ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಸ್‌ಆರ್‌ ವ್ಯಾಪ್ತಿಗೆ ‘ಸ್ವಚ್ಛ ಭಾರತ’, ‘ಗಂಗಾ ಶುದ್ಧೀಕರಣ’

Last Updated 26 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಸ್ವಚ್ಛ ಭಾರತ ಅಭಿಯಾನ’ ಮತ್ತು ‘ಗಂಗಾ ಶುದ್ಧೀಕ­ರಣ ಯೋಜನೆ’ಗಳಿಗೆ ಮಾಡುವ ವೆಚ್ಚವನ್ನು ‘ಕಾರ್ಪೊರೇಟ್‌ ಸಾಮಾಜಿಕ ಹೊಣೆ­ಗಾರಿಕೆ’ (ಸಿಎಸ್‌ಆರ್‌) ವ್ಯಾಪ್ತಿಗೆ ತರಲು ಸರ್ಕಾರ ನಿರ್ಧರಿಸಿದೆ.

ಕಾರ್ಪೊರೇಟ್‌ ವಲಯ ನೆರವು ನೀಡುತ್ತಿರುವ ಕಾರಣ ಇನ್ನು ಮುಂದೆ ಈ ಯೋಜನೆಗಳನ್ನು ಸಮಾಜ ಕಲ್ಯಾಣ ಚಟುವಟಿಕೆಗಳೆಂದು ಪರಿಗಣಿಸಲಾಗು­ವುದು ಎಂದು ಕಾರ್ಪೊರೇಟ್‌ ವ್ಯವ­ಹಾರ­ಗಳ ಸಚಿವಾಲಯ ಹೇಳಿದೆ.

ಈ ನಿಟ್ಟಿನಲ್ಲಿ ಕಂಪೆನಿಗಳ ಕಾಯ್ದೆಗೆ ತಿದ್ದುಪಡಿ ತಂದು, ‘ಸ್ವಚ್ಛ ಭಾರತ ಕೋಶ’ ಮತ್ತು ‘ಗಂಗಾ ಶುದ್ಧೀಕರಣ ನಿಧಿ’ ಸ್ಥಾಪಿಸಲಾಗುವುದು ಎಂದಿದೆ.

ಕಾಯ್ದೆ ಅನುಸಾರ ಲಾಭ­ದಲ್ಲಿರುವ ಕಂಪೆನಿಗಳು ತಮ್ಮ ಮೂರು ವರ್ಷಗಳ ನಿವ್ವಳ ಲಾಭದಲ್ಲಿ ಕನಿಷ್ಠ ಶೇ 2ರಷ್ಟನ್ನು ಸಿಎಸ್‌ಆರ್‌ ಚಟುವಟಿಕೆ­ಗಳಿಗೆ ವೆಚ್ಚ ಮಾಡಬೇಕು. ಇದು ಕನಿಷ್ಠ ₨5 ಕೋಟಿ ನಿವ್ವಳ ಲಾಭ ಅಥವಾ ₨1 ಸಾವಿರ ಕೋಟಿ ವಹಿವಾಟು ಅಥವಾ ₨500 ಕೋಟಿ ಮೌಲ್ಯದ ಆಸ್ತಿ ಇರು­ವಂತಹ ಕಂಪೆನಿಗಳಿಗೆ ಅನ್ವಯವಾಗುತ್ತದೆ.

ಸಿಎಸ್‌ಆರ್‌ ವ್ಯಾಪ್ತಿಗೆ ಜೀವನಮಟ್ಟ­ವನ್ನು ಮೇಲ್ದರ್ಜೆಗೆ ಏರಿಸುವಂತಹ ಚಟು­­ವಟಿಕೆಗಳು, ಗ್ರಾಮೀಣಾಭಿವೃದ್ಧಿ ಯೋಜನೆಗಳು,  ಬಡತನ–ಹಸಿವು– ಅಪೌ­ಷ್ಟಿಕತೆ ನಿರ್ಮೂಲನೆ, ರಾಷ್ಟ್ರೀಯ ಪಾರಂಪರಿಕ ಸ್ಮಾರಕಗಳ ಸಂರಕ್ಷಣಾ ಕಾರ್ಯ, ಸಾರ್ವಜನಿಕ ಗ್ರಂಥಾಲಯ ಸ್ಥಾಪನೆ, ಸಾಂಪ್ರದಾಯಿಕ ಮತ್ತು ಕರ­ಕುಶಲ ಕಲೆಗಳಿಗೆ ಉತ್ತೇಜನ ಹಾಗೂ ಅಭಿವೃದ್ಧಿ ಮುಂತಾದ ವಿಷಯಗಳು ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT