ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ರಚನೆಗೆ ಸತತ ಸಭೆ

Last Updated 23 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಹಿರಿಯ ನಾಯಕರು ಶುಕ್ರ­ವಾರ ಸತತ ಸಭೆ ನಡೆಸುತ್ತಿರು­ವು­ದರಿಂದ ಸರ್ಕಾರ ರಚನೆಯ ಕಾರ್ಯ ಚುರುಕು­­ಗೊಂಡಿದೆ.

ಮೋದಿ ಅವರು ಪಕ್ಷದ ಅಧ್ಯಕ್ಷ ರಾಜನಾಥ್‌ ಸಿಂಗ್, ಅಮಿತ್‌ ಷಾ, ನಿತಿನ್‌ ಗಡ್ಕರಿ ಮತ್ತು ಅರುಣ್‌ ಜೇಟ್ಲಿ ಅವರ ಜತೆ ಗುಜರಾತ್ ಭವನ­ದಲ್ಲಿ  ಮಾತುಕತೆ ನಡೆಸಿದರು. ಈ ಸಭೆಯಲ್ಲಿ ಮೋದಿ ಸಂಪುಟ­ದಲ್ಲಿ ಯಾರು, ಯಾರು ಸಚಿವರಾಗಿರ­ಬೇಕು ಎಂಬು­ದರ ಬಗ್ಗೆ ಗಹನವಾದ ಚರ್ಚೆ ನಡೆಯಿತು ಎನ್ನಲಾಗಿದೆ. ಬೆಳಿಗ್ಗೆ ಅಕಾಲಿ ದಳದ ಮುಖ್ಯಸ್ಥ ಹಾಗೂ ಪಂಜಾಬ್‌ ಮುಖ್ಯಮಂತ್ರಿ ಪ್ರಕಾಶ್ ಸಿಂಗ್‌ ಬಾದಲ್, ಅವರ ಪುತ್ರ, ಉಪಮುಖ್ಯ­ಮಂತ್ರಿ ಸುಖಬಿರ್‌ ಬಾದಲ್ ಅವರು ರಾಜ­ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿ­ದರು. ಬಿಜೆಪಿ ಜತೆ ಮೊದಲಿನಿಂದಲೂ ಉತ್ತಮ ಬಾಂಧವ್ಯ ಹೊಂದಿರುವ ಅಕಾಲಿ ದಳಕ್ಕೆ ಒಂದು ಸಚಿವ ಸ್ಥಾನ ದೊರಕುವುದು ಖಚಿತವಾಗಿದೆ.

ಆರ್‌ಎಸ್ಎಸ್‌ ಪಾತ್ರ: ಇದೇ ಸಂದರ್ಭದಲ್ಲಿ ಆರ್ಎಸ್ಎಸ್ ಮುಖಂಡ ರಾಮ್‌ ಮಾಧವ್‌ ಅವರು ರಾಜನಾಥ್‌ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದರಿಂದ ಸಂಪುಟ ರಚನೆಯಲ್ಲಿ ಆರ್‌ಎಸ್‌ಎಸ್‌ ಪ್ರಮುಖ ಪಾತ್ರ ವಹಿಸಲಿದೆ ಎಂಬ ಸೂಚನೆ ಸಿಕ್ಕಿದೆ. ಪ್ರಮಾಣ ವಚನ ಸ್ವೀಕಾರ ಸಮಾ­ರಂಭವನ್ನು ಅದ್ದೂರಿಯಾಗಿ ನಡೆಸಲು ಬಿಜೆಪಿ ಸಿದ್ಧತೆ ನಡೆಸಿದ್ದು, ಶ್ರೀಲಂಕಾ ಅಧ್ಯಕ್ಷ­ರನ್ನು ಈ ಸಮಾರಂಭಕ್ಕೆ ಆಮಂತ್ರಿ­ಸಿರುವ ಬಗ್ಗೆ ಅಪಸ್ವರ ಎದ್ದಿದೆ.

ಬಿಜೆಪಿ ಮಿತ್ರ ಪಕ್ಷವಾದ ಎಂಡಿಎಂಕೆ ಮುಖ್ಯಸ್ಥ ವೈಕೊ ಅವರು ಮೋದಿ ಅವರನ್ನು ಭೇಟಿ ಮಾಡಿ ರಾಜ್‌ಪಕ್ಸೆ ಅವರನ್ನು ಆಮಂತ್ರಿಸಿರುವ ನಿರ್ಧಾರ­ವನ್ನು ಪುನರ್‌ಪರಿಶೀಲನೆ ಮಾಡು­ವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT