದ್ರ ಕುಮಾರ್ ಕಟಾರಿಯಾ ಅವರು ನೀಡಿರುವ ವರದಿಯನ್ನು ಉಲ್ಲೇಖಿಸಿದ ಅವರು, ಕಳಪೆ ಕಾಮಗಾರಿಗಳಿಗೆ ಕಾರಣರಾದ ಎಂಜಿನಿಯರ್‌ಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.

ಮುಂದಿನ ವರ್ಷದಿಂದ ಪ್ರತಿ ವರ್ಷ   ಜಿ.ಎಸ್‌. ಬಾಳೇಕುಂದ್ರಿ ಪ್ರಶಸ್ತಿ ನೀಡು ವಂತೆ ಜಲಸಂಪನ್ಮೂಲ ಸಚಿವರಿಗೆ ಸಿದ್ದ ರಾಮಯ್ಯ ಸೂಚಿಸಿದರು. ಜೊತೆಗೆ ಬಾಕಿ ಉಳಿದಿರುವ  ವರ್ಷದ ಪ್ರಶಸ್ತಿಗಳನ್ನು ಪ್ರದಾನ ಮಾಡುವಂತೆಯೂ ಸೂಚಿಸಿದ ಅವರು, ಪ್ರಶಸ್ತಿಗೆ ಅರ್ಹ ಎಂಜಿನಿಯ ರ್‌ಗಳನ್ನು ಆಯ್ಕೆ ಮಾಡುವುದಕ್ಕಾಗಿ ಸಮಿತಿ ರಚಿಸುವಂತೆಯೂ ಸಲಹೆ ನೀಡಿದರು.
ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ್‌ ಮಾತನಾಡಿ, ‘ಮಲಪ್ರಭಾ ಅಣೆಕಟ್ಟು ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಬಾಳೇಕುಂದ್ರಿ ಅವರು ಇಲ್ಲದಿದ್ದರೆ ಈ ಯೋಜನೆ ಕಾರ್ಯರೂಪಕ್ಕೆ ಬರುತ್ತಿರಲಿಲ್ಲ ಎಂಬ ಭಾವನೆ ಇದೆ’ ಎಂದು ಬಾಳೇಕುಂದ್ರಿ ಸೇವೆಯನ್ನು ಶ್ಲಾಘಿಸಿದರು.

ರಾಜ್ಯೋತ್ಸವ ಪ್ರಶಸ್ತಿಗೆ ಎಂಜಿನಿಯರ್‌ಗಳನ್ನೂ ಪರಿಗಣಿಸಬೇಕು ಎಂದು ಮುಖ್ಯಮಂತ್ರಿಗೆ ಅವರು ಮನವಿ ಮಾಡಿದರು.
ಬಾಳೇಕುಂದ್ರಿ ಅವರ ಪತ್ನಿ ಕಮಲಾ ಮಾತನಾಡಿದರು. ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ ಮಹದೇವಪ್ಪ, ಸಣ್ಣ ನೀರಾವರಿ ಸಚಿವ ಶಿವರಾಜ್‌ ಎಸ್‌. ತಂಗಡಗಿ, ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ಬಿ. ರಾಮನೂರ್ತಿ , ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್‌. ರುದ್ರಯ್ಯ, ಕೃಷ್ಣಾಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ  ಕಪಿಲ್‌ ಮೋಹನ್‌, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ ಇದ್ದರು.

15 ಜನರಿಗೆ ಪ್ರಶಸ್ತಿ: ಜಲಸಂಪನ್ಮೂಲ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 15  ಎಂಜಿನಿಯರ್‌ಗಳಿಗೆ ಬಾಳೇಕುಂದ್ರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

2007, 2008, 2009ನೇ ಸಾಲಿನ ಪ್ರಶಸ್ತಿ ಇದಾಗಿದ್ದು, ಇಲಾಖೆಯು ಪ್ರತಿ ವರ್ಷ ಐದು ಎಂಜಿನಿಯರ್‌ಗಳಿಗೆ ಈ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯು ಚಿನ್ನದ ಪದಕ,  ₨10 ಸಾವಿರ ನಗದು, ಪ್ರಶಸ್ತಿ ಫಲಕ  ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT