ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ನಿಧಿ ಸ್ಥಗಿತಕ್ಕೆ ತೆಲಂಗಾಣ ಒತ್ತಾಯ

ಆಂಧ್ರ ಅಧಿಕಾರಿಗಳ ವಿರುದ್ಧ ಖಟ್ಲೆ
Last Updated 31 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಆಂಧ್ರಪ್ರದೇಶ ಹಾಗೂ ತೆಲಂಗಾಣದ ನಡುವಣ ಸಾಮಾನ್ಯ ನಿಧಿ ಗಳನ್ನು ಸ್ಥಗಿತ­ಗೊಳಿ­ಸುವಂತೆ ತೆಲಂಗಾಣ ಸರ್ಕಾರ ಬ್ಯಾಂಕ್‌­ಗಳನ್ನು ಒತ್ತಾಯಿ­ಸಿದ್ದು, ಇದರಿಂದ ಎರಡೂ ರಾಜ್ಯಗಳ ನಡುವೆ ಸಂಘರ್ಷ ತಾರಕಕ್ಕೆ ಏರಿದೆ. 

ತೆಲಂಗಾಣಕ್ಕೆ ಮೀಸಲಿದ್ದ ₨ 609 ಕೋಟಿ ಅನುದಾನವನ್ನು ಆಂಧ್ರ­ಪ್ರದೇ­ಶದ ಐಎಎಸ್‌ ಅಧಿಕಾರಿ ವಿಜಯ­ವಾಡಕ್ಕೆ ವರ್ಗಾಯಿಸಿ­ರುವುದೇ ತೆಲಂ­ಗಾಣದ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಧಿಕಾರಿ ವಿರುದ್ಧ ತೆಲಂಗಾಣ ಸರ್ಕಾರ ಕ್ರಿಮಿನಲ್‌ ಮೊಕದ್ದಮೆ ಹೂಡಿದೆ.

ಚಿಕ್ಕದಪಲ್ಲಿ ಪೊಲೀಸ್‌ ಠಾಣೆಯಲ್ಲಿ ಈ ಅಧಿಕಾರಿಗಳ ವಿರುದ್ಧ ಮೋಸ ಹಾಗೂ ನಂಬಿಕೆ ದ್ರೋಹ ದೂರು ದಾಖಲಾಗಿದೆ. ಅಲ್ಲದೇ, ಆಂಧ್ರಪ್ರದೇಶದ ಸಚಿವಾ­ಲಯದಲ್ಲಿ ಗುರುವಾರ ಸಂಜೆ  ಮುರುಳಿ­ಸಾಗರ್‌ ಹಾಗೂ ರಾಮಾ­ರಾವ್‌ ಎಂಬ ಹಿರಿಯ ಐಎಎಸ್‌ ಅಧಿಕಾರಿಗಳನ್ನು ಪೊಲೀ­ಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಧಿಕಾರಿಗಳ ನಿವಾಸದ ಕಪಾಟುಗಳಿಂದ ಕೆಲವು ಕಡತ ಹಾಗೂ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT