ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ: ವರದಿ ಕೇಳಿದ ಕೇಂದ್ರ

ಎಚ್‌.ಡಿ. ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ
Last Updated 7 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ವಿಧಾನ ಪರಿಷತ್ತಿನ ಚುನಾವಣೆ­ಯಲ್ಲಿ ಮತ ಹಾಕಲು ತಮ್ಮ ಪಕ್ಷದ ವಿಧಾನಸಭೆ ಸದಸ್ಯರು ತಲಾ ಒಂದು ಕೋಟಿ ರೂಪಾಯಿಗಳನ್ನು ಕೇಳುತ್ತಿ­ದ್ದಾರೆಂದು ಜೆಡಿಎಸ್‌ ಮುಖಂಡ ಎಚ್‌.ಡಿ ಕುಮಾರ­ಸ್ವಾಮಿ ಕೇಳಿದ್ದಾರೆ­ಎನ್ನಲಾದ ಪ್ರಕರಣ ಕುರಿತು ಸಮಗ್ರ ವರದಿ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಸೋಮವಾರ ಕೇಂದ್ರ ಕೇಳಿದೆ.

ಕುಮಾರಸ್ವಾಮಿ ಪ್ರಕರಣ ಕುರಿತು ವರದಿ ಕೊಡುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಅಧಿಕೃತವಾಗಿ ಹೇಳಿದೆ. ಕುಮಾರಸ್ವಾಮಿ ಮಾತುಗಳನ್ನು ರೆಕಾರ್ಡ್‌ ಮಾಡಿ­ಕೊಂಡಿ­­ರುವ ಸಿ.ಡಿ ಪ್ರತಿ ಕಳುಹಿಸು­ವಂತೆಯೂ ತಿಳಿಸಲಾಗಿದೆ. ವರದಿ ಬಂದ ಬಳಿಕ ಪರಿಶೀಲಿಸುವುದಾಗಿ ಗೃಹ ಸಚಿವಾಲಯದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. 

ವಿಜಾಪುರ ಜಿಲ್ಲೆ ಬಬಲೇಶ್ವರದ ಮುಖಂಡ ವಿಜುಗೌಡ ಪಾಟೀಲ­ರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವಂತೆ ಅವರ ಬೆಂಬಲಿ­ಗರು

ಮಾಹಿತಿ ಬಂದಿಲ್ಲ: ಸಿದ್ದರಾಮಯ್ಯ
ಸಿ.ಡಿ ಬಹಿರಂಗ ಕುರಿತು ಕೇಂದ್ರ ಗೃಹ ಸಚಿ­ವಾಲಯ ರಾಜ್ಯದ ಗೃಹ ಇಲಾಖೆಯಿಂದ ವರದಿ ಕೇಳಿದೆ ಎಂಬುದನ್ನು ಅಲ್ಲಗಳೆದಿರುವ ಮುಖ್ಯ­ಮಂತ್ರಿ ಸಿದ್ದರಾಮಯ್ಯ,  ‘ಕೇಂದ್ರ ಸರ್ಕಾರ ವರದಿ ಕೇಳಿ­ರುವ ಬಗ್ಗೆ ನನಗೆ ಮಾಹಿತಿ ಬಂದಿಲ್ಲ’ ಎಂದರು.

ಒತ್ತಡ ಹೇರಿದ ಸಮಯದಲ್ಲಿ ಕುಮಾರಸ್ವಾಮಿ ಅವರು ಆಡಿರುವ ಮಾತುಗಳನ್ನು ರಹಸ್ಯವಾಗಿ ರೆಕಾರ್ಡ್‌ ಮಾಡಿಕೊಳ್ಳಲಾಗಿದೆ. ಅನಂತರ ‘ವಿಜು­ಗೌಡ ಪಾಟೀಲ ಅಭಿಮಾನಿ ಬಳಗ’ದ ಹೆಸರಲ್ಲಿ ಸಿ.ಡಿ­ಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.

ಕುಮಾರಸ್ವಾಮಿ ವಿಧಾನ ಪರಿಷತ್‌ ಚುನಾವಣೆ­ಯಲ್ಲಿ ಮತ ಹಾಕಲು ಶಾಸಕರು ತಲಾ ಒಂದು ಕೋಟಿ ರೂಪಾಯಿಗಳನ್ನು ಕೇಳುತ್ತಿದ್ದಾರೆನ್ನುವ ಹೇಳಿಕೆ ಕುರಿತು ದೆಹಲಿಯ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯು­ತ್ತಿದೆ. ಸೋಮವಾರ ಸಂಸತ್ ಅಧಿವೇಶನದ ಸಮಯದಲ್ಲಿ ಕೆಲವರು ಮೊಗಸಾಲೆಯಲ್ಲಿ ಕುಮಾರ್‌ಸ್ವಾಮಿ ಹೇಳಿಕೆ ಬಗ್ಗೆ ಚರ್ಚೆ ನಡೆಸಿದ್ದು ಕಂಡುಬಂತು.

ಕಳೆದ ತಿಂಗಳು ರಾಜ್ಯ ವಿಧಾನಸಭೆ­ಯಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ ಶಾಸಕ ಬಲದ ಆಧಾರದಲ್ಲಿ ಒಬ್ಬರನ್ನು ಆಯ್ಕೆ ಮಾಡಲು ಅವಕಾಶವಿತ್ತು. ಈ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡುವಂತೆ ವಿಜುಗೌಡ ಪಟ್ಟು ಹಿಡಿದಿದ್ದರು. ಆ ಸಮಯದಲ್ಲಿ ನಡೆದ ಮಾತುಕತೆಗಳು ಸಿ.ಡಿಯಲ್ಲಿ ಮುದ್ರಿತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT