ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂತ್ವನಕ್ಕೆ ಸಾಮಾಜಿಕ ಜಾಲತಾಣ ಬಳಕೆ

ಸಚಿವ ಎಸ್‌.ಆರ್.ಪಾಟೀಲ ಅವರಿಂದ ಇ–ಮೇಲ್ ಸಂದೇಶ
Last Updated 4 ಆಗಸ್ಟ್ 2015, 9:17 IST
ಅಕ್ಷರ ಗಾತ್ರ

ಬಾಗಲಕೋಟೆ: ರೈತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಸಚಿವ ಎಸ್. ಆರ್. ಪಾಟೀಲ ಅವರು ರೈತ ಬಾಂಧವರನ್ನು ಉದ್ದೇಶಿಸಿ ನೀಡಿರುವ ‘ಇ–ಸಂದೇಶ’ ವಾಟ್ಸ್ಆಪ್, ಫೇಸ್‌ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

ಹಾಗೆಯೇ ಬಾಗಲಕೋಟೆ ಮತ್ತು ವಿಜಯಪುರ ಅವಳಿ ಜಿಲ್ಲೆಗಳ ಮೊಬೈಲ್ ಬಳಕೆದಾರರಿಗೆ ಧ್ವನಿಮುದ್ರಿತ ಸಂದೇಶ ಹೋಗುತ್ತಿದೆ. ಎದೆಗುಂದಿರುವ ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಸಚಿವರು ಕೈಗೊಂಡಿರುವ ಮೊದಲ ಯತ್ನ ಇದಾಗಿದೆ.

ಸಚಿವರ ಸಂದೇಶ ಇಂತಿದೆ: ನಮಸ್ಕಾರ, ನಾನು ಎಸ್. ಆರ್. ಪಾಟೀಲ, ಮಾಹಿತಿ ತಂತ್ರಜ್ಞಾನ ಸಚಿವ ಮಾತಾಡ್ತಾ ಇದ್ದೇನೆ. ಆತ್ಮೀಯ ರೈತ ಬಂಧುಗಳೇ, ಮೇಲಿಂದ ಮೇಲೆ ಘಟಿಸುತ್ತಿರುವ ರೈತರ ಆತ್ಮಹತ್ಯೆ ಗಳು ನನ್ನ ಮನಸ್ಸನ್ನು ತೀವ್ರ ಘಾಸಿಗೊಳಿ ಸಿವೆ. ಪ್ರಾಣತೆತ್ತ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ನನ್ನಲ್ಲಿ ಪದಗಳಿಲ್ಲ. ಆದರೆ, ಒಬ್ಬ ರೈತನ ಮಗನಾಗಿ ರೈತರ ಕಷ್ಟ-ಕಾರ್ಪಣ್ಯಗಳನ್ನ ಖಂಡಿತವಾಗಿಯೂ ಅರ್ಥ ಮಾಡಿಕೊಳ್ಳಬಲ್ಲೆ.

ನಾವೆಲ್ಲ ರೈತರ ಮಕ್ಕಳು. ದೇಶಕ್ಕೇ ಅನ್ನ ನೀಡಬೇಕಾದವರು. ನಮ್ಮೆಲ್ಲರ ಬದುಕಿನಲ್ಲಿ ಕಷ್ಟ-ನಷ್ಟ, ಸೋಲು-ಗೆಲುವುಗಳು ಸಾಮಾನ್ಯ. ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಮನುಷ್ಯನೊಬ್ಬ ಒತ್ತಡಕ್ಕೆ ಸಿಲುಕುವುದು ಸಹಜ. ಆದರೆ, ಮನಸ್ಸು ದುರ್ಬಲ ಮಾಡಿಕೊಂಡು ವಿಪರೀತ ಕ್ರಮಕ್ಕೆ ಮುಂದಾಗುವುದು ಸರಿಯಲ್ಲ. ಮನೆ ಯಜಮಾನನನ್ನು ಕಳೆದು ಕೊಂಡಾಗ ಅದರಿಂದ ಕುಟುಂಬದ ಮೇಲೆ ಆಗುವ ಪರಿಣಾಮ ಘೋರ. ನಾವೇ ಇಲ್ಲವಾದರೆ ನಮ್ಮನ್ನೇ ಅವಲಂಬಿ ಸಿದ ಹೆಂಡತಿ-,ಮಕ್ಕಳ, ತಂದೆ-ತಾಯಂ ದಿರ ಗತಿಯೇನಾಗಬೇಕು? ಮಕ್ಕಳ ವಿದ್ಯಾಭ್ಯಾಸ, ಅವರ ಭವಿಷ್ಯ ರೂಪಿಸುವ ಗುರುತರ ಜವಾಬ್ಧಾರಿ ನಮ್ಮ ಮೇಲಿದೆ ಎಂಬುದನ್ನು ನಾವು ಮರೆಯ ಬಾರದು.

ರೈತಮಿತ್ರರಲ್ಲಿ ನನ್ನ ಕಳಕಳಿಯ ವಿನಂತಿ. ಖಾಸಗಿ ಬಡ್ಡಿ ಲೇವಾದೇವಿದಾರ ರಿಂದ ಸಾಲಪಡೆಯುವುದನ್ನು ಆದಷ್ಟು ನಿಲ್ಲಿಸಿ. ಸಾಲ ಪಡೆಯುವುದು ಅನಿವಾ ರ್ಯವಾದರೆ ಸಹಕಾರ ಸಂಘಗಳು, ಬ್ಯಾಂಕುಗಳಲ್ಲಿಯೇ ವ್ಯವಹರಿಸಿ. ಯಾವ ಯಾವ ಬೆಳೆಗೆ ವಿಮೆಸೌಲಭ್ಯ ಇದೆಯೋ ಅದನ್ನು ತಪ್ಪದೇ ಪಡೆದುಕೊಳ್ಳಿ.

ನಾನು ಖಾಸಗಿ ಬಡ್ಡಿ ಲೇವಾದೇವಿ ದಾರರು ಹಾಗೂ ಉದ್ರಿ ನೀಡುವ ಅಂಗಡಿಕಾರರಲ್ಲಿಯೂ ಕಳಕಳಿಯ ಮನವಿ ಮಾಡುತ್ತೇನೆ. ರೈತನೊಬ್ಬ ಸಂಕಷ್ಟದಲ್ಲಿದ್ದಾಗ ಸಾಲ ಹಿಂತಿರುಗಿಸು ವಂತೆ ಇನ್ನಷ್ಟು ಒತ್ತಡ ಹೇರಬೇಡಿ. ಸ್ವಲ್ಪ ಕಾಲಾವಕಾಶ ನೀಡಿ. ಸ್ವಾಭಿಮಾನಿ ರೈತ ಯಾರ ಋಣದಲ್ಲಿಯೂ ಬದುಕಲು ಇಚ್ಛಿ ಸುವುದಿಲ್ಲ. ಬೆಳೆ ಕೈಹತ್ತಿದ ತಕ್ಷಣವೇ ನಿಮ್ಮ ಸಾಲ ಮರುಪಾವತಿ ಮಾಡುತ್ತಾನೆ.

ಮಿತ್ರರೆ, ಸಮೂಹ ಸನ್ನಿಗೆ ಒಳಗಾದ ವರಂತೆ ಎಲ್ಲರೂ ಒಂದೇ ಬೆಳೆಯನ್ನು ಬೆಳೆಯುವುದು ಬೇಡ. ನಿರ್ದಿಷ್ಟ ಕೃಷಿ ಉತ್ಪನ್ನಗಳಿಗೆ ಇರುವ ಬೇಡಿಕೆ ಹಾಗೂ ಪೂರೈಕೆ ಪ್ರಮಾಣದಲ್ಲಿ ಇರುವ ವ್ಯತ್ಯಾಸವನ್ನು ತಿಳಿದುಕೊಂಡು ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಮಾಡೋಣ. ಹಾಗೆಯೇ ನೀರಿನ ಲಭ್ಯತೆ, ನಮ್ಮಲ್ಲಿನ ಮಣ್ಣು, ಹವಾಗುಣಕ್ಕೆ ತಕ್ಕಂತೆ ಆದಷ್ಟು ಕಡಿಮೆ ವೆಚ್ಚದಲ್ಲಿ ಬೇರೆ-ಬೇರೆ ಬೆಳೆ ಬೆಳೆಯೋಣ. ಇದಕ್ಕಾಗಿ ಕೃಷಿ ತಜ್ಞರ ಹಾಗೂ ಸಂಬಂಧಪಟ್ಟ ಇಲಾಖೆಗಳ ಸಲಹೆ-ಸೂಚನೆ ಪಡೆಯೋಣ. ಹೀಗಾ ದಾಗ ಬೇಸಾಯ ಖಂಡಿತವಾಗಿಯೂ ಲಾಭದಾಯಕ ವೃತ್ತಿಯಾಗಲು ಸಾಧ್ಯ.

ರೈತರ ಉಪಯೋಗಕ್ಕೆ ನಾವು ಕೂಡಾ ‘ನಮ್ಮ ರೈತ’ ಎಂಬ ತಂತ್ರಾಂಶ ಆಧಾರಿತ ಸಾಧನವೊಂದನ್ನು ಖಾಸಗಿ ಯಾಗಿ ಅಭಿವೃದ್ಧಿಪಡಿಸಿದ್ದೇವೆ. ಬಾಗಲ ಕೋಟೆ ಹಾಗೂ ವಿಜಯಪುರ ಅವಳಿ ಜಿಲ್ಲೆಗಳ 1500 ಹಳ್ಳಿಗಳಲ್ಲಿ ರೈತ ಮಂಡಳಿಗಳನ್ನು ರಚಿಸಿ ಉಚಿತವಾಗಿ ನಮ್ಮ ರೈತ ಟ್ಯಾಬ್‌ಗಳನ್ನು ನೀಡಿದ್ದೇವೆ. ಇದರಲ್ಲಿ ಕೃಷಿಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳಿಗೆ ಮಾಹಿತಿ, ಪರಿಹಾರ ಒದಗಿಸುವ ಪ್ರಯತ್ನ ಮಾಡಿದ್ದೇವೆ. ಇದಕ್ಕಾಗಿ ಒಂದು ಕಾಲ್ ಸೆಂಟರ್ ಕೂಡಾ ಸ್ಥಾಪಿಸಿದ್ದೇವೆ. ತಮಗೆ ಏನೇ ಸಮಸ್ಯೆ ಇದ್ದರೂ ದಯವಿಟ್ಟು ದೂರವಾಣಿ ಸಂಖ್ಯೆ 08354-233755 ಕ್ಕೆ ಕರೆಮಾಡಿ.

ರೈತಬಂಧುಗಳೇ ನಿಮ್ಮಲ್ಲಿ ನಾನು ಮತ್ತೊಮ್ಮೆ ಕಳಕಳಿಯಿಂದ ವಿನಂತಿ ಮಾಡುತ್ತೇನೆ. ಮನಸ್ಸನ್ನು ದುರ್ಬಲ ಮಾಡಿಕೊಂಡು ಅನುಚಿತ ಕ್ರಮಕ್ಕೆ ಮುಂದಾಗುವುದು ಬೇಡ. ನಮ್ಮ ಮಕ್ಕಳಿಗೆ ಭವ್ಯ ಭವಿಷ್ಯ ವನ್ನ ಕಟ್ಟಿ ಕೊಡೋಣ. ಸಂಕಲ್ಪವಾಗಲಿ, ನಮಸ್ಕಾರ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT