ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ರಚನೆಗೆ ಆಹ್ವಾನಿಸಲು ಕೋರಿದ ಅರ್ಜಿ ವಜಾ

Last Updated 20 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೆಹಲಿಯಲ್ಲಿ ರಾಜ್ಯ­ ಸರ್ಕಾರ ರಚನೆಗೆ ತನ್ನನ್ನು ಆಹ್ವಾ­ನಿಸು­ವಂತೆ ಲೆಫ್ಟಿನೆಂಟ್‌ ಗವ­ರ್ನರ್‌ ಅವ­ರಿಗೆ ನಿರ್ದೇಶನ ನೀಡ­ಬೇಕೆಂದು ಕೋರಿ ನಾಗರಿಕನೊಬ್ಬ ಸಲ್ಲಿ­ಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಮಂಗಳವಾರ ತಳ್ಳಿ­ಹಾಕಿದೆ.

ರಾಜ್ಯ ವಿಧಾನಸಭೆಯಲ್ಲಿ ತನಗೆ ಕೆಲವು ಶಾಸಕರ ಬೆಂಬಲವಿದ್ದು, ಸರ್ಕಾರ ರಚಿಸಲು ಆಹ್ವಾನಿಸ­ಬೇಕೆಂದು ಬಮ್‌ ಬಮ್‌ ಮಹಾ­ರಾಜ್‌ ಎಂಬ ದೆಹಲಿ ನಿವಾಸಿ ಸಲ್ಲಿಸಿದ್ದ ಅರ್ಜಿ­ಯನ್ನು ನ್ಯಾಯಮೂರ್ತಿಗಳಾದ ಬಿ.ಎಸ್‌. ಚೌಹಾಣ್‌ ಮತ್ತು ಎ.ಕೆ. ಸಿಕ್ರಿ ತಳ್ಳಿ­ಹಾಕಿದರು. ಅಲ್ಲದೆ, ಚುನಾಯಿತ ಸದಸ್ಯ­ನಲ್ಲದ ವ್ಯಕ್ತಿ­ಯೊಬ್ಬ ಸರ್ಕಾರ ರಚಿಸಲು ಅವ­ಕಾಶ ಕೇಳಿರುವ ಪ್ರಕರಣದ ಬಗ್ಗೆ ನ್ಯಾಯ­ಪೀಠ ಅಚ್ಚರಿ ವ್ಯಕ್ತಪಡಿಸಿತು.

ಲೆಫ್ಟಿನೆಂಟ್‌ ಗವರ್ನರ್‌ಗೆ ಹಲವು ಪತ್ರ­ಗಳನ್ನು ಬರೆದರೂ ಮತ್ತು ಶಾಸಕ­ರಾದ ವಿನೋದ್‌ ಕೆ. ಬಿನ್ನಿ, ರಣಬೀರ್‌ ಶೊಕೀನ್‌, ಅನಿಲ್‌ ಝಾ ಹಾಗೂ ಗಗನ್‌ ಸಿಂಗ್‌ ಅವರ  ಬೆಂಬಲವಿರುವ ಪತ್ರವನ್ನು ಸಲ್ಲಿಸಿದರೂ, ತನಗೆ ಸರ್ಕಾರ ರಚಿಸಲು ಅವಕಾಶ ನೀಡಿಲ್ಲ ಎಂದು  ಅರ್ಜಿ­ದಾರರು ದೂರಿದರು. ‘ಚುನಾ­ಯಿತ ಶಾಸಕರ ಬೆಂಬಲ­ದೊಂ­ದಿಗೆ ಸರ್ಕಾರ ರಚಿಸಲು ತನಗೆ ಅವ­ಕಾಶ ನಿರಾಕರಿಸಿ ಆದೇಶ ಹೊರಡಿಸಿರು­ವುದು ನಿರಂಕುಶ ಮತ್ತು ಅಸಾಂವಿಧಾ­ನಿಕ’ ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT