ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯ ಕದಡುವವರ ವಿರುದ್ಧ ಕಠಿಣ ಕ್ರಮ

Last Updated 4 ಮಾರ್ಚ್ 2015, 11:34 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೋಮು ಸಾಮರಸ್ಯ ಕದಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಸರ್ಕಾರ ಬುಧವಾರ ಭರವಸೆ ನೀಡಿದೆ. ಅಲ್ಲದೇ, ಕಳೆದ ವರ್ಷದ ಕೊನೆಯಲ್ಲಿ ಇಂಥ ಪ್ರಕರಣ ಸಂಖ್ಯೆ ಇಳಿಕೆಯಾಗಿತ್ತು. ಆದರೆ ಈ ವರ್ಷದ ಜನವರಿಯಲ್ಲಿ ಮತ್ತೆ ಅವು ಹೆಚ್ಚಿವೆ ಎಂದು ಸರ್ಕಾರ ರಾಜ್ಯಸಭೆಯಲ್ಲಿ ಹೇಳಿದೆ.

‘ಕೋಮು ಸಾಮರಸ್ಯ ಕಲಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಳಿದರು.

ಅಲ್ಲದೇ, ಕೋಮು ಸಾಮರಸ್ಯದ ‘ಆರೋಗ್ಯಕರ ವಾತಾವರಣ’ವನ್ನು ಇಂಥ ಪ್ರಕರಣಗಳಿಂದ ಅಳೆಯಲಾಗದು ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

2014ರ ಅಕ್ಟೋಬರ್ ತಿಂಗಳಿನಿಂದ ನಡೆದಿರುವ ಕೋಮು ಸಾಮರಸ್ಯ ಕದಡುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು, ‘2014ರ ಅಕ್ಟೋಬರ್ ತಿಂಗಳನಿಂದ 2014ರ ಡಿಸೆಂಬರ್‌ವರೆಗೂ ಇಂಥ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು’ ಎಂದರು.

ಸದನಕ್ಕೆ ತಿಳಿಸಿದ ಮಾಹಿತಿ ಪ್ರಕಾರ, 2014ರ ಅಕ್ಟೋಬರ್‌ನಲ್ಲಿ ಇಂಥ 72 ಪ್ರಕರಣಗಳು, ನವೆಂಬರ್‌ನಲ್ಲಿ 49 ಹಾಗೂ ಡಿಸೆಂಬರ್‌ನಲ್ಲಿ 33 ಪ್ರಕರಣಗಳು ವರದಿಯಾಗಿದ್ದವು. ಆದರೆ 2015ರ ಜವನರಿಯಲ್ಲಿ ಇಂಥ ಪ್ರಕರಣಗಳ ಸಂಖ್ಯೆ 72ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT