ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಜಾಲತಾಣಗಳಲ್ಲಿ ಸಿ.ಎಂ

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಸಾಮಾಜಿಕ ಜಾಲತಾಣಗಳ ಬಳಕೆ ಆರಂಭಿಸು­ತ್ತಿ­ದ್ದಾರೆ. ಮುಖ್ಯಮಂತ್ರಿಯವರ ಅಧಿಕೃತ ವೆಬ್‌ಸೈಟ್‌, ಫೇಸ್‌ ಮತ್ತು ಟ್ವಿಟರ್‌ ಖಾತೆಗಳಿಗೆ ಸೋಮವಾರ ಚಾಲನೆ ದೊರೆಯಲಿದೆ.

ದೈನಂದಿನ ಕಾರ್ಯಕ್ರಮಗಳು, ರಾಜ್ಯ ಸರ್ಕಾರದ ಹೊಸ ಯೋಜನೆಗಳು, ಆಡಳಿತ ನಿರ್ವಹಣೆಗೆ ಸಂಬಂಧಿಸಿದಂತೆ ಕೈಗೊ­ಳ್ಳುವ ಪ್ರಮುಖ ನಿರ್ಣಯಗಳು ಸೇರಿದಂತೆ ಮುಖ್ಯ­ಮಂತ್ರಿ­ಯವರಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಒದಗಿಸಲಾಗುತ್ತದೆ.

ಇನ್ನು ಮುಂದೆ ಮುಖ್ಯಮಂತ್ರಿಯವರು ಪ್ರಮುಖ ಘಟನಾ­ವಳಿಗಳ ಕುರಿತು ಫೇಸ್‌ಬುಕ್‌ ಮತ್ತು ಟ್ವಿಟರ್‌ ಮೂಲಕ ತಕ್ಷಣ ಪ್ರತಿಕ್ರಿಯಿಸುತ್ತಾರೆ. cmofkarnataka.gov.in ಹೆಸರಿನ ವೆಬ್‌ಸೈಟ್‌, cmofkarnataka ಎಂಬ ಹೆಸರಿನ ಫೇಸ್‌ಬುಕ್‌ ಮತ್ತು ಟ್ವಿಟರ್‌ ಖಾತೆಗಳನ್ನು ಸಿದ್ಧಪಡಿಸ­ಲಾಗಿದೆ.

ಸೋಮವಾರ ಸಂಜೆ ವಿಧಾನಸೌಧದಲ್ಲಿ ನಡೆ­ಯುವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ತಮ್ಮ ವೆಬ್‌ಸೈಟ್‌, ಫೇಸ್‌ಬುಕ್‌ ಮತ್ತು ಟ್ವಿಟರ್‌ ಖಾತೆಗಳಿಗೆ ಚಾಲನೆ ನೀಡುವರು ಎಂದು ಮುಖ್ಯಮಂತ್ರಿಯವರ ಸಚಿವಾಲಯದ ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಅವರ ಜೀವನ ಮತ್ತು ಸಾಧನೆ, ಮುಖ್ಯ­ಮಂತ್ರಿ­ಯಾಗಿ ಮಂಡಿಸಿದ ಬಜೆಟ್‌ಗಳು, ಪ್ರಮುಖ ಭಾಷಣ, ನೀಡಿದ ಹೇಳಿಕೆಗಳು, ಅವರ ಛಾಯಾ­ಚಿತ್ರಗಳು ವೆಬ್‌ಸೈಟ್‌­ನಲ್ಲಿ ದೊರೆ­ಯಲಿವೆ.  ಅವರ ಭಾಷಣದ ವಿಡಿಯೊ ತುಣುಕುಗಳೂ ಲಭ್ಯವಾಗಲಿವೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹೊರಡಿಸಿದ ಪ್ರಮುಖ ಆದೇಶಗಳನ್ನು ವೆಬ್‌ಸೈಟ್‌ನಲ್ಲಿ ಒಂದೇ ಕಡೆ ನೀಡಲಾಗುತ್ತಿದೆ.

ನಿರ್ವಹಣೆಗೆ ತಂಡ: ಮುಖ್ಯಮಂತ್ರಿಯವರ ವೆಬ್‌ಸೈಟ್‌ ಮತ್ತು ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ಶಿಶಿರ್‌ ರುದ್ರಪ್ಪ ಅವರನ್ನು ವಿಶೇಷಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಅವರ ಜೊತೆ ಹಲವು ಎಂಜಿನಿಯರುಗಳು ಸ್ವಯಂಪ್ರೇರಣೆಯಿಂದ ಕೈಜೋಡಿಸಿ ನೆರವು ನೀಡುತ್ತಿದ್ದಾರೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಸರ್ಕಾರಿ ಸ್ವಾಮ್ಯದ ಸರ್ವರ್‌ ಮೂಲಕವೇ ಈ ಖಾತೆಗಳನ್ನು ನಿರ್ವಹಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT