ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗ್‌ಗೆ ಪ್ರಣವ್‌ ಹೃದಯಸ್ಪರ್ಶಿ ವಿದಾಯ

Last Updated 18 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಸಂಭಾವಿತ’ ಮನ­ಮೋಹನ್‌ ಸಿಂಗ್‌ ಅವರೊಂದಿಗಿನ ನಾಲ್ಕು ದಶಕಗಳ ಒಡನಾಟವನ್ನು ಸ್ಮರಿಸುವ ಮೂಲಕ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಅಧಿಕಾರದಿಂದ ನಿರ್ಗಮಿಸುತ್ತಿರುವ ಪ್ರಧಾನಿಗೆ ಹೃದಯ­ಸ್ಪರ್ಶಿ ಬೀಳ್ಕೊಡುಗೆ ನೀಡಿದರು.

ಶನಿವಾರ ರಾತ್ರಿ ಆಯೋಜಿಸಿದ್ದ ಔತಣ­ಕೂಟದಲ್ಲಿ ಮಾತನಾಡಿದ ಪ್ರಣವ್‌, ‘ಇಂತಹ ಸಂದರ್ಭದಲ್ಲಿ ಮಾತ­­ನಾಡು­ವುದು ಪದ್ಧತಿಯಲ್ಲ, ಆದರೆ, ನಾಲ್ಕು ದಶಕಗಳ ಕಾಲ ನನ್ನ ಜೊತೆ ಕೆಲಸ ಮಾಡಿದ ಸಭ್ಯ ವ್ಯಕ್ತಿ­ಯೊ­ಬ್ಬರಿಗೆ ವಿದಾಯ ಹೇಳುವಾಗ ಸಂಪ್ರ­ದಾಯ­ ಮೀರುತ್ತೇನೆ’ ಎಂದರು.

1974ರಲ್ಲಿ ತಾವು ಕಿರಿಯ ಹಣಕಾಸಿ ಸಚಿವರಾಗಿದ್ದಾಗ ಮೊದಲ ಬಾರಿ ಸಿಂಗ್‌ ಅವರನ್ನು ಭೇಟಿ­ಯಾ­ಗಿ­ದ್ದಾಗಿ ಪ್ರಣವ್‌ ತಿಳಿಸಿದರು. ಪ್ರಮುಖ ಆರ್ಥಿಕ ವಿಷಯಗಳಲ್ಲಿ ಸಿಂಗ್‌ ಅವರಿಗಿದ್ದ ಜ್ಞಾನದ ಆಳವನ್ನು ಕಂಡು ಸಂತಸ ಪಟ್ಟಿದ್ದಾಗಿಯೂ ಅವರು ಹೇಳಿದರು.
ಭಾಷಣದುದ್ದಕ್ಕೂ ಮನಮೋಹನ್‌ ಸಿಂಗ್‌ ಅವರನ್ನು ಶ್ಲಾಘಿಸಿದ ಪ್ರಣವ್‌,

‘ 1991ರಲ್ಲಿ ನೀವು ಆರ್ಥಿಕ ಸುಧಾರಣೆ­ಗಳ ಹಾದಿಯನ್ನು ಆಯ್ಕೆ ಮಾಡಿಕೊಂಡ ಸಂದರ್ಭದಲ್ಲಿನ ನಿಮ್ಮ ಕೊಡುಗೆಗಳನ್ನು ಇಡೀ ರಾಷ್ಟ್ರ ನೆನಪಿ­ನ­ಲ್ಲಿಟ್ಟುಕೊಳ್ಳುತ್ತದೆ. 1990ರ ದಶಕ­ದಲ್ಲಿ ದೇಶವು ಪ್ರಗತಿ ದರದಲ್ಲಿ  ಮೈಲಿಗಲ್ಲು ಸಾಧಿಸಿದಾಗ ರಾಷ್ಟ್ರದ ಅಭಿವೃದ್ಧಿಯು ಹೊಸ ಮಜಲಿಗೆ ತೆರೆದುಕೊಂಡಿತ್ತು’ ಎಂದು ಹೇಳಿದರು.

ಪ್ರಣವ್‌ ಮುಖರ್ಜಿ ಅವರ ಮಾತಿಗೆ, ಶ್ಲಾಘನೆಗೆ ಮನಮೋಹನ್‌ ಸಿಂಗ್‌ ಸಮ್ಮತಿ ಸೂಚಿಸಿದರು.
‘ಒಂದು ವೇಳೆ ನಾನು ಇಲ್ಲಿ ಭಾವುಕ­ನಾದರೆ ಕ್ಷಮಿಸಿ’ ಎಂದು ಮನವಿ ಮಾಡಿದ ಸಿಂಗ್‌, ಪ್ರಣವ್‌ ಅವರೊಂದಿ­ಗಿನ ಗೆಳೆತನ ಹಾಗೂ ಒಡನಾಟಗಳನ್ನು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT