ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಪಠ್ಯ ರೂಪುಗೊಳ್ಳಲಿ: ಬಾಲಕೃಷ್ಣ

Last Updated 18 ಡಿಸೆಂಬರ್ 2014, 9:22 IST
ಅಕ್ಷರ ಗಾತ್ರ

ಉಡುಪಿ: ‘ಭಾರತವು ವಿಶ್ವದಲ್ಲಿಯೇ ಉತ್ತಮ ಸಾಂಸ್ಕೃತಿಕ ನೆಲೆಗಟ್ಟನ್ನು ಹೊಂದಿರುವ ದೇಶವಾಗಿದ್ದು, ಅದರ ತಳಹದಿಯ ಮೇಲೆಯೇ ಶೈಕ್ಷಣಿಕ ಪಠ್ಯ ಕ್ರಮ ರೂಪುಗೊಳ್ಳಬೇಕು’ ಎಂದು ಶಿವಮೊಗ್ಗ ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಬಾಲಕೃಷ್ಣ ಹೆಗಡೆ ಹೇಳಿದರು.

ಶ್ರೀಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ‘ಪ್ರಸ್ತುತ ಸಂದರ್ಭಕ್ಕೆ ಅನುಸಾರವಾಗಿ ಸಮಾಜ ವಿಜ್ಞಾನ ಕೋರ್ಸ್‌ಗಳ ಪುನ ರ್‌ರಚನೆ’ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ತಾಂತ್ರಿಕ ಗೋಷ್ಠಿ ಯಲ್ಲಿ ಅವರು ಮಾತನಾಡಿದರು.

ಇಡೀ ವಿಶ್ವವೇ ಭಾರತದ ಪ್ರಾಚೀನ ಗ್ರಂಥಗಳತ್ತ ಇಣುಕಿ ನೋಡುತ್ತಿದೆ. ಭಾರತೀಯರು ಕಂಡು ಹಿಡಿದ ಅನೇಕ ವೈಜ್ಞಾನಿಕ ವಿಷಯಗಳನ್ನು ವಿದೇಶಿ ಯರು ತಮ್ಮದು ಎಂದು ಬಿಂಬಿಸಿ ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪಾಶ್ಚಿ ಮಾತ್ಯ ಪ್ರಭಾವದ ನೆರಳಲ್ಲಿ ಈಗಿನ ಪಠ್ಯಕ್ರಮಗಳು ರಚಿತವಾಗಿದ್ದು,  ಸ್ವಾತಂತ್ರ್ಯ ಬಂದು ಆರು ದಶಕಗಳೇ ಕಳೆದರೂ ಅದನ್ನು ಬದಲಿಸಿ ಪಠ್ಯಕ್ರಮ ದಲ್ಲಿ ದೇಸಿತನವನ್ನು ಅಳವಡಿಸಿ ಪ್ರಗತಿ ಸಾಧಿಸಲಾಗುತ್ತಿಲ್ಲ ಎಂದು ವಿಷಾದಿಸಿದರು.

ಪ್ರಾಚೀನ ಭಾರತದಲ್ಲಿ ಧರ್ಮ ಮತ್ತು ರಾಜಕೀಯ ಜೊತೆಯಾಗಿಯೇ ಇರ ಬೇಕೆಂಬ ಪ್ರತಿಪಾದನೆ ಇತ್ತು. ಅದಕ್ಕಾಗಿಯೇ ರಾಜಧರ್ಮದ ಆಡಳಿತ ಇರಬೇಕೆಂದು ಹೇಳಿರುವುದನ್ನು ಪ್ರಾಚೀನ ಗ್ರಂಥಗಳಲ್ಲಿನ ಉಲ್ಲೇಖಿಸುತ್ತವೆ. ಆದರೆ ಈಗ ಧರ್ಮ ಪದದ ಅರ್ಥವನ್ನೇ ಅಪಾರ್ಥ ಮಾಡಿಕೊಂಡು ರಾಜಕೀಯದಿಂದ ಬೇರ್ಪಡಿಸುವ ಚರ್ಚೆ ನಡೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಯೋಚಿಸ ಬೇಕಾಗಿದೆ ಎಂದರು.

ಮೂಡುಬಿದಿರೆಯ ಡಾ.ಸನ್ಮತಿ ಕುಮಾರ್, ಅಜ್ಜರಕಾಡು ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕಿ ಅಶ್ವಿನಿ ಪ್ರಬಂಧ ಮಂಡಿ ಸಿದರು. ಪ್ರಾಂಶುಪಾಲೆ ಡಾ.ಮಾಧವಿ ಎಸ್.ಭಂಡಾರಿ, ಸಂಘಟನಾ ಕಾರ್ಯ ದರ್ಶಿ ಪ್ರೊ. ದುರ್ಗಾಲಕ್ಷ್ಮೀ, ಪಿಪಿಐಎಂ ನಿರ್ದೇಶಕ ಪ್ರೊ.ಎಂ.ಆರ್.ಹೆಗಡೆ, ಶ್ರೀಲತಾ ಆಚಾರ್ಯ ಉಪಸ್ಥಿತರಿದ್ದರು. ಉಪನ್ಯಾಸಕಿ ಗೌರಿ ಶೆಣೈ, ಲವಿಟಾ ಡಿಸೋಜ, ರಾಘವೇಂದ್ರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT