ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ಕ್‌ ಮುಖ್ಯಸ್ಥರಿಗೆ ಮೋದಿ ಆಹ್ವಾನ

Last Updated 21 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ನಿಯೋಜಿತ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ  ಅವರ ಪ್ರಮಾಣ­ವಚನ ಸಮಾರಂಭದಲ್ಲಿ ಭಾಗವಹಿಸು­ವಂತೆ  ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಹಾಗೂ ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್‌ ಕರ್ಜೈ ಸೇರಿದಂತೆ ಸಾರ್ಕ್‌ ರಾಷ್ಟ್ರಗಳ  ಮುಖ್ಯಸ್ಥರಿಗೆ ಆಹ್ವಾನ ನೀಡಲಾಗಿದೆ.

ಇದೇ 26ರಂದು (ಸೋಮವಾರ) ನಿಗದಿಯಾಗಿರುವ ಐತಿಹಾಸಿಕ ಘಟನೆಗೆ ಸಾಕ್ಷಿಯಾಗುವಂತೆ   ಈಗಾಗಲೇ ಆಹ್ವಾನ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತದ ಪ್ರಧಾನಿ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುವಂತೆ ಸಾರ್ಕ್‌ ರಾಷ್ಟ್ರಗಳ ಮುಖ್ಯಸ್ಥರಿಗೆ ಆಹ್ವಾನ ನಿಡಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ.

ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್‌ ಕರ್ಜೈ ಹಾಗೂ ಪಾಕಿಸ್ತಾನದ ಪ್ರಧಾನಿ ಷರೀಫ್‌ ಅವರಿಗೆ ಈಗಾಗಲೇ ದೂರ­ವಾಣಿ ಮೂಲಕ ಆಹ್ವಾನ ನೀಡಲಾಗಿದೆ. ಕರ್ಜೈ ಆಹ್ವಾನ ಒಪ್ಪಿಕೊಂಡಿದ್ದು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸುವುದಾಗಿ ಖಚಿತ ಪಡಿ­ಸಿದ್ದಾರೆ.

ಷರೀಫ್‌ಗೆ ಬಿರಿಯಾನಿ ನೀಡುವರೇ?:
ನವದೆಹಲಿ (ಪಿಟಿಐ): ‘ಒಂದು ವೇಳೆ  ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌, ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ಬಂದರೆ ಅವರಿಗೆ ಮೋದಿ  ಚಿಕನ್‌ ಬಿರಿಯಾನಿಯ ಆತಿಥ್ಯ ನೀಡುತ್ತಾ­ರೆಯೇ?’ ಎಂದು ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಲೇವಡಿ ಮಾಡಿದ್ದಾರೆ.

ಕಳೆದ ವರ್ಷ ಭಾರತಕ್ಕೆ ಖಾಸಗಿ ಭೇಟಿ ನೀಡಿದ್ದ ಪಾಕಿಸ್ತಾನದ ಅಂದಿನ ಪ್ರಧಾನಿ ರಾಜಾ ಪರ್ವೇಜ್‌ ಅಶ್ರಫ್‌ ಅವರಿಗೆ ಚಿಕನ್‌ ಬಿರಿಯಾನಿ ಆತಿಥ್ಯ ನೀಡಿದ್ದ ಕಾಂಗ್ರೆಸ್‌ ನಾಯಕರನ್ನು ಮೋದಿ  ಕಟುವಾದ ಶಬ್ದಗಳಲ್ಲಿ ಟೀಕಿಸಿದ್ದರು. 

ಭಾಗಪತ್‌ ಸಾರ್ವಜನಿಕ ಚುನಾ­ವಣಾ ಪ್ರಚಾರ ಸಭೆಯಲ್ಲಿ ಭಾಗವ­ಹಿಸಿದ್ದ ಮೋದಿ,  2013ರಲ್ಲಿ ಭಾರತದ ಯೋಧನ ಶಿರಚ್ಛೇದ ಮಾಡಿದ ಪಾಕಿಸ್ತಾನದಂತಹ ದೇಶದ ಪ್ರಧಾನಿಗೆ ಚಿಕನ್‌ ಬಿರಿಯಾನಿ ಆತಿಥ್ಯ ನೀಡಿದ ಕಾಂಗ್ರೆಸ್‌ ಸರ್ಕಾರದ ಕ್ರಮವನ್ನು  ತರಾಟೆಗೆ ತೆಗೆದುಕೊಂಡಿದ್ದರು.

ಮೋದಿ ಬಿರಿಯಾನಿ ಟೀಕೆಗೆ ಮತ್ತದೇ ಚಿಕನ್‌ ಬಿರಿಯಾನಿ ಮೂಲಕ ತಿರುಗೇಟು ನೀಡಿರುವ ತರೂರ್‌  ಅವರ ಟ್ವೀಟ್‌ ಅನ್ನು 681 ಬಾರಿ ಮರು ಟ್ವೀಟ್‌ ಮಾಡಲಾಗಿದೆ. 415 ಜನರು ಮೆಚ್ಚುಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT