ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಹ ನೆನಪಿನ ನಾಟಕೋತ್ಸವಕ್ಕೆ ಉಚಿತ ಪಾಸ್

Last Updated 21 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ನಿಧನರಾದ ರಂಗಕರ್ಮಿ ಸಿ.ಆರ್. ಸಿಂಹ ಅವರ ನೆನಪಿನಲ್ಲಿ ಏ.29ರಿಂದ ಮೇ ಒಂದರವರೆಗೆ ಮೂರು ದಿನಗಳ ನಾಟಕೋತ್ಸವವನ್ನು ರಂಗ ನಿರಂತರ ಹಾಗೂ ಭಾರತ ಯಾತ್ರಾ ಕೇಂದ್ರ ಜಂಟಿಯಾಗಿ ಹಮ್ಮಿಕೊಂಡಿದ್ದು, ರಂಗಾಸಕ್ತರಿಗೆ ಉಚಿತ ಪಾಸ್‌ಗಳನ್ನೂ ವಿತರಿಸಲಿದೆ.

ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ನಡೆಯುವ ಈ ನಾಟಕೋತ್ಸವದಲ್ಲಿ ‘ಶಿವಸಂಚಾರ’ ತಂಡದ ಕಲಾವಿದರು ಪಾಲ್ಗೊಳ್ಳಲಿದ್ದು, ಶಿವಸಂಚಾರ ನಾಟಕೋತ್ಸವ ಎಂದೇ ಹೆಸರಿಡಲಾಗಿದೆ.

ಏ.29ರಂದು ‘ಮಹಾಬೆಳಗು’ (ರಚನೆ: ಡಾ. ರಾಜಶೇಖರ್ ಹನುಮನಿ, ನಿರ್ದೇಶನ: ವೈ.ಡಿ. ಬಾದಾಮಿ), ಏ 30ರಂದು ‘ಶರಣಸತಿ-ಲಿಂಗಪತಿ’ (ರಚನೆ: ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ನಿರ್ದೇಶನ: ಎಸ್. ಮಾಲತಿ ಸಾಗರ) ಹಾಗೂ ಮೇ ಒಂದರಂದು ‘ವಿಶ್ವಬಂಧು ಮರುಳಸಿದ್ಧ’ (ರಚನೆ: ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ನಿರ್ದೇಶನ: ಮಾಲತೇಶ್ ಬಡಿಗೇರ) ನಾಟಕಗಳು ಪ್ರದರ್ಶನಗೊಳ್ಳಲಿವೆ.

ಈ ಎಲ್ಲಾ ನಾಟಕಗಳನ್ನು ರಂಗಾಸಕ್ತರು ಉಚಿತವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಸಂಘಟಕರು ಉಚಿತ ಪಾಸ್‌ಗಳನ್ನು ವಿತರಿಸಲಿದ್ದಾರೆ. ಏ. 23ರ ಬುಧವಾರ ಸಂಜೆ 4ರಿಂದ ಪಾಸ್‌ಗಳು ರವೀಂದ್ರ ಕಲಾಕ್ಷೇತ್ರದಲ್ಲಿ ಲಭ್ಯವಾಗಲಿದ್ದು, ಆಸಕ್ತರು ಅಲ್ಲಿಯೇ ತಮ್ಮ ಹೆಸರು ನೋಂದಾಯಿಸಿಕೊಂಡು ಪಾಸ್‌ಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ೯೮೮೬೫ ೪೩೬೯೭/ ೯೦೦೮೧ ೯೯೦೦೩೩/ ೯೮೪೪೪ ೨೯೭೯೨.

ನಟರಂಗ ವೇದಿಕೆ ಹಾಗೂ ರಂಗ ನಿರಂತರ ಸ್ಪಂದನ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಿ.ಆರ್‌. ಸಿಂಹ ನೆನಪಿನ ಕಾರ್ಯಕ್ರಮ ‘ನಮ್ಮ ಸಿಮ್ಮ– ರಂಗಭೂಮಿ ಸಿಂಹ’. ಭಾಗವಹಿಸುವವರು– ಉಮಾಶ್ರೀ, ಬಿ. ಜಯಶ್ರೀ, ಅರುಂಧತಿ ನಾಗ್‌, ಗಿರಿಜಾ ಲೋಕೇಶ್‌, ಚಿರಂಜೀವಿ ಸಂಗ್‌, ಗಿರೀಶ್‌ ಕಾಸರವಳ್ಳಿ, ದ್ವಾರಕೀಶ್‌, ಕೆ.ಎಸ್‌.ಎಲ್‌. ಸ್ವಾಮಿ, ಟಿ.ಎಸ್‌. ನಾಗಾಭರಣ, ವಿಶ್ವೇಶ್ವರ ಭಟ್‌, ಟಿ.ಎನ್‌. ಸೀತಾರಾಮ್‌, ಕೆ.ಎಂ. ಶ್ರೀನಿವಾಸ ಗೌಡ, ಡಾ. ಎಚ್‌.ಎಸ್‌. ವೆಂಕಟೇಶ್‌ಮೂರ್ತಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಬಿ.ಆರ್‌. ಲಕ್ಷ್ಮಣರಾವ್‌, ಋತ್ವಿಕ್‌ ಸಿಂಹ.

ಸ್ಪಂದನ– ನಟರಂಗ ಕಲಾವಿದರಿಂದ ಸಿಂಹ ನಿರ್ದೇಶಿಸಿದ ನಾಟಕಗಳ ರಂಗ ಗೀತೆಗಳ ಗಾಯನ. ಸಂಯೋಜನೆ– ಬಿ. ಜಯಶ್ರೀ. ಋತ್ವಿಕ್‌ ಸಿಂಹ ಮತ್ತು ವೇದಿಕೆಯಿಂದ ನಿರ್ದೇಶಿಸಿದ ನಾಟಕಗಳ ವಿಡಿಯೋ ತುಣುಕು ಪ್ರದರ್ಶನ. ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT