ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಸ್‌ಇ ಫಲಿತಾಂಶ

Last Updated 19 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಚೆನ್ನೈ ಮತ್ತು ತಿರುವನಂತಪುರ ವಿಭಾಗದ 10ನೇ ವರ್ಗದ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ. ಚೆನ್ನೈ ವಿಭಾಗದಲ್ಲೇ ಕರ್ನಾಟಕದ ಸಿಬಿಎಸ್‌ಇ ಶಾಲೆಗಳು ಬರಲಿವೆ.

ದೇಶದ ಇತರ ಭಾಗಗಳ ವಿದ್ಯಾರ್ಥಿ­ಗಳ ಫಲಿತಾಂಶ­ವನ್ನು ಮಂಗಳವಾರ ಪ್ರಕಟಿಸಲಾಗುವುದು ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.
ಸಿಬಿಎಸ್‌ಇ ವೆಬ್‌ಸೈಟ್ ಮೂಲಕ­ವಲ್ಲದೆ  ಮೊಬೈಲ್‌ನಲ್ಲಿ ಎಸ್ಎಂಎಸ್ ಮೂಲಕವೂ ಫಲಿತಾಂಶ ತಿಳಿದು­ಕೊಳ್ಳಬಹುದಾಗಿದೆ.
ಬಹುತೇಕ ಎಲ್ಲಾ ಖಾಸಗಿ ಮೊಬೈಲ್ ಜಾಲಗಳಲ್ಲೂ ಎಸ್‌ಎಂಎಸ್‌ ಮೂಲಕ ಫಲಿತಾಂಶ ತಿಳಿದುಕೊಳ್ಳಬಹುದಾಗಿದೆ.

ಎಸ್ಎಂಎಸ್ ಮೂಲಕ ಫಲಿತಾಂಶ ತಿಳಿಯಲು ‘ ಸಿಬಿಎಸ್‌ಇ10 ಎಂದು ಬರೆದ ನಂತರ ರೋಲ್ ನಂಬರ್‌ ಬರೆದು 57766 (ಬಿಎಸ್‌­ಎನ್‌ಎಲ್), 58888111 (ಟಾಟಾ ಡೊಕೊಮೊ, ಏರ್‌ಸೆಲ್‌, ವೊಡಾ­ಫೋನ್‌ ಮತ್ತು ರಿಲಾಯನ್‌್ಸ) ಮತ್ತು 5207011 (ಏರ್‌ಟೆಲ್)ಗೆ ಸಂದೇಶ ಕಳುಹಿಸಿದರೆ ಫಲಿತಾಂಶ ತಿಳಿಯುತ್ತದೆ. ಈ ಸೇವೆಗೆ ಕೇವಲ ಒಂದು ರೂಪಾಯಿ ತಗುಲುತ್ತದೆ.

ರಾಷ್ಟ್ರೀಯ ಮಾಹಿತಿ ಕೇಂದ್ರ ಮಾಡಿ­ರುವ ವ್ಯವಸ್ಥೆಯಲ್ಲಿ ಧ್ವನಿ ಸಂವಹನದ ಮೂಲಕವೂ ಫಲಿತಾಂಶ ತಿಳಿದು­ಕೊಳ್ಳಬಹುದಾಗಿದೆ.
ದೆಹಲಿಯ ಹೊರಗಿನ ಬಿಎಸ್­ಎನ್ಎಲ್ ಗ್ರಾಹಕರು ಐವಿಆರ್ಎಸ್‌ ಮೂಲಕ ಫಲಿತಾಂಶ ಪಡೆಯುವು­ದಾದರೆ 1255536 ಸಂಖ್ಯೆಗೆ ಕರೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT