ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧತೆ ಪೂರ್ಣ– ಮತದಾನ ಇಂದು

ಬೀದರ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ: ಬಿಗಿ ಬಂದೋಬಸ್ತ್‌
Last Updated 13 ಫೆಬ್ರುವರಿ 2016, 7:06 IST
ಅಕ್ಷರ ಗಾತ್ರ

ಬೀದರ್: ಬೀದರ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಯ್ಕೆ ಬಯಸಿ 10 ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕೆ ಇಳಿದಿದ್ದು, ಶನಿವಾರ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

ಕಾಂಗ್ರೆಸ್‌ನ ರಹೀಂ ಖಾನ್, ಬಿಜೆಪಿಯ ಪ್ರಕಾಶ್ ಖಂಡ್ರೆ,  ಜೆಡಿಎಸ್‌ನ ಎಂ.ಡಿ ಅಯಾಜಖಾನ್, ಬಿಎಸ್‌ಪಿಯ ಡಾ. ಮದನಾ ವೈಜಿನಾಥ, ನ್ಯಾಷನಲ್ ಡೆವೆಲೆಪ್‌ಮೆಂಟ್ ಪಾರ್ಟಿ ಎಂ.ಡಿ ಖಯಾಮೋದ್ದಿನ್,  ಪಕ್ಷೇತರ ಅಭ್ಯರ್ಥಿ ಗಳಾದ ಶಿವಕುಮಾರ, ಈಶ್ವರ ಕನೇರಿ, ಮಲ್ಲಪ್ಪ ನರಸಪ್ಪ, ಶಾಮಣ್ಣ  ಬಾವಗಿ, ಅಬ್ದುಲ್ ರಜಾಕ್ ಸೇರಿ ಒಟ್ಟು 10 ಮಂದಿ ಕಣದಲ್ಲಿದ್ದಾರೆ. 

ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಬಹಿರಂಗ ಪ್ರಚಾರ ಸಭೆ ಹಾಗೂ ರ್‌್ಯಾಲಿ ನಡೆಸುವ ಮೂಲಕ ಶಕ್ತಿ  ಪ್ರದರ್ಶಿಸಿ ಹೋಗಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಪೈಪೋಟಿಗೆ ಬಿದ್ದಂತೆ ಕ್ಷೇತ್ರದಲ್ಲಿ  ಪ್ರಚಾರ ನಡೆಸಿದ್ದರು.

ಮತದಾರರು: ಬೀದರ್ ವಿಧಾನಸಭಾ ಕ್ಷೇತ್ರದಲ್ಲಿ 1,05,418 ಪುರುಷರು ಹಾಗೂ 98,838 ಮಹಿಳೆಯರು ಸೇರಿ ಒಟ್ಟು 2,04,252 ಮತದಾರರಿದ್ದಾರೆ. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ  214 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗ ಳಲ್ಲಿ ಒಟ್ಟು  214  ಮತಕೇಂದ್ರ ಗಳ ಪೈಕಿ 148 ಅತಿಸೂಕ್ಷ್ಮ ಹಾಗೂ 66 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸ ಲಾಗಿದೆ.

ಈ ಚುನಾವಣೆಯಲ್ಲಿ ಬಳಸಲಾಗುತ್ತಿ ರುವ ಪ್ರತಿಯೊಂದು ಎಲೆಕ್ಟ್ರಾನಿಕ್ ಮತ ಯಂತ್ರವು ವಿಶಿಷ್ಟ ಸಂಖ್ಯೆ ಹೊಂದಿದೆ. ಇದು ಲೇಸರ್‌ನಿಂದ ಗುರುತಿಸಲ್ಪಟ್ಟ ಸರಣಿ ಸಂಖ್ಯೆ,ಮತಯಂತ್ರದ ಬಾರ್  ಕೋಡ್‌ಗೆ ಹೊಂದಾಣಿಕೆಯಾಗುತ್ತದೆ.

ಪ್ರತಿ ಮತದ ಸಮಯ ದಾಖಲು ಸೌಲಭ್ಯ, ಘಟನೆಗಳ ಟೈಮ್ ಲಾಗಿಂಗ್ ಸೌಲಭ್ಯ, ಕ್ಷೇತ್ರದ ಸಂಖ್ಯೆ, ಮತಗಟ್ಟೆ ಸಂಖ್ಯೆಯನ್ನು ದಾಖಲಿಸುವ ಸೌಲಭ್ಯ ಇದೆ. ಅಕ್ರಮ ಪತ್ತೆ ವೈಶಿಷ್ಟ್ಯ ಇದರಲ್ಲಿದೆ.  ಅಂಧ ವ್ಯಕ್ತಿಗಳು ಮತದಾನ ಮಾಡಲು ಅನುಕೂಲವಾಗುವಂತೆ ಬ್ಯಾಲೆಟ್ ಯುನಿಟ್ ಮೇಲೆ  ಬ್ರೈಲ್ ಫಲಕ ಅಳವ ಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಅನುರಾಗ ತಿವಾರಿ ತಿಳಿಸಿದ್ದಾರೆ.

ಬಿ.ವಿ.ಭೂಮರಡ್ಡಿ ಕಾಲೇಜಿನಲ್ಲಿ ಚುನಾವಣಾ ಸಿಬ್ಬಂದಿಗೆ ಮತ್ತೊಮ್ಮೆ ಮಾರ್ಗದರ್ಶನ ನೀಡುವ ಮೂಲಕ ಮತಯಂತ್ರಗಳನ್ನು ಅವರಿಗೆ ಒಪ್ಪಿಸಲಾ ಯಿತು. ಚುನಾವಣಾ ಸಿಬ್ಬಂದಿ ಶುಕ್ರವಾರ ಸಂಜೆಯೇ ಮತಗಟ್ಟೆಗಳಿಗೆ ತೆರಳಿ ಸಿದ್ಧತೆ ಮಾಡಿಕೊಂಡರು.

ಪೊಲೀಸ್ ಬಂದೋಬಸ್ತ್: ವಿಧಾನಸಭೆ ಉಪ ಚುನಾವಣೆ ಪ್ರಯುಕ್ತ  ಕ್ಷೇತ್ರದಾ ದ್ಯಂತ ಬಿಗಿ ಪೊಲೀಸ್  ಬಂದೋಬಸ್ತ್  ಮಾಡಲಾಗಿದೆ. ಗಡಿ ಸುರಕ್ಷತಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಜಿಲ್ಲಾ ಸಶಸ್ತ್ರ ಪಡೆ, ಜಿಲ್ಲಾ ಪೊಲೀಸರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಬಂದೋ ಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಚುನಾವಣೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾ ಗ್ರತಾ ಕ್ರಮ ವಾಗಿ ಅಪರಾಧ ಹಿನ್ನೆಲೆ 21 ಜನರನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳ ಮೇಲೆ ಹೆಚ್ಚು ನಿಗಾ ವಹಿಸಲಾಗಿದೆ.

ಎರಡು ವಾರಗಳ ಅವಧಿಯಲ್ಲಿ ಬೀದರ್‌ ವಿಧಾನಸಭಾ ಕ್ಷೇತ್ರದಲ್ಲಿ 789 ವಾಹನಗಳ ತಪಾಸಣೆ ಮಾಡಲಾಗಿದೆ. 165 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀ ಲಿಸಲಾಗಿದೆ.  26 ಪ್ರಕರಣ ದಾಖಲು ಮಾಡಲಾಗಿದೆ. ನಾಲ್ಕು ವಾಹನ ಜಪ್ತಿ ಮಾಡಿ 29.10 ಲೀಟರ್‌ ಅಕ್ರಮ ಮದ್ಯ, 7.80 ಲೀಟರ್‌ ಬಿಯರ್, 220 ಲೀಟರ್‌ ಕಳ್ಳಬಟ್ಟಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಆಡಳಿತ ತಿಳಿಸಿದೆ.

***
ಶಾಂತಿಯುತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತಗಟ್ಟೆಗಳ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ.
-ಅನುರಾಗ ತಿವಾರಿ,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT