ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲಿನ ನಟನೆ ಇಷ್ಟ- ಸಾರಿಕಾ

Last Updated 6 ಡಿಸೆಂಬರ್ 2015, 19:56 IST
ಅಕ್ಷರ ಗಾತ್ರ

ಪೋಷಕ ಪಾತ್ರಗಳಲ್ಲಿ ಜನಪ್ರಿಯಗೊಂಡಿರುವ ನಟಿ ಸಾರಿಕಾ ಸವಾಲೆಸೆಯುವಂಥ ಪಾತ್ರಗಳಲ್ಲಿ ನಟಿಸುವುದು ಹೆಚ್ಚು ಇಷ್ಟ ಎಂದಿದ್ದಾರೆ. ಪಾತ್ರ ಯಾವ ರೀತಿಯದ್ದು ಎನ್ನುವುದಕ್ಕಿಂತ ಆ ಪಾತ್ರವಾಗಲು ಎದುರಾಗುವ ಸವಾಲುಗಳು ಏನು ಎಂಬುದರ ಮೇಲೆ ಪಾತ್ರಗಳನ್ನು ಒಪ್ಪಿಕೊಳ್ಳುತ್ತಾರವರು.

‘ಪಾತ್ರ ಚಿಕ್ಕದೇ ಇರಲಿ, ದೊಡ್ಡದೇ ಇರಲಿ ಅಥವಾ ಹಿರಿ ಕಿರುತೆರೆಯದ್ದೇ ಆಗಲಿ, ಅದು ಮಹತ್ವಪೂರ್ಣವಾದ ಪಾತ್ರವಾಗಿರಬೇಕು. ಅಲ್ಲದೆ ನಟನೆಗೆ ಸವಾಲೊಡ್ಡುವಂತಿರಬೇಕು. ಕಲಾವಿದನಾದವನು ಪಾತ್ರಕ್ಕೆ ಜೀವ ತುಂಬುವ ಮನಸ್ಥಿತಿ ಹೊಂದಿರಬೇಕೇ ಹೊರತು ಎಷ್ಟು ದೊಡ್ಡ ಪಾತ್ರ ಎನ್ನುವ ತರ್ಕಕ್ಕೆ ಇಳಿಯಬಾರದು’ ಎಂಬುದು ಅವರ ನಂಬಿಕೆ.

ಚಿತ್ರಕಥೆ ಮನಸ್ಸಿಗೆ ಇಷ್ಟವಾಗುವಂತಿರಬೇಕು. ಅದೇ ಮಾನದಂಡದ ಮೇಲೆ ಚಿತ್ರಗಳ ಪಾತ್ರಗಳನ್ನು ಆಯ್ದುಕೊಳ್ಳುವ ಸಾರಿಕಾ ಕಲಾವಿದ ಸಿಕ್ಕ ಪಾತ್ರದಲ್ಲಿಯೇ ಕ್ರಿಯಾಶೀಲತೆ ಮೆರೆಯುವ ಜಾಣ್ಮೆ ಹೊಂದಿರಬೇಕು ಎಂಬ ನಂಬಿಕೆ ಹೊಂದಿದ್ದಾರೆ. 54 ವರ್ಷದ ಸಾರಿಕಾ ಬಿಪಾಶಾ ಬಸು ನಟನೆಯ ‘ಡರ್‌ ಸಬ್ಕೊ ಲಗ್ತಾ ಹೈ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

‘ಈ ಚಿತ್ರದ ನಿರ್ಮಾಪಕರಾದ ಪ್ರೀತಿ ಹಾಗೂ ನಮ್ರತಾ ನನ್ನ ಬಳಿ ಸಿನಿಮಾ ಕಥೆ ಪ್ರಸ್ತಾಪಿಸಿದಾಗ ಅಭಿನಯಿಸಲು ಒಪ್ಪಿಕೊಂಡೆ. ಅದೂ ಅಲ್ಲದೆ ನಿರ್ದೇಶಕ ಸೌಮಿಕ್‌ ಸೇನ್‌ ಅವರ ಇದುವರೆಗಿನ ಸಿನಿಮಾ ಕೆಲಸಗಳು ನನಗೆ ಮೆಚ್ಚುಗೆಯಾಗಿವೆ’ ಎಂದೂ ಅವರು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT