ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ವಸೂಲಾತಿಗೆ ಆದ್ಯತೆ ನೀಡಿ: ಸಲಹೆ

ಕೋಲಾರ–ಚಿಕ್ಕಬಳ್ಳಾಪುರ ಕೇಂದ್ರ ಸಹಕಾರಿ ಬ್ಯಾಂಕ್‌: ₨ 5.86 ಕೋಟಿ ಸಾಲ ಬಾಕಿ
Last Updated 21 ಏಪ್ರಿಲ್ 2014, 6:59 IST
ಅಕ್ಷರ ಗಾತ್ರ

ಕೋಲಾರ: ಸಾಲ ವಸೂಲಾತಿಗೆ ಆದ್ಯತೆ ನೀಡಿ ಬ್ಯಾಂಕ್‌ ಅನ್ನು ಉತ್ತಮ ಸ್ಥಿತಿಗೆ ತರಲು ಸಹಕರಿಸಬೇಕು ಎಂದು ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿ­ದರು.

ನಗರದಲ್ಲಿ ಭಾನುವಾರ ಬ್ಯಾಂಕ್‌ ಏರ್ಪಡಿಸಿದ್ದ ವಿವಿಧ ಶಾಖೆಗಳ ಪ್ರಮುಖ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಶಾಖೆಗಳಲ್ಲಿ ರೈತರಿಗೆ ನೀಡಲಾದ ₨ 5.86 ಕೋಟಿ ಸಾಲ ವಸೂಲಿ ಆಗಬೇಕಿದೆ. ಅದನ್ನು ವಸೂಲಿ ಮಾಡಿದರೆ ಇನ್ನಷ್ಟು ಸಾಲವನ್ನು ನೀಡಲು ಸಾಧ್ಯವಾಗುತ್ತದೆ. ಬ್ಯಾಂಕ್‌ಗೂ ಉತ್ತಮ ಹೆಸರು ಬರು­ತ್ತದೆ ಎಂದು ಹೇಳಿದರು.

ಕೋಲಾರ ಶಾಖೆಯಲ್ಲಿ ₨ 95 ಲಕ್ಷ, ಚಿಂತಾಮಣಿ ₨ 36 ಲಕ್ಷ, ಬಾಗೇಪಲ್ಲಿ ₨ 45 ಲಕ್ಷ, ಮುಳಬಾಗಲು ₨ 44 ಲಕ್ಷ, ಶಿಡ್ಲಘಟ್ಟ ₨ 54 ಲಕ್ಷ, ಬಂಗಾರಪೇಟೆ ₨ 65 ಲಕ್ಷ ಮತ್ತು ಗೌರಿಬಿದನೂರು ಶಾಖೆಯಲ್ಲಿ ₨ 88 ಲಕ್ಷ ಸಾಲ ವಸೂಲಿ ಆಗಬೇಕಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ತಾಲ್ಲೂಕು ಶಾಖೆಗಳ ಸಿಬ್ಬಂದಿ ಸಾಲ ವಸೂಲಾತಿ ವಿಷಯದಲ್ಲಿ ಗಂಭೀರ ಪ್ರಯತ್ನ ನಡೆಸದಿರುವುದು ವಿಷಾದ­ನೀಯ. ಹೀಗಾಗಿ ಸಾಲ ವಸೂಲಾತಿಗೆ ಒಂದು ತಿಂಗಳ ಗಡುವನ್ನು ನೀಡ­ಲಾಗುತ್ತಿದೆ. ಆ ಗಡುವಿನೊಳಗೆ ಸಾಲದ ಅಷ್ಟೂ ಮೊತ್ತವನ್ನು ಸಾಲಗಾರರಿಂದ ವಸೂಲಿ ಮಾಡಬೇಕು. ಇಲ್ಲವಾದರೆ ಬ್ಯಾಂಕ್‌ ನಿರಂತರವಾಗಿ ಸರ್ಕಾರಕ್ಕೆ ಬಡ್ಡಿ ಪಾವತಿಸುತ್ತಲೇ ಇರಬೇಕಾಗುತ್ತದೆ ಎಂದು ಅವರು ಹೇಳಿದರು.

ಗಣಕೀಕರಣ: ಬ್ಯಾಂಕ್‌ ವಹಿವಾಟು ಗಣಕೀಕರಣ­ಗೊಳಿಸಲಾಗಿದೆ. ಸಿಬ್ಬಂದಿಗೆ ಸಮ­ವಸ್ತ್ರಗಳನ್ನು ವಿತರಿಸಲಾಗಿದೆ. 6ನೇ ವೇತನ ಆಯೋಗದ ಶಿಫಾರಸಿನಂತೆ ಸಿಬ್ಬಂದಿಗೆ ವೇತನವೂ ಹೆಚ್ಚಾಗಲಿದೆ. ಹೀಗಾಗಿ ಸಿಬ್ಬಂದಿ ಇನ್ನಷ್ಟು ಉತ್ಸಾಹ ಮತ್ತು ಬದ್ಧತೆಯಿಂದ ಕಾರ್ಯನಿರ್ವ­ಹಿಸಬೇಕು ಎಂದು ಅವರು ಹೇಳಿದರು.

ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶಪ್ಪ ಮತ್ತು ಉಪಾಧ್ಯಕ್ಷ ಹನು­ಮಂತರೆಡ್ಡಿ ಉಪಸ್ಥಿತರಿದ್ದರು. ಬ್ಯಾಂಕ್‌ನ ಎಲ್ಲ ಶಾಖೆಗಳ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT