ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಪ್ಪಾಜಿ ಗದ್ದುಗೆ ಉತ್ಸವಕ್ಕೆ ತೆರೆ

Last Updated 29 ಜುಲೈ 2016, 11:27 IST
ಅಕ್ಷರ ಗಾತ್ರ

ಗುಂಡ್ಲುಪೇಟೆ:  ತಾಲ್ಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ಮೂರು ದಿನ ನಡೆದ ಸಿದ್ದಪ್ಪಾಜಿ ಗದ್ದುಗೆ ಉತ್ಸವ ಬುಧವಾರ ರಾತ್ರಿ ಮುಕ್ತಾಯಗೊಂಡಿತು.
ವಿಶೇಷವಾಗಿ ಆಷಾಢ ಮಾಸದಲ್ಲಿ ನಡೆಯುವ ಈ ಉತ್ಸವದಲ್ಲಿ ಎಲ್ಲ ಸಮುದಾಯಗಳ ಜನರೂ ಭಾಗವಹಿಸುತ್ತಾರೆ. ಹೀಗಾಗಿ, ಈ ಉತ್ಸವ ಕೋಮು ಸೌಹಾರ್ದಕ್ಕೆ ಪ್ರಸಿದ್ಧಿಯಾಗಿದೆ.

ಉತ್ಸವದ ಅಂಗವಾಗಿ ಗ್ರಾಮವು ತಳಿರು– ತೋರಣ, ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿತ್ತು. ಎಲ್ಲಾ ಕೋಮಿನವರೂ ಜಾತಿ ಭೇದ ಮರೆತು ಹಬ್ಬ ಆಚರಿಸಿದರು.

ಸೋಮವಾರ ಅಲತ್ತೂರು ಗ್ರಾಮದ ದೇವಾಲಯದಿಂದ ಕಾಲ್ನಡಿಗೆ ಮೂಲಕ ಬಿದಿರಿನ ಕುಕ್ಕೆಯಲ್ಲಿ ಸಿದ್ದಪ್ಪಾಯಿ ಹಾಗೂ ಇತರೆ ದೇವರ ಉತ್ಸವಮೂರ್ತಿ ಕರೆತರಲಾಯಿತು. ನಂತರ ಗ್ರಾಮದ ಹೊರಭಾಗದಲ್ಲಿಟ್ಟು ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಮಲಿಂಗೇಶ್ವರ ದೇವಾಲಯದಲ್ಲಿ ಅನ್ನಸಂತರ್ಪಣೆ ನಡೆಸಲಾಯಿತು.

ಬೇಗೂರು ಸುತ್ತಮುತ್ತಲ ಗ್ರಾಮಗಳ ಭಕ್ತರು ಬಂದು ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಹರಕೆ ಸಲ್ಲಿಸಿದರು. ಮಂಗಳವಾರ ಹೊರವಲಯದಿಂದ ಉತ್ಸವಮೂರ್ತಿ ತಂದು ಗ್ರಾಮದಲ್ಲಿ ನಡೆಸಲಾಯಿತು. ನಂತರ ಗ್ರಾಮದ ಸಿದ್ದಪ್ಪಾಜಿ ಮತ್ತು ಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಬುಧವಾರ ರಾತ್ರಿ ಗ್ರಾಮದ  ಬೀದಿಗಳಲ್ಲಿ ವಾದ್ಯಗಳೊಂದಿಗೆ ಮೆರೆವಣಿಗೆ ನಡೆಸಲಾಯಿತು.

ವಿಶೇಷ ಪೂಜೆ
ಮದ್ದೂರು: ಉಪ್ಪಿನಕೆರೆ, ಚನ್ನಸಂದ್ರ, ನಗರಕೆರೆಗೆ ಸೇರಿದ  ಪಟಲಮ್ಮ ದೇಗುಲದಲ್ಲಿ  4ನೇ ಆಷಾಢ ಶುಕ್ರವಾರ  ಅಂಗವಾಗಿ ಜುಲೈ 29ರಂದು ವಿಶೇಷ ಪೂಜಾ ಮಹೋತ್ಸವ ನಡೆಯಲಿದೆ.

ತಂಬಿಟ್ಟಿನ ಆರತಿಯೊಂದಿಗೆ ಪೂಜಾ ಮೆರವಣಿಗೆ, ಪಂಚಾಮೃತ ಅಭಿಷೇಕ,  ಮಹಾಮಂಗಳಾರತಿ ನಡೆಯಲಿದೆ.
ಭಕ್ತರಿಗೆ ನಗರಕೆರೆ ಗ್ರಾಮಸ್ಥರಿಂದ  ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಭಾಗವಹಿಸ ಬೇಕೆಂದು ಗ್ರಾಮಸ್ಥರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT