ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಭೌಮತ್ವ ರಕ್ಷಣೆಗೆ ಸನ್ನದ್ಧರಾಗಿರಿ: ದಲ್ಬೀರ್ ಸಿಂಗ್ ಕರೆ

Last Updated 29 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ‘ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ­ಯಾದ ಸಂದರ್ಭದಲ್ಲಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿರಿ’ ಎಂದು ಭೂ ಸೇನೆಯ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಅವರು ರಾಷ್ಟ್ರೀಯ ಸೇನಾ ಅಕಾ­ಡೆಮಿ-­ಯಲ್ಲಿ ನಿರ್ಗಮನ ಪಥ ಸಂಚಲ­ನದ ಗೌರವ ರಕ್ಷೆ ಸ್ವೀಕರಿಸಿ, ಕರೆ ನೀಡಿದರು.

ನಮ್ಮ ನೆರೆಯ ದೇಶ ಈಚೆಗೆ ನಡೆ­ಸಿದ ದಾಳಿಗಳನ್ನು ಗಮನದಲ್ಲಿಟ್ಟು­ಕೊಂಡು ನಾವು ಯಾವುದೇ ರೀತಿಯ ಸಂದ­ರ್ಭಗಳನ್ನು ಎದುರಿಸಲು ಸನ್ನದ್ಧ­ರಾ­­ಗಿ­­ರಬೇಕು. ಪ್ರಾದೇಶಿಕ ಶಾಂತಿ ಕಾಪಾ­­ಡಲು ಮತ್ತು ಸಾರ್ವ­ಭೌಮತ್ವ­ವನ್ನು ರಕ್ಷಣೆ ಮಾಡಲು ಸನ್ನದ್ಧತೆ ಮುಖ್ಯ ಎಂದು ಅವರು ಕಡಕವಾಸ್ಲಾದ ಸೇನಾ ಅಕಾ­ಡೆ­ಮಿಯ 127ನೇ ನಿರ್ಗ­ಮನ ಪಥ ಸಂಚ­ಲನ ಕಾರ್ಯಕ್ರಮ­ದಲ್ಲಿ ತಿಳಿಸಿದರು.

ಸೇನೆಯ ಎಲ್ಲಾ ಮೂರು ವಿಭಾಗದ ಭವಿಷ್ಯತ್ತಿನ ಮುಖಂಡರು ಬಾಹ್ಯ ದಾಳಿ, ಆಂತರಿಕ ಭದ್ರತೆಗೆ ಒದಗುವ ಅಪಾಯ ಮತ್ತು ನೈಸರ್ಗಿಕ ವಿಕೋಪ­ಗಳನ್ನು ಸಮ­ರ್ಥವಾಗಿ ಎದುರಿಸಲು ಸನ್ನದ್ಧರಾಗಿ ಇರ­ಬೇಕು ಎಂದು ಅವರು ಕರೆ ನಿಡಿದರು.

ತರಬೇತಿ ಹೊಂದಿದ 355 ಅಭ್ಯರ್ಥಿ­ಗಳ ಪೈಕಿ ಅರ್ಪಿತ್ ಸಂಗ್ವಾನ್ ಅವರು ತರಬೇತಿಯ ಎಲ್ಲಾ ವಿಭಾಗಗಳಲ್ಲೂ ಉತ್ತಮ ಸಾಧನೆ ತೋರಿಸಿದ್ದರಿಂದ ರಾಷ್ಟ್ರ­ಪತಿಗಳ ಪದಕ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT