ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಂಗಶ್ರೀಗಳ ಪಟ್ಟಾಧಿಕಾರ ರಜತ ಮಹೋತ್ಸವ

Last Updated 19 ಡಿಸೆಂಬರ್ 2014, 7:01 IST
ಅಕ್ಷರ ಗಾತ್ರ

ಸಿಂದಗಿ: ಇಲ್ಲಿಯ ಸಾರಂಗಮಠ–ಗಚ್ಚಿನ­ಮಠದ ಪೀಠಾಧ್ಯಕ್ಷರಾದ ಪ್ರಭು ಸಾರಂಗ­ದೇವ ಶಿವಾಚಾರ್ಯರ ಪಟ್ಟಾಧಿ­ಕಾರ ರಜತ ಮಹೋತ್ಸವ ಸಹಸ್ರಾರು ಸಂಖ್ಯೆಯಲ್ಲಿ ಸಮಾ­ವೇಶ­ಗೊಂಡ ಭಕ್ತಾದಿಗಳ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ಜರುಗಿತು.

ಪಂಚಪೀಠದ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಸಿದ್ಧಲಿಂಗ ಶಿವಾ­ಚಾರ್ಯ ಭಗವತ್ಪಾಂಗಳವರು, ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಡಾ.ಚಂದ್ರ­ಶೇಖರ ಶಿವಾಚಾರ್ಯ ಭಗವತ್ಪಾ­ದಂಗಳ­ವರು ಸಮಾರಂಭದ ಸಾನ್ನಿಧ್ಯ ವಹಿಸಿ ವೀರಶೈವ ವಿಶ್ವಮಾನ್ಯ ಧರ್ಮ­ವಾ­ಗಿದ್ದು, ವಿಶಿಷ್ಟ, ವಿಶಾಲ ಪರಂಪ­ರೆ­ಯನ್ನು ಹೊಂದಿದೆ. ಪಂಚಾ­ಚಾರ್ಯರು ಸ್ಥಾಪಿ­ಸಿದ ಈ ಧರ್ಮ­ವನ್ನು ಬಸವಾದಿ ಶರ­ಣರು ಮುಂದು­ವರಿಸಿಕೊಂಡು ಬಂದಿದ್ದಾರೆ ಎಂದು  ಹೇಳಿದರು.

ವೀರಶೈವ ಧರ್ಮದ ಗ್ರಂಥ ಸಿದ್ಧಾಂತ ಶಿಖಾಮಣಿಯನ್ನು ಅಡ್ಡಪಲ್ಲಕ್ಕಿ­ಯ­ಲ್ಲಿಟ್ಟು ತಾವು ಪಾದಯಾತ್ರೆ ಮಾಡುವ ಹೊಸ ಪರಂಪರೆಯನ್ನು ಪ್ರಾರಂಭಿಸಿ­ರುವುದು ಇದೇ ಸಿಂದಗಿಯಿಂದ ಎಂದು ಕಾಶೀ ಶ್ರೀಗಳು ನುಡಿದರು. 
ಇದೇ ಸಂದರ್ಭದಲ್ಲಿ 1250 ಮಹಿಳೆಯರು ಕೇರಳ ಶೈಲಿಯ ಸೀರೆ­ಯನ್ನುಟ್ಟು ತಲೆಗೆ ದಂಡಿ ಕಟ್ಟಿಸಿಕೊಂಡು ಸಾಲಾಗಿ ಶಿಸ್ತುಬದ್ಧವಾಗಿ ಕುಳಿತು­ಕೊಂಡು ಉಡಿ ತುಂಬಿಸಿ ಕೊಳ್ಳುವ ಸನ್ನಿವೇಶ ಆಕರ್ಷಿಣೀಯವಾಗಿತ್ತು.
ಡಾ.ಸಂಗಮೇಶ ಸವದತ್ತಿ­ಮಠ ವಿರಚಿತ ‘ವಿಲೋಕನ’ ಅಭಿ­ನಂದನಾ ಗ್ರಂಥವನ್ನು ಪಂಚಪೀಠದ ಶ್ರೀಗಳು ಬಿಡುಗಡೆಗೊಳಿಸಿ ಪ್ರಭು ಸಾರಂಗ­­ದೇವ ಶಿವಾಚಾರ್ಯರಿಗೆ ಸಮರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT