ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಮಾನ್ ಖಾನ್ ಪ್ರಕರಣ: ಮೇ 6ಕ್ಕೆ ತೀರ್ಪು

Last Updated 21 ಏಪ್ರಿಲ್ 2015, 15:46 IST
ಅಕ್ಷರ ಗಾತ್ರ

ಮುಂಬೈ(ಐಎಎನ್ ಎಸ್): ನಟ ಸಲ್ಮಾನ್ ಖಾನ್ ವಿರುದ್ಧದ ಕಾರು ಅಪಘಾತ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಮುಂಬೈ ಸೆಷನ್ಸ್ ಕೋರ್ಟ್, ಮೇ 6ಕ್ಕೆ ತೀರ್ಪು ಪ್ರಕಟಿಸಲಿದೆ. 

‘13 ವರ್ಷಗಳ ಹಿಂದೆ ನಡೆದ ಈ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರು. ಮಂಗಳವಾರ ಈ ಪ್ರಕರಣದ ವಿಚಾರಣೆ ಮುಗಿಸಲಾಗಿದೆ. ಮೇ 6ರಂದು ತೀರ್ಪು ಪ್ರಕಟಿಸಲಾಗುವುದು’ ಎಂದು ನ್ಯಾಯಮೂರ್ತಿ ಡಿ.ಡಬ್ಲ್ಯೂ. ದೇಶಪಾಂಡೆ ಅವರು ತಿಳಿಸಿದರು. 

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಗಾರಟ್ ಹಾಗೂ ಶ್ರೀಕಾಂತ್ ಶಿವಾಡೆ ಅವರು ತಮ್ಮ ವಾದವನ್ನು ಪೂರ್ಣಗೊಳಿಸಿದ ಬೆನ್ನಲ್ಲೇ, ಸೆಷನ್ಸ್ ಕೋರ್ಟ್ ತೀರ್ಪಿನ ದಿನಾಂಕ ಪ್ರಕಟಿಸಿತು.

ವಿವರ: 2002ರ ಸೆ. 28ರಂದು ಈ ಅಪಘಾತ ನಡೆದಿತ್ತು. ಸಲ್ಮಾನ್‌ ಕಾರು ಓಡಿಸುತ್ತಿದ್ದಾಗ ರಸ್ತೆ ಬದಿಯ ಬೇಕರಿಯೊಂದರ ಮುಂಭಾಗ ಮಲಗಿ ನಿದ್ರಿಸುತ್ತಿದ್ದ ಪಾದಚಾರಿಗಳ ಮೇಲೆ ಹರಿದು ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿ ನಾಲ್ವರು ಗಾಯಗೊಂಡಿದ್ದರು.

ಅಪಘಾತ ಪ್ರಕರಣದಲ್ಲಿ, ಸಲ್ಮಾನ್ ಹಿಂದಿನ ಸೀಟಿನಲ್ಲಿ ಕುಳಿತಿದ್ದು, ತಾನು ಕಾರು ಚಲಾಯಿಸುತ್ತಿದ್ದೆ ಎಂದು ಚಾಲಕ ಅಶೋಕ್ ಸಿಂಗ್ ಹೇಳಿಕೆ ನೀಡಿದ್ದ. ಆದರೆ,ಕಾರು ಚಾಲಕ ಸುಳ್ಳು ಹೇಳಿದ್ದಾನೆ ಎಂದು ಆರೋಪಿಸಿ ಸರ್ಕಾರಿ ವಕೀಲರು, ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯದಲ್ಲಿ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT