ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ: ಒಂದೇ ದಿನ ಏಳು ರೈತರ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ
Last Updated 7 ಜುಲೈ 2015, 19:51 IST
ಅಕ್ಷರ ಗಾತ್ರ

ಬೆಂಗಳೂರು: ‌ಸಾಲಬಾಧೆ ತಾಳಲಾರದೇ ರಾಜ್ಯದಲ್ಲಿ ಏಳು ರೈತರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕದ ವಿಜಯಪುರ, ಹಾವೇರಿ,  ಬಳ್ಳಾರಿ,  ಯಾದಗಿರಿ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಕರ್ನಾಟಕದ ಹಾಸನ, ಮಡಿಕೇರಿ ಮತ್ತು  ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ವರದಿಯಾಗಿವೆ.

ಬೆಳೆ ಹಾನಿಯಾಗಿದ್ದರಿಂದ, ಕೊಳವೆ ಬಾವಿಯಲ್ಲಿ ನೀರು ಬರದೇ ಇರುವುದರಿಂದ ಹಾಗೂ ಲಕ್ಷಾಂತರ ರೂಪಾಯಿ ಸಾಲ ಇರುವುದರಿಂದ ಮನನೊಂದ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಇದಲ್ಲದೇ ಕಬ್ಬಿನ ಬೆಲೆ ಕುಸಿತದಿಂದ ಕಂಗೆಟ್ಟ ಮಂಡ್ಯ ತಾಲ್ಲೂಕಿನ ಗೊರೆವಾಲೆ ಗ್ರಾಮದ ರೈತರೊಬ್ಬರು ತಾವೇ ಬೆಳೆದ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿದ್ದಾರೆ. ಇದೇ ಜಿಲ್ಲೆಯ  ಮದ್ದೂರು ತಾಲ್ಲೂಕಿನ ಸೋಂಪುರ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ಒಂದು ಎಕರೆ ಭೂಮಿಯಲ್ಲಿದ್ದ ಕಬ್ಬು ಬೆಳೆಯನ್ನು ಕೃಷಿಕರೊಬ್ಬರು ಟ್ರ್ಯಾಕ್ಟರ್‌ನಿಂದ ನೆಲಸಮ ಮಾಡಿದ್ದಾರೆ.

ರೈತರ ವಿವರ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಪಡೇಕನೂರ ಗ್ರಾಮದಲ್ಲಿ ಶರಣಗೌಡ ಭೀಮನ


ಗೌಡ ಬಸರಕೋಡ (30) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಂಗಳವಾರ ಬೆಳಿಗ್ಗೆ ಇವರ ಪತ್ನಿ ನೀಲಮ್ಮ ಬುತ್ತಿ ತೆಗೆದುಕೊಂಡು ಹೊಲಕ್ಕೆ ಹೋದಾಗ, ಪತಿ ಒದ್ದಾಡುತ್ತಿದ್ದುದನ್ನು ಗಮನಿಸಿ,   ಬಸವನ ಬಾಗೇವಾಡಿ  ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಶರಣಗೌಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇವರು ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ₨ 1 ಲಕ್ಷ, ಖಾಸಗಿಯಾಗಿ ₨ 3 ಲಕ್ಷ ಸಾಲ ಮಾಡಿದ್ದರು. ಕಳೆದ ವರ್ಷ ನಾಲ್ಕು ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ಆದರೆ ನೀರಿನ ಕೊರತೆಯಿಂದ ಕಬ್ಬು ಒಣಗಿ ಹೋಗಿತ್ತು. ಮೂರು ಕೊಳವೆ ಬಾವಿ ಕೊರೆಯಿಸಿದ್ದರೂ ನೀರು ಸಿಕ್ಕಿರಲಿಲ್ಲ.

ರಾಣೆಬೆನ್ನೂರು ವರದಿ: ಬೆಳೆ ಹಾನಿಯಾಗಿದ್ದರಿಂದ ಗುಡ್ಡಪ್ಪ ಚಳಗೇರಿ (35) ಎಂಬ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿ


ಕೊಂಡ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ  ನಡೆದಿದೆ. ಕೊಳವೆಬಾವಿ ವಿಫಲವಾದ ಕಾರಣ ಸೌತೆಕಾಯಿ ಬೆಳೆ ಹಾನಿಯಾಗಿತ್ತು. ಇವರ ಹೆಸರಿನಲ್ಲಿ 2.20 ಎಕರೆ ಜಮೀನು ಇದ್ದು, 2011ರಲ್ಲಿ ಅರೇಮಲ್ಲಾಪುರದ ಕೆವಿಜಿ ಬ್ಯಾಂಕಿನಲ್ಲಿ ₨ 60 ಸಾವಿರ  ಸಾಲ ಪಡೆದಿದ್ದರು.  ಈಗ ಬಡ್ಡಿ ಸೇರಿ ₨90 ಸಾವಿರ ಆಗಿದೆ. ಖಾಸಗಿಯಾಗಿ 2 ಲಕ್ಷ  ರೂಪಾಯಿ ಸಾಲ ತೆಗೆದುಕೊಂಡಿದ್ದರು ಎನ್ನಲಾಗಿದೆ.

ಕೂಡ್ಲಿಗಿ ವರದಿ: ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹುರುಳಿಹಾಳ ಗ್ರಾಮದಲ್ಲಿ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿ, ತೆಂಗಿನ ಮರಗಳು ಒಣಗುತ್ತಿದ್ದುದನ್ನು ಕಂಡು ಬೇಸತ್ತಿದ್ದ  ಜೆ. ಬಸಪ್ಪ(70) ಸೋಮವಾರ ವಿಷ ಸೇವಿಸಿದ್ದರು.  ಅವರನ್ನು ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ರಾತ್ರಿ ಮೃತಪಟ್ಟಿದ್ದಾಗಿ ಕುಟುಂಬದವರು ತಿಳಿಸಿದ್ದಾರೆ.

ಚನ್ನರಾಯಪಟ್ಟಣ ವರದಿ (ಹಾಸನ ಜಿಲ್ಲೆ):  ಸಾಲದ ಸುಳಿಗೆ ರೈತ ತಿಮ್ಮೇಗೌಡ (38) ಎಂಬುವವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಕುರುವಂಕ ಗ್ರಾಮದಲ್ಲಿ ನಡೆದಿದೆ.

ಸೋಮವಾರ ಸಂಜೆ ತೋಟಕ್ಕೆ ತೆರಳಿದ್ದ ತಿಮ್ಮೇಗೌಡ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಗಾಬರಿಯಾದ ಪತ್ನಿ ಗೀತಾ, ತನ್ನ

ಸಂಬಂಧಿಕರನ್ನು ತೋಟಕ್ಕೆ ಕಳುಹಿಸಿದರು. ಕ್ರಿಮಿನಾಶಕ ಸೇವಿಸಿ ಒದ್ದಾಡುತ್ತಿದ್ದ ತಿಮ್ಮೇಗೌಡ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಮಧ್ಯರಾತ್ರಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ತಿಮ್ಮೇಗೌಡ ಅವರು ಐದೂವರೆ ಎಕರೆ ಜಮೀನಿನಲ್ಲಿ ಕಬ್ಬು, ಬಾಳೆ, ಟೊಮೆಟೊ ಬೆಳೆದಿದ್ದರು. ನೀರಿನ ಕೊರತೆಯಿಂದಾಗಿ ಎರಡು ಎಕರೆಯಲ್ಲಿ ಬೆಳೆದಿದ್ದ ಬಾಳೆ ಫಸಲು ಒಣಗಿ ಹೋಗಿತ್ತು. ಜಮೀನಿನಲ್ಲಿದ್ದ ಆರು ಕೊಳವೆಬಾವಿಗಳ ಪೈಕಿ ಐದರಲ್ಲಿ ನೀರು ಬತ್ತಿ ಹೋಗಿತ್ತು. 
ಬೆಳೆ ವೈಫಲ್ಯದ ಕಾರಣ ಕೃಷಿ ಪತ್ತಿನ ಸಹಕಾರ ಸಂಘದ ₨ 25 ಸಾವಿರ ಬೆಳೆಸಾಲ, ಅವರ ಮೃತ ತಂದೆ ಮಾಡಿದ್ದ  ₨ 49 ಸಾವಿರ ಸಾಲ,  ಚಿನ್ನ ಅಡವಿಟ್ಟು ಮಾಡಿದ್ದ  ₨ 1.70 ಲಕ್ಷ ಸಾಲ ತೀರಿಸಲಾಗದೇ ಬೇಸತ್ತಿದ್ದರು.

ಕುಶಾಲನಗರ ವರದಿ (ಕೊಡಗು ಜಿಲ್ಲೆ):  ಸಾಲಬಾಧೆ ತಾಳಲಾರದೆ ರೈತ ಎಚ್.ಆರ್. ನಾರಾಯಣ (60) ತಮ್ಮ  ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿಗೆ ಸಮೀಪದ ಬ್ಯಾಡಗೊಟ್ಟ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

ತಮಗಿರುವ ಐದೂವರೆ ಎಕರೆ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡಿದ್ದ ಅವರು, ಕೃಷಿಗಾಗಿ ಕೂಡಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₨ 1 ಲಕ್ಷ, ಕೆನರಾ ಬ್ಯಾಂಕಿನಲ್ಲಿ ₨ 5 ಲಕ್ಷ, ತೊರೆನೂರು ಸಹಕಾರ ಸಂಘದಲ್ಲಿ ₨ 50 ಸಾವಿರ ಸಾಲ
ಮಾಡಿದ್ದರು.

2 ವರ್ಷಗಳಿಂದ ಬೆಳೆದ ಬೆಳೆ ಸರಿಯಾಗಿ ಬಾರದೆ ಸಾಲದ ಹೊರೆ ಹೆಚ್ಚಾಗಿತ್ತು. ಸೋಮವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ದೊಡ್ಡಬಳ್ಳಾಪುರ: ‌ತರಕಾರಿ ಬೆಳೆಗಳು ಕೈಕೊಟ್ಟ ಕಾರಣದಿಂದ ಸಾಲ ತೀರಿಸಲಾಗದೆ ತಾಲ್ಲೂಕಿನ  ತಿಮ್ಮೋಜನಹಳ್ಳಿ


ಯಲ್ಲಿ ವಿಷಪೂರಿತ ಕಾಳಿನ ಮಾತ್ರೆ ನುಂಗಿ ರೈತ ಚನ್ನೇಗೌಡ (50) ಸಾವಿಗೀಡಾಗಿದ್ದಾರೆ.

ಮೂರು ದಿನಗಳ ಹಿಂದೆ ಕಾಳಿನ ಮಾತ್ರೆ (ದ್ವಿದಳ ಧಾನ್ಯಗಳು ಕೆಡದಂತೆ ಚೀಲದಲ್ಲಿ ಹಾಕುವ ವಿಷಕಾರಿ ಮಾತ್ರೆ) ನುಂಗಿ ಅಸ್ವಸ್ಥಗೊಂಡಿದ್ದ ಚನ್ನೇಗೌಡ ಅವರನ್ನು ಬೆಂಗಳೂರಿನ ಬ್ಯಾಪ್ಟಿಸ್ಟ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಯಾದಗಿರಿ  ವರದಿ: ಬೆಳೆ ನಷ್ಟದಿಂದ ಮನನೊಂದು ಆಂಧ್ರಪ್ರದೇಶ ಮೂಲದ   ಆಂಜನೇಯ ಹಣಮಂತು ಬೇಡರ (39) ಎಂಬುವವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಹಾಪುರ ತಾಲ್ಲೂಕಿನ ಮಾಚನೂರು ಗ್ರಾಮದಲ್ಲಿ ನಡೆದಿದೆ. ಇವರು ಮಾಚನೂರಿನಲ್ಲಿ 15 ಎಕರೆ ಜಮೀನನ್ನು ಗುತ್ತಿಗೆ ಪಡೆದು ಭತ್ತ ಬೆಳೆದಿದ್ದರು. ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿತ್ತು. ₨ 5 ಲಕ್ಷ ಸಾಲವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT