ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಿಗ್ರಾಮ: ಅಶೋಕ್ ಸನ್ಮಾನ

ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸಾಧನೆ
Last Updated 30 ಜುಲೈ 2015, 6:22 IST
ಅಕ್ಷರ ಗಾತ್ರ

ಬ್ರಹ್ಮಾವರ: ಚೀನಾದ ಹಾಂಗಾಂಕ್‌ನಲ್ಲಿ ಈಚೆಗೆ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ ಮಾಸ್ಟರ್ 2 ವಿಭಾಗದ 74 ಕೆಜಿ ತೂಕದ ಪುರುಷರ ಪವರ್ ಲಿಫ್ಟಿಂಗ್‌ನಲ್ಲಿ ಸ್ವಾಟ್‌ನಲ್ಲಿ ಬೆಳ್ಳಿ, ಡೆಡ್ ಲಿಫ್ಟ್‌ನಲ್ಲಿ ಬೆಳ್ಳಿ ಒಟ್ಟಾರೆ ಪ್ರದರ್ಶನದಲ್ಲಿ 3 ಬೆಳ್ಳಿ ಬಹುಮಾನ ಪಡೆದಿರುವ ಸಾಲಿಗ್ರಾಮ ವೀರ ಮಾರುತಿ ಜಿಮ್‌ನ ಸದಸ್ಯ ಅಶೋಕ್ ಜಿ.ವಿ ಅವರನ್ನು ಜಿಮ್ ವತಿಯಿಂದ ಮಂಗಳವಾರ ಸಾಲಿಗ್ರಾಮದಲ್ಲಿ ಸನ್ಮಾನಿಸಲಾಯಿತು.

ಸ್ಪರ್ಧೆಯಲ್ಲಿ ಏಷ್ಯಾ ಖಂಡದ 18 ರಾಷ್ಟ್ರಗಳ ಸುಮಾರು 252 ಸ್ಪರ್ಧಾಳುಗಳು ಭಾಗವಹಿಸಿದ್ದರು. ೪೫ ಭಾರತೀಯ ಸ್ಪರ್ಧಾಳುಗಳ ಪೈಕಿ ಕರ್ನಾಟಕದಿಂದ 10 ಸ್ಪರ್ಧಾಳುಗಳು ಭಾಗವಹಿಸಿದ್ದರು. 55 ವರ್ಷದ ಅಶೋಕ್ ಜಿ.ವಿ. ಅವರು ಪ್ರಸ್ತುತ ವೀರ ಮಾರುತಿ ಜಿಮ್‌ನ ರಾಘವೇಂದ್ರ ಗಾಣಿಗ ಮತ್ತು ರಾಜೇಂದ್ರ ಗಾಣಿಗ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT