ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕರಿಗೆ ಕೆಂಗಲ್‌ ಪ್ರಶಸ್ತಿ ಪ್ರದಾನ

Last Updated 27 ಜುಲೈ 2014, 20:18 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ಕೆಂಗಲ್‌ ಹನುಮಂತಯ್ಯ ವಾಲಿಬಾಲ್‌ ಸಂಸ್ಥೆ ವತಿಯಿಂದ ಹುರಳಿ ಚಿಕ್ಕನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತರಬನಹಳ್ಳಿಯ ಹನುಮಕ್ಕ ಗಿರಿಯಪ್ಪ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸು ತ್ತಿರುವವರಿಗೆ ಕೆಂಗಲ್‌ ಹನುಮಂತಯ್ಯ ಪ್ರಶಸ್ತಿ ಪ್ರದಾನ  ಮಾಡಲಾಯಿತು.

ಸಮಾಜ ಸೇವಕ ಭೈಲಪ್ಪ, ರಂಗ­ಭೂಮಿ ಕಲಾವಿದ ಎನ್‌. ಗೋಪಿ­ನಾಥ್‌, ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಶ್ವೇತಾ ನಾಯ್ಡು, ಸಮಾಜ ಸೇವಕ ಕೊಯಿರ ಮೂರ್ತಿ, ಸಾರಿಗೆ ಇಲಾಖೆಯ ಬಿ.ಜಿ. ಸಂಜೀವಯ್ಯ, ಶಿಕ್ಷಣ ಇಲಾಖೆ ಬಿ.ಜಿ. ಮೀನಾಕ್ಷಿ, ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಕುಮಾರ್‌, ಸಮಾಜ ಸೇವಕ ಎನ್‌. ಲೋಕೇಶ್‌, ರಾಷ್ಟ್ರ ಪ್ರಶಸ್ತಿ ವಿಜೇತ ಟಿ.ವಿ.ರಾಮಚಂದ್ರ, ರಾಷ್ಟ್ರೀಯ ವಾಲಿ­ಬಾಲ್‌ ಆಟಗಾರ್ತಿ ಮೈತ್ರಿ ಅರವಿಕಟ್ಟಿ, ವೈದ್ಯಾಧಿಕಾರಿ ಡಾ.ಮಾನಸ, ಆರ್‌.ಕೆ. ವಿದ್ಯಾಸಂಸ್ಥೆ ಸಂಸ್ಥಾಪಕರಾದ ಸುನಿತ, ನಟ ಎಂ.ಎ.ಅರವಿಂದ್‌, ಎಚ್‌ಎಂಟಿ ನಿವೃತ್ತ ಕಾರ್ಮಿಕ ಶೆಟ್ಟಿಹಳ್ಳಿ ಬೋರೇ­ಗೌಡ ಅವರಿಗೆ ಪ್ರಶಸ್ತಿ ನೀಡಲಾಯಿತು.

ಶಾಸಕ ಡಾ.ಶ್ರೀನಿವಾಸ ಮೂರ್ತಿ, ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ, ನಗರ ಜಿಲ್ಲಾ ಪಂಚಾಯ್ತಿ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಜಿ.ಜಯರಾಂ, ಜಿಲ್ಲಾ ಪಂಚಾಯ್ತಿ ಸದಸ್ಯೆ ಜಯಮ್ಮ ಚಿಕ್ಕಭೈಲಪ್ಪ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಎಂ.ನಾರಾಯಣಸ್ವಾಮಿ, ಸಂಸ್ಥೆಯ ಕಾರ್ಯದರ್ಶಿ ಬಿ.ಬೊಮ್ಮಲಿಂಗಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT