ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಲು ಹಿಟ್ ಆ್ಯಂಡ್ ರನ್ ಪ್ರಕರಣ: ವಿಚಾರಣೆ ಮುಂದೂಡಿಕೆ

Last Updated 1 ಏಪ್ರಿಲ್ 2014, 13:13 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬಾಲಿವುಡ್‌ ನಟ ಸಲ್ಮಾನ್‌ ಖಾನ್‌  ವಿರುದ್ಧ 2002ರಲ್ಲಿ ದಾಖಲಾದ ಡಿಕ್ಕಿ ಹೊಡೆದು ಪರಾರಿಯಾದ (ಹಿಟ್‌ ಆ್ಯಂಡ್  ರನ್‌) ಪ್ರಕರಣದ ವಿಚಾರಣೆಯನ್ನು ಸೆಷನ್‌ ನ್ಯಾಯಲಯ ಏ. 28ಕ್ಕೆ ಮುಂದೂಡಿದೆ.

ಪ್ರಕರಣದ ಸಾಕ್ಷಿದಾರರು ಇಂದು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ ಪೊಲೀಸರು ಚುನಾವಣಾ ಕರ್ತವ್ಯಕ್ಕೆ ತೆರಳಿರುವುದರಿಂದ ಸಾಕ್ಷಿಗಳನ್ನು ಹಾಜರುಪಡಿಸಲು ಸಮಯಾವಕಾಶ ನೀಡುವಂತೆ ತನಿಖಾಧಿಕಾರಿ ರಾಜೇಂದ್ರ ಖಾನೆ  ನ್ಯಾಯಾಧೀಶರಿಗೆ ಮನವಿ ಮಾಡಿದರು.

ಈ ಹಿನ್ನೆಲೆಯಲ್ಲಿ ಪ್ರಕರಣದ ಸಾಕ್ಷಿದಾರರು ಏ. 28 ರಂದು ನ್ಯಾಯಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾ­ಧೀ­ಶ­ರಾದ ಡಿ. ಡಬ್ಲೂ. ದೇಶಪಾಂಡೆ ಸೂಚಿಸಿದರು.

ಈ ಮೊದಲೂ ಸಹ ಸಾಕ್ಷಿದಾರರು ಮಾರ್ಚ್ 26ರಂದು ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಪ್ರಕರಣವನ್ನು ಮುಂದೂಡಲಾಗಿತ್ತು.

2002ರಲ್ಲಿ ಬಾಂದ್ರಾದ ರಸ್ತೆ ಬದಿ­ಯಲ್ಲಿ ಮಲಗಿದ್ದವರ ಮೇಲೆ ಸಲ್ಮಾನ್ ಖಾನ್ ಕಾರು ಚಲಾಯಿಸಿದ್ದರಿಂದ ಒಬ್ಬ ಮೃತ­ಪಟ್ಟಿದ್ದು, ನಾಲ್ವರು ಗಾಯಗೊಂಡಿ­ದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT