ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಿಯಿರಿ ಬಗೆಬಗೆ ಸ್ಯಾಂಡ್‌ವಿಚ್

ನಮ್ಮೂರ ಊಟ
Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಎಗ್‌ ಸ್ಯಾಂಡ್‌ವಿಚ್‌
ಸಾಮಗ್ರಿ:
ಬ್ರೆಡ್- 10 ತುಂಡು, ಟೊಮೆಟೊ- 2, ಮೊಟ್ಟೆ- 6, ಮೆಯನೇಸ್- 4 ಟೀ ಚಮಚ, ಮೆಣಸು ಪುಡಿ- 2ಟೀ ಚಮಚ, ಪಾರ್ಸಲಿ- 2 ಟೀ ಚಮಚ, ಈರುಳ್ಳಿ- 2, ಸಾಸಿವೆ- 2 ಟೀ ಚಮಚ, ನಿಂಬೆ ರಸ- 2 ಟೀ ಚಮಚ, ಕೆಂಪು ಮೆಣಸು- 1 ಟೀ ಚಮಚ, ಲ್ಯೂಟಸ್- 2.

ವಿಧಾನ: ಬ್ರೆಡ್‌ ರೋಸ್ಟ್‌ ಮಾಡಿಕೊಳ್ಳಿ. ಮೊಟ್ಟೆ ಬೇಯಿಸಿಕೊಳ್ಳಿ. ಈರುಳ್ಳಿ, ಪಾರ್ಸಲಿ, ಮೆಯನೆಸ್, ಉಪ್ಪು, ಕೆಂಪುಮೆಣಸು, ಮೆಣಸು, ನಿಂಬೆ ರಸ ಮತ್ತು ಸಾಸಿವೆ ಒಂದು ಪಾತ್ರೆಯಲ್ಲಿ ಹಾಕಿ ಮೊಟ್ಟೆಯ ತುಂಡುಗಳನ್ನು ಮಿಕ್ಸ್‌ ಮಾಡಿ. ಬ್ರೆಡ್ಡಿನ ತುಂಡುಗಳ ಮೇಲೆ ಇದನ್ನು ಸಮವಾಗಿ ಹಚ್ಚಿ. ಇದರ ಮೇಲೆ ಲ್ಯೂಟಸ್ ಎಲೆಗಳು ಬೇಕಿದ್ದರೆ ಟೊಮೆಟೊ ಸ್ಲೈಸ್‌ ಇಡಿ. ಮತ್ತೊಂದು ಬ್ರೆಡ್ಡಿನ ತುಂಡನ್ನು ಮುಚ್ಚಿ.
***
ಗ್ರಿಲ್‌ ಚಿಕನ್‌ ಸ್ಯಾಂಡ್‌ವಿಚ್‌
ಸಾಮಗ್ರಿ: ಕತ್ತರಿಸಿದ ಬ್ರೆಡ್ ತುಂಡು- 10, ಚಿಕನ್‌ ಪೀಸ್‌ - 200 ಗ್ರಾಂ (ಮೂಳೆರಹಿತ), ಮೊಟ್ಟೆ- 2, ಬ್ರೆಡ್ ಪುಡಿ- 100 ಗ್ರಾಂ,  ಚಿಕನ್ ಸಾಸೇಜ್ - 200 ಗ್ರಾಂ, ಟೊಮೆಟೊ - 2, ಲೆಟ್ಯೂಸ್ ಎಲೆ- ಸ್ವಲ್ಪ, ಮಾಯೋನ್ನೀಸ್ - ಒಂದು ಚಮಚ.

ವಿಧಾನ: ಚಿಕನ್ ಸಾಸೇಜ್ ಮತ್ತು ಚಿಕನ್‌ ಅನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ ಮುಕ್ಕಾಲು ಪಾಲು ಬೇಯುವವರೆಗೆ ಗ್ರಿಲ್‌ನಲ್ಲಿ ಹುರಿಯಿರಿ. ಬ್ರೆಡ್  ಪೀಸ್‌ಗಳ ಮೇಲೆ ಮಾಯೋನ್ನೀಸ್ ಸವರಿ. ಇದರ ಮೇಲೆ ಬೆಂದ ಚಿಕನ್‌ ಮತ್ತು ಸಾಸೇಜ್ ತುಂಡುಗಳನ್ನು ಹರಡಿ. ಇದರ ಮೇಲೆ ಟೊಮೆಟೊ ಸ್ಲೈಡ್‌ಗಳನ್ನು ಹರಡಿ ಅದರ ಮೇಲೆ ಇನ್ನೂ ಕೊಂಚ ಚಿಕನ್‌, ಲೆಟ್ಯೂಸ್ ಮತ್ತು ಸಾಸೇಜ್ ತುಂಡುಗಳನ್ನು ಹರಡಿ. ಹೀಗೆ ರಿಪೀಟ್‌ ಮಾಡಿ. ಬಳಿಕ ಇನ್ನೊಂದು ಬ್ರೆಡ್ ತುಣುಕನ್ನು ಇದರ ಮೇಲಿಟ್ಟು ಮೃದುವಾಗಿ ಒತ್ತಿ.

ಮೊಟ್ಟೆಯನ್ನು ಗೊಟಾಯಿಸಿ ಆ ದ್ರವದಲ್ಲಿ ಈ ಇಡಿಯ ತುಣುಕನ್ನು ಮುಳುಗಿಸಿ ಹೊರತೆಗೆಯಿರಿ. ನಂತರ ತಟ್ಟೆಯಲ್ಲಿ ಬ್ರೆಡ್ ತುಣುಕುಗಳನ್ನು ಹರಡಿ, ಇದರ ಮೇಲೆ ಮೊಟ್ಟೆ ಲೇಪಿಸಿದ ಸ್ಯಾಂಡ್‌ವಿಚ್ ಹೊರಳಾಡಿಸಿ ಬ್ರೆಡ್ ತುಣುಕುಗಳು ಹೊರಮೈಗೆ ಅಂಟಿಕೊಳ್ಳುವಂತೆ ಮಾಡಿ. ನಂತರ ಬಾಣಲೆ ಮೇಲಿಟ್ಟು ಚಿಕ್ಕ ಉರಿಯಲ್ಲಿ ಕಂದುಬಣ್ಣ ಬರುವವರೆಗೆ ಬಿಸಿಮಾಡಿ.
***
ಫ್ರೂಟ್ ಸ್ಯಾಂಡ್ ವಿಚ್
ಸಾಮಗ್ರಿ: ಸ್ವೀಟ್ ಬ್ರೆಡ್ - 15 ಸ್ಲೈಸ್‌ಗಳು, ಪೈನಾಪಲ್  (ಹೆಚ್ಚಿದ್ದು) 2 ಕಪ್, ದ್ರಾಕ್ಷಿ ಹಣ್ಣು - 3 ಕಪ್, ಸಕ್ಕರೆ ಪುಡಿ - ಅರ್ಧ ಕಪ್, ನೀರು -1 ಕಪ್, ಕ್ರೀಮ್ - 200 ಗ್ರಾಂ.

ವಿಧಾನ: ಒಂದೂವರೆ ಲೋಟ ನೀರಿಗೆ 8 ಟೀ ಚಮಚ ಸಕ್ಕರೆ ಪುಡಿ ಸೇರಿಸಿ. ಕ್ರೀಮ್ ಅನ್ನು ಚೆನ್ನಾಗಿ ಬೀಟ್ ಮಾಡಿ. ಇದಕ್ಕೆ ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಫ್ರಿಜ್‌ನಲ್ಲಿಡಿ. ಬ್ರೆಡ್ ಸ್ಲೈಸ್ ಗಳಿಗೆ ಎರಡೂ ಕಡೆ ಸಕ್ಕರೆ ನೀರನ್ನು ಚಿಮುಕಿಸಿ. ಒಂದು ಬ್ರೆಡ್ ಮೇಲೆ ಒಂದು ದಪ್ಪ ಪದರ ಫ್ರಿಡ್ಜ್‌ನಲ್ಲಿಟ್ಟ ಕ್ರೀಮ್ ಹರಡಿ. ಇದರಮೇಲೆ ಪೈನಾಪಲ್ ಚೂರುಗಳು ಮತ್ತು ದ್ರಾಕ್ಷಿ ಹಣ್ಣುಗಳನ್ನು ಧಾರಾಳವಾಗಿ ಉದುರಿಸಿ. ಇದರ ಮೇಲೆ ಇನ್ನೊಂದು ಬ್ರೆಡ್ ಸ್ಲೈಸ್ ಇಟ್ಟರೆ ಮುಗಿಯಿತು.
***
ಮಂಡಕ್ಕಿ ಸ್ಯಾಂಡ್‌ವಿಚ್
ಸಾಮಗ್ರಿ: ಮಂಡಕ್ಕಿ (ಪುರಿ)- 100 ಗ್ರಾಂ, ಬ್ರೆಡ್ ತುಂಡುಗಳು-10, ಆಲೂಗಡ್ಡೆ- 1, ಕ್ಯಾರೆಟ್- 1, ಈರುಳ್ಳಿ-1, ಟೊಮೆಟೊ- 1, ಲಿಂಬೆ ರಸ -1 ಚಮಚ, ಪುದೀನಾ ಚಟ್ನಿ -1, ಉಪ್ಪು - ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು - ಸ್ವಲ್ಪ, ಸೇವ್ - ಸ್ವಲ್ಪ, ಪುದೀನಾ ಎಲೆಗಳು - 1 ಕಟ್ಟು, ಕೊತ್ತಂಬರಿ ಸೊಪ್ಪು- 1 ಕಟ್ಟು, ಹಸಿಮೆಣಸು- 2.

ವಿಧಾನ: ಪುದೀನಾ ಎಲೆಗಳು, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪೇಸ್ಟ್‌ ಮಾಡಿಕೊಳ್ಳಿ. ಇದಕ್ಕೆ ಉಪ್ಪು, ನೀರು ಹಾಕಿ ಇನ್ನೊಂದು ಸುತ್ತು ತಿರುಗಿಸಿ, ಪಕ್ಕಕ್ಕೆ ತೆಗೆದಿಡಿ. ಈರುಳ್ಳಿ, ಟೊಮೆಟೊ, ಆಲೂಗಡ್ಡೆ, ಕ್ಯಾರೆಟ್ ಮತ್ತು ಮಂಡಕ್ಕಿಯನ್ನು (ಪುರಿ) ಕಲಸಿಕೊಳ್ಳಿ. ಇದಕ್ಕೆ ಮೇಲೆ ರುಬ್ಬಿಟ್ಟುಕೊಂಡ ಪುದೀನಾ ಚಟ್ನಿಯನ್ನು ಸ್ವಲ್ಪವೇ ಸೇರಿಸಿ. ಲಿಂಬೆ ರಸ ಮತ್ತು ಉಪ್ಪನ್ನು ಹಾಕಿ ಮಿಕ್ಸ್‌ ಮಾಡಿ. ಸೇವ್ ಮತ್ತು ಕೊತ್ತಂಬರಿ ಸೊಪ್ಪನ್ನು ಇದಕ್ಕೆ ಸೇರಿಸಿ ಮಿಶ್ರ ಮಾಡಿ ಒಂದೆಡೆ ಇಡಿ. ಬ್ರೆಡ್ ತುಂಡಿನ ಮೇಲೆ ಪುದೀನಾ ಚಟ್ನಿಯನ್ನು ಸವರಿ. ಈ ಚಟ್ನಿಯ ಮೇಲೆ ಪುರಿಯ ಮಿಕ್ಸ್‌ ಹಾಕಿ. ಮೇಲೆ ಇನ್ನೊಂದು ಬ್ರೆಡ್ ತುಂಡನ್ನು ಇರಿಸಿದರೆ ಮುಗಿಯಿತು.
***
ಸೌತೆಕಾಯಿ ಸ್ಯಾಂಡ್‌ವಿಚ್
ಸಾಮಗ್ರಿ:
ಸೌತೆಕಾಯಿ1, ಬ್ರೆಡ್ ತುಂಡು 6, ಕಾಳು ಮೆಣಸಿನ ಪುಡಿ- ಚಿಟಿಕೆ, ಸ್ವಲ್ಪ ಚೀಸ್, ಬೆಣ್ಣೆ 2 ಚಮಚ, ರುಚಿಗೆ- ಉಪ್ಪು, ಚಾಟ್ ಮಸಾಲ- ಚಿಟಿಕೆ.

ವಿಧಾನ: ಸೌತೆಕಾಯಿಯನ್ನು ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿ. ಬ್ರೆಡ್ಡಿಗೆ ಬೆಣ್ಣೆ ಸವರಿ. ಇದಕ್ಕೆ ಚೀಸ್ ಹಾಕಿ ಸೌತೆ ಕಾಯಿ ಹಾಕಿ, ಕರಿ ಮೆಣಸಿನ ಪುಡಿ, ಉಪ್ಪು, ಚಾಟ್ ಮಸಾಲ ಪುಡಿ ಮತ್ತೊಂದು ಬ್ರೆಡ್ ನಿಂದ ಕವರ್ ಮಾಡಿ. ತವಾಕ್ಕೆ ಬೆಣ್ಣೆ ಸವರಿ ಅದರಲ್ಲಿ ಬ್ರೆಡ್ ಇಟ್ಟು ಎರಡೂ ಬದಿ ರೋಸ್ಟ್ ಮಾಡಿದರೆ ಸೌತೆಕಾಯಿಯ ಸ್ಯಾಂಡ್ ವಿಚ್ ಸವಿಯಲು ಸಿದ್ಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT