ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪಿಎಂ ನಾಯಕ ಉಮಾನಾಥ್‌

Last Updated 21 ಮೇ 2014, 19:30 IST
ಅಕ್ಷರ ಗಾತ್ರ

ತಿರುಚನಾಪಳ್ಳಿ, ತಮಿಳುನಾಡು (ಪಿಟಿ­ಐ)­: ಹಿರಿಯ ಸಿಪಿಎಂ ನಾಯಕ ಆರ್‌. ಉಮಾನಾಥ್‌ (93) ಕೆಲ­ಕಾಲದ ಅಸ್ವ­ಸ್ಥ­ತೆಯ ನಂತರ ಬುಧ­ವಾರ ಇಲ್ಲಿನ ಆಸ್ಪತ್ರೆಯಲ್ಲಿ ನಿಧನ­ರಾದರು.

ಎಡಪಕ್ಷ ನಾಯ­ಕಿ­ಯಾಗಿದ್ದ ಪತ್ನಿ ಪಪ್ಪಾ ಮತ್ತು ಒಬ್ಬ ಪುತ್ರಿ ನೇತ್ರಾವತಿ ಈ ಹಿಂದೆಯೇ ಮೃತ­ಪಟ್ಟಿದ್ದಾರೆ.  ಪುತ್ರಿ­ಯ­ರಾದ ವಾಸುಕಿ ಮತ್ತು ನಿರ್ಮಲ­­ರಾಣಿ ಸಿಪಿಎಂ ಪಕ್ಷ­ದಲ್ಲಿ ಸಕ್ರಿ­ಯ­­­­­ರಾಗಿದ್ದಾರೆ. ಕಾರ್ಮಿಕ ಮುಖ­ಂಡ­ರಾಗಿದ್ದ ಉಮಾ­­­­­ನಾಥ್‌, ಕಮ್ಯು­­­ನಿಸ್ಟ್‌ ಐಕ್ಯರಂಗ ಸದಸ್ಯ­ರಾಗಿ ರಾಜಕೀಯ ಜೀವನ ಆರಂ­ಭಿ­ಸಿ­ದರು.

ನಂತರ ಸಿಪಿಎಂ ಪಾಲಿಟ್‌ ಬ್ಯೂರೋ ಸದಸ್ಯ, ಸಿಐಟಿ­ಯುನ ಅಖಿಲ ಭಾರ­ತೀಯ ಉಪ ಪ್ರಧಾನ ಕಾರ್ಯ­ದರ್ಶಿ ಆಗಿದ್ದರು. 1962 ಮತ್ತು 1967­ರಲ್ಲಿ ಪುದು­­ಕೊಟ್ಟೈ ಲೋಕ­ಸಭೆ ಕ್ಷೇತ್ರ­ದಿಂದ ಎರಡು ಬಾರಿ ಸಂಸದ­ರಾಗಿ ಆಯ್ಕೆ­ಯಾಗಿದ್ದರು. ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲುಶಿಕ್ಷೆ ಅನುಭವಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT