ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪಿಪಿ ಸಭೆ ನಾಳೆ

Last Updated 22 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾಂಗ್ರೆಸ್‌ ಸಂಸ­ದೀಯ ಪಕ್ಷದ (ಸಿಪಿಪಿ) ಸಭೆ ಶನಿವಾರ (ಮೇ 24­) ಇಲ್ಲಿ ನಡೆಯಲಿದ್ದು, ಇದರ ಅಧ್ಯಕ್ಷೆ­­ಯಾಗಿ ಸೋನಿಯಾ ಗಾಂಧಿ ಪುನ­ರಾಯ್ಕೆ ಆಗುವ ನಿರೀಕ್ಷೆಯಿದೆ.

ಇದೇ ಸಂದರ್ಭದಲ್ಲಿ ಪಕ್ಷದ ಲೋಕ­ಸಭಾ ಮತ್ತು ರಾಜ್ಯಸಭಾ ನಾಯಕರನ್ನು ಆರಿಸಲಾಗುತ್ತದೆೆ. ಕಾಂಗ್ರೆಸ್‌ಗೆ ಲೋಕ­ಸಭೆ­ಯಲ್ಲಿ ಅಗತ್ಯ 55 ಸ್ಥಾನ ಲಭ್ಯವಿಲ್ಲದ ಕಾರಣ  ವಿರೋಧ­ಪಕ್ಷದ ನಾಯಕನ ಆಯ್ಕೆ ಪ್ರಶ್ನಾರ್ಥಕ­ವಾಗಿದೆ.

ಸೋನಿಯಾ ರಾಜೀನಾಮೆ: ಈ ಮಧ್ಯೆ, ಕೇಂದ್ರ ಸಂಸ್ಕೃತಿ ಸಚಿವಾಲ­ಯದಡಿ ಬರುವ ನೆಹರೂ ಸ್ಮಾರಕ ವಸ್ತು ಸಂಗ್ರ­ಹಾ­ಲಯ ಮತ್ತು ಗ್ರಂಥಾಲಯದ ಸದಸ್ಯತ್ವ ಹಾಗೂ ನವೆಂಬರ್‌ 24ರಂದು ನಡೆಯುವ ನೆಹರೂರವರ 125ನೇ ಜನ್ಮ­ದಿನೋತ್ಸವ ಆಚರಣಾ ಸಮಿತಿ ಸದಸ್ಯ­ತ್ವಕ್ಕೆ ಸೋನಿಯಾ ಗಾಂಧಿ ರಾಜೀ­ನಾಮೆ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ರಾಜೀನಾಮೆ ನಿರಾಕರಣೆ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಹಿನ್ನೆಲೆ­ಯಲ್ಲಿ ಅಸ್ಸಾಂ ಮುಖ್ಯಮಂತ್ರಿ ತರುಣ್‌ ಗೊಗೊಯ್‌ ರಾಜೀನಾಮೆ ನೀಡಬೇಕಿಲ್ಲ ಎಂದು ಕಾಂಗ್ರೆಸ್‌  ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿ­ದ್ದಾರೆ. ಸೋನಿಯಾ ಮತ್ತು ರಾಹುಲ್‌ ಗಾಂಧಿ ಅವರನ್ನು ಗೊಗೊಯ್‌ ಗುರು­ವಾರ ಭೇಟಿಯಾಗಿದ್ದು, ಜೂನ್‌ 1ರ ನಂತರ ಸಂಪುಟ ಪುನರ್‌ರಚಿಸಲಿದ್ದಾರೆ. ಎಂದು ಕೃಷಿ ಸಚಿವ ನಿಲೊಮಣಿ ಸೇನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT