ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಕೆಲಸವೇನು?

Last Updated 1 ಜುಲೈ 2016, 19:30 IST
ಅಕ್ಷರ ಗಾತ್ರ

ಶಾಲಾ ಮಕ್ಕಳ ಪ್ರವೇಶ ಶುಲ್ಕ ಕುರಿತು ಕೆಲವು ನಿಯಮಗಳ ಜಾರಿಗೆ ಮತ್ತು ಶುಲ್ಕ ನಿಯಂತ್ರಣಕ್ಕೆ ಇತ್ತೀಚೆಗೆ ಹೈಕೋರ್ಟ್‌ ಆದೇಶವೊಂದನ್ನು ನೀಡಿದೆ. ಇದುವರೆಗೆ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಶುಲ್ಕದ ಕುರಿತು ಗೊಂದಲಗಳಿದ್ದವು. ಈಗ ಪ್ರಾಥಮಿಕ ಶಿಕ್ಷಣವನ್ನೂ ಇದು ಆವರಿಸಿದೆ. 

ಜನಸಾಮಾನ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್‌ ನೀಡಿದ ಆದೇಶದ ಜಾರಿಗೆ 3 ದಶಕಗಳು ಕಳೆದರೂ ಕ್ಯಾಪಿಟೇಷನ್ ಶುಲ್ಕದ ಗೊಂದಲವು ಇನ್ನೂ ಬೇರೆ ರೂಪದಲ್ಲಿ ಜನರನ್ನು ಗೋಳು ಹೊಯ್ದುಕೊಳ್ಳುತ್ತಿದೆ. ಆದರೂ ಸರ್ಕಾರವು ಶಾಶ್ವತ ಪರಿಹಾರ ನೀಡಲು ವಿಫಲವಾಗಿ, ಪ್ರತಿವರ್ಷ ಆಡಳಿತ ಮಂಡಳಿ- ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೆದು ವಿದ್ಯಾರ್ಥಿ- ಪೋಷಕರ ಆತಂಕವನ್ನು ನೂರ್ಮಡಿಗೊಳಿಸುತ್ತವೆ. ಇದೊಂದು ಸಾಮಾಜಿಕ- ಸಾರ್ವತ್ರಿಕ ಸಮಸ್ಯೆಯೆಂಬುದು ಆಡಳಿತಗಾರರ ಅರಿವಿಗೆ ಬರುವುದಿಲ್ಲವೇ? ಸಾರ್ವಜನಿಕರೇ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಪಡೆಯುವಂತಾದರೆ ಸರ್ಕಾರಗಳ ಜವಾಬ್ದಾರಿಯೇನು? 

ಇದಕ್ಕೂ ಮೀರಿ ನ್ಯಾಯಾಲಯಗಳು ಜನಪರವಾದ ತೀರ್ಮಾನವನ್ನು ಆದೇಶಿಸಿದರೆ ‘ನ್ಯಾಯಾಂಗದ ಅತಿಯಾದ ಕ್ರಿಯಾಶೀಲತೆ’ ಎಂದು ಟೀಕಿಸಲಾಗುತ್ತದೆ. ಎಲ್ಲ ಶಿಕ್ಷಣ ಸಂಸ್ಥೆಗಳ ಸ್ಥಿರ ಚರ ಸ್ವತ್ತುಗಳನ್ನು ಸರ್ಕಾರವು ಸುಪರ್ದಿಗೆ ಪಡೆದು ಅನುದಾನಕ್ಕೊಳಪಡಿಸಿದರೆ ಬಹುಶಃ ಇಂಥ ಗೋಜಲು ನಿವಾರಣೆಯಾಗಬಹುದೇನೊ. ಜನಸಾಮಾನ್ಯರಿಗೂ ಉತ್ತಮ ಶಿಕ್ಷಣ ಹೊರೆಯಾಗದು. ಸರ್ಕಾರ ಈ ನಿಟ್ಟಿನಲ್ಲಿ ಈಗಲಾದರೂ ಸ್ಪಂದಿಸುವುದೇ? 
- ಡಾ.  ಚನ್ನು ಅ. ಹಿರೇಮಠ, ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT